• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Me Too ಪ್ರಕರಣ : ಶ್ರುತಿ ಹರಿಹರನ್ ಸಲ್ಲಿಸಿದ್ದ ಅರ್ಜಿ ವಜಾ

|
   Me Too ಪ್ರಕರಣ : ಶ್ರುತಿ ಹರಿಹರನ್ ಸಲ್ಲಿಸಿದ್ದ ಅರ್ಜಿ ವಜಾ | Oneindia Kannada

   ಬೆಂಗಳೂರು, ಆಗಸ್ಟ್ 23 : ನಟ ಅರ್ಜುನ್ ಸರ್ಜಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಜಾಗೊಳಿಸಲು ನಟಿ ಶ್ರುತಿ ಹರಿಹರನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

   ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಶ್ರುತಿ ಹರಿಹರನ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ನಟ ಅರ್ಜುನ್ ಸರ್ಜಾ ಪರವಾಗಿ ಧ್ರುವ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.

   ಒಟ್ಟಿಗೆ ಮಜಾ ಮಾಡೋಣ ಎಂದು ಕರೆದ ಸರ್ಜಾ: ಶ್ರುತಿ ಹರಿಹರನ್

   ಮೀ - ಟೂ ಆರೋಪದ ಕುರಿತು ಸಾಮಾಜಿಕ ತಾಲತಾಣದಲ್ಲಿ ವಿವರ ಪ್ರಕಟಿಸದಂತೆ ತಡೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದ ಧ್ರುವ ಸರ್ಜಾ, ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ಸಹ ದಾಖಲಿಸಿದ್ದರು.

   ಅರ್ಜುನ್ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಸಂಚು : ಶ್ರುತಿ ವಿರುದ್ಧ ಕ್ರಿಮಿನಲ್ ದೂರು

   ತನ್ನ ವಿರುದ್ಧ ಸಲ್ಲಿಕೆಯಾಗಿರುವ ಮಾನನಷ್ಟ ಮೊಕದ್ದಮೆ ವಜಾಗೊಳಿಸಬೇಕು ಎಂದು ಶ್ರುತಿ ಹರಿಹರನ್ ಸೆಷನ್ಸ್ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಧೀಶೆ ಸುವರ್ಣ ಮಿರ್ಜಿ ವಜಾಗೊಳಿಸಿದ್ದಾರೆ.

   ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್‌ಗೆ ಶ್ರುತಿ ಹರಿಹರನ್ ಅರ್ಜಿ

   ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟ-ಟೂ ಆರೋಪ ಮಾಡಿದ್ದರು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸರ್ಜಾ ವಿರುದ್ಧ ದೂರು ನೀಡಿದ್ದರು. ಈ ದೂರಿನ ಬಗ್ಗೆ ಎಫ್ಐಆರ್ ದಾಖಲಿಸಲು ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

   ಸೆಷನ್ಸ್ ನ್ಯಾಯಾಲಯ ಶ್ರುತಿ ಹರಿಹರನ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವುದರಿಂದ ಮಾನನಷ್ಟ ಮೊಕದ್ದಮೆ ವಿಚಾರಣೆ ಮುಂದುವರೆಯಲಿದೆ.

   English summary
   Session court of Bengaluru quashed the petition filed by Sruthi Hariharan in the Me to case. Sruthi Hariharan seeks quash of defamation case filed by Arjun Sarja against her.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X