Director Guruprasad: 'ಗುರು ಬಿಜೆಪಿ ವಿರೋಧಿ, ಎಡಪಂಥೀಯ ವ್ಯಕ್ತಿ': ಘಟನೆ ಬಳಿಕ ನಟ ಜಗ್ಗೇಶ್ ಹೇಳಿದ್ದೇನು
ಬೆಂಗಳೂರು, ನವೆಂಬರ್ 04: ಕನ್ನಡ ಚಿತ್ರರಂಗದ ಕ್ರಿಯೇಟಿವ್ ನಿರ್ದೇಶಕರಾದ ಮಠ ಖ್ಯಾತಿ ಗುರುಪ್ರಸಾದ್ ಅವರು ತಮ್ಮ ಮನೆಯಲ್ಲಿ ನೇಣಿಗೆ ಕೊರೊಡಿದ ಸುದ್ದಿ ಕಲಾವಿದರನ್ನು ಕಣ್ಣೀರಲ್ಲಿ ಮುಳುಗಿಸಿದೆ. ಅವರ ಸಾವಿನ ಬೆನ್ನಲ್ಲೆ, ಅವರೊಂದಿಗಿನ ಒಡನಾಟ, ಮೃತ ಗುರುಪ್ರಸಾದ್ ಅನಾರೋಗ್ಯ, ವ್ಯಕ್ತಿತ್ವ ಕುರಿತು ಮಾತನಾಡಿರುವ ನಟ ಮತ್ತು ಸಂಸದ ಜಗ್ಗೇಶ್ ಅವರು ಕೆಲ ಮಹತ್ವ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಗುರುಪ್ರಸಾದ್ ಎಡಪಂಥಿಯ ವ್ಯಕ್ತಿ ಎಂದು ಅವರು ತಿಳಿಸಿದ್ದಾರೆ.
ಒಳ್ಳೆಯ ಬರಹಗಾರ, ನಿರ್ದೇಶಕ ಎಂದು ಹೇಳಿರುವ ನಟ ಜಗ್ಗೇಶ್ ಅವರು ಮೃತ ನಿರ್ದೇಶಕ ಗುರುಪ್ರಸಾದ್ ಅವರ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆಗುತ್ತಿವೆ.

ಮಾಧ್ಯಮಗಳ ಎದುರು ಮಾತನಾಡಿರುವ ನಟ ಜಗ್ಗೇಶ್ ಅವರು, ಗುರುಪ್ರಸಾದ್ ಅವರು ಎಡಪಂಥೀಯ ವಿಚಾರಧಾರೆ ಹೊಂದಿದವರಾಗಿದ್ದರು. ಅವರು ಬಿಜೆಪಿ ವಿರೋಧದ ನಿಲುವು ಹೊಂದಿದ್ದರು ಎಂಬುದನ್ನು ಅವರ ಒಡನಾಟದಲ್ಲಿ ನಾನು ಗಮನಿಸಿದ್ದೇನೆ ಎಂದು ಒಂದಷ್ಟು ಆರೋಪಗಳನ್ನು ಅವರು ಮಾಡಿದ್ದಾರೆ.
ರಂಗನಾಯಕ ವೇಳೆ ಮನಸ್ಥಾಪ ಉಂಟಾಯಿತು: ಜಗ್ಗೇಶ್
'ಮಠ' ಹಾಗೂ 'ಎದ್ದೇಳು ಮಂಜುನಾಥ್' ಸಿನಿಮಾ ಜಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಷ್‌ನಲ್ಲಿ ಬಂದ್ ಹಿಟ್ ಸಿನಿಮಾಗಳು. ಅದಾದ ಬಳಿಕ ರಂಗನಾಯಕ ಸಿನಿಮಾ ವೇಳೆ ಅವರಿಬ್ಬರ ಮಧ್ಯೆ ಒಂದಷ್ಟು ಮುನಿಸು ಇತ್ತು ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಜಗ್ಗೇಶ್ ಅವರು, ತಮ್ಮ ಮರಿಯಾದೆ ತೆಗೆಯುವುದಾಗಿ ಹೇಳಿದ್ದರು. ಗುರು ತಮ್ಮ ವಿರುದ್ಧ ಹುನ್ನಾರ ಮಾಡಿದ್ದರು. ರಂಗನಾಯಕ ಸಿನಿಮಾ ಚಿತ್ರೀಕರಣ ವೇಳೆ ಒಂದಷ್ಟು ಸಮಸ್ಯೆಗಳು ಉಂಟಾಗಿದ್ದವು.

ಚಿತ್ರೀಕರಣ ವೇಳೆ ಒಂದಷ್ಟು ಮನಸ್ಥಾಪಗಳು ಉಂಟಾಗಿದ್ದು ನಿಜ. ಗುರು ಜೀನವ ಗೊಂದಲಮಯವಾಗಿತ್ತು. ಅವರೊಂದಿಗೆ ಮೊದಲ ಎರಡು ಸಿನಿಮಾ ಮಾಡಿದ್ದು, ದೊಡ್ಡ ಹಿಟ್ ಆಗಿದ್ದವು. ಅದನ್ನು ನಾನು ಯಾವತ್ತಿಗೂ ಮರೆಯೊದಿಲ್ಲ. ಕಲಾವಿದನಾಗಿ ಅವರನ್ನು ತುಂಬಾ ಗೌರವಿಸುತ್ತಿದ್ದೆ. ಒಮ್ಮೆ ಕುಡಿದು ಹೆಚ್ಚು ಮಾತನಾಡಿದ್ದರು. ಮರು ದಿನ ಕರೆ ಮಾಡಿ ಕ್ಷಮೆ ಕೇಳಿದ್ದರು.
ಗುರುಪ್ರಸಾದ್ ಬಿಜೆಪಿ ವಿರೋಧಿ: ಜಗ್ಗೇಶ್
ಗುರು ಸಿನಿಮಾಗಳನ್ನು ತುಂಬಾ ಪ್ರೀತಿಸುತ್ತಿದ್ದ. ಅವರೊಂದಿಗಿನ ಒಡನಾಟದಲ್ಲಿ ನನಗೆ ಗೊತ್ತಾಗಿದ್ದೇನೆಂದರೆ, ಅವರು ಎಡಪಂಥೀಯ ವಿಚಾರಗಳನ್ನು ಹೊಂದಿದ್ದರು. ಬಿಜೆಪಿ ವಿರೋಧಿಯಾಗಿದ್ದರು ಎಂದು ಅವರ ನಿಧನಾನಂತರ ಜಗ್ಗೇಶ್ ಅವರು ಆರೋಪಿಸಿದ್ದಾರೆ.
ರಂಗನಾಯಕ ಸಿನಿಮಾ ವೇಳೆ 'ಇವನ (ಜಗ್ಗೇಶ್) ಮಾನ ಮರಿಯಾದೆ ಹೆಂಗೆ ಹರಾಜು ಹಾಕುವೆ ನೋಡುತ್ತೀರಿ' ಎಂದು ನನ್ನ ಕುರಿತು ಗುರುಪ್ರಸಾದ್ ಹೇಳಿಕೊಂಡಿದ್ದರು. ಈ ಬಗ್ಗೆ ನನಗೆ ತಿಳಿದು ಏನಪ್ಪಾ? ಇದು ಎಂದು ಭಯಗೊಂಡಿದ್ದೆ.
ಚಿತ್ರೀಕರಣ ಮುಗಿದ ಮೇಲೆ ನನಗೆ ಸಿನಿಮಾ ತೋರಿಸು ಎಂದರೆ, ಆತ ತೋರಿಸಲಿಲ್ಲ. ಸಿನಿಮಾ ತೋರಿಸುತ್ತಾ ಕೂರುವುದಿಲ್ಲ ಎಂದಿದ್ದ. ಆದಾದ ಬಳಿಕ ಸಿನಿಮಾ ರಿಲೀಸ್ ಆಯ್ತು. ಈವರೆಗೂ ಆಗದಷ್ಟು ಅವಮಾನ, ಆ ಸಿನಿಮಾ ರಿಲೀಸ್ ಆದ ಬಳಿಕ ಆಯಿತು ಎಂದು ಜಗ್ಗೇಶ್ ಅವರು ಹೇಳಿಕೊಂಡಿದ್ದಾರೆ.
ಮನುಷ್ಯನಾದವನಿಗೆ ಶಿಸ್ತು, ತಾಳ್ಮೆ ಮುಖ್ಯ. ತಾಳ್ಮೆಯಿಂದ ಇದ್ದರೆ, ಎಲ್ಲರಿಗೂ ಯಶಸ್ಸು ಸಿಗುತ್ತದೆ ಎಂದು ಗುರುಪ್ರಸಾದ್ ವೃತ್ತಿ ಜೀವನ, ವೈಯಕ್ತಿ ವಿಚಾರ, ವ್ಯಕ್ತಿತ್ವ ಕುರಿತು ಒಂದಷ್ಟು ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.
ಗುರುಪ್ರಸಾದ್ ಖಾಯಿಲೆ ಬಗ್ಗೆ ಜಗ್ಗೇಶ್ ಹೇಳಿದ್ದೇನು?
ನಿರ್ದೇಶಕ ಗುರುಪ್ರಸಾದ್ ಅವರಿಗೆ ಮೈಯೆಲ್ಲ ಕಡಿತ ಬರುವ ಕಾಯಿಲೆ ಇತ್ತು. ಜೊತೆಗೆ ಕೂತಾಗ ಕರೆದುಕೊಳ್ಳುತ್ತಿದ್ದರು. ಮೈಯೆಲ್ಲ ರಕ್ತೆ, ಕೀವು ಬರುತ್ತಿತ್ತು. ಅವರು ಕೆಲವೊಮ್ಮೆ ನಮ್ಮ ತಟ್ಟೆಗೆ ಕೈ ಹಾಕಿಬಿಡುತ್ತಿದ್ದರು. ಹೀಗಾಗಿ ನಾವು ಅವರಿಗೆ ಕಾಣದ ದೂರು ಕುಳಿತು ಊಟ ಮಾಡುತ್ತಿದ್ದೆ. ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರೂ ಅವರು ನಮ್ಮ ಮಾತು ಕೇಳುತ್ತಿರಲಿಲ್ಲ. ಅವರು ಸಾಲ ಮಾಡಿಕೊಂಡಿದ್ದರು. ಮಾನಸಿಕವಾಗಿ ಕುಗ್ಗಿಹೋಗಿದ್ದರು ಎಂದು ತಿಳಿಸಿದ್ದಾರೆ.
ಗುರು ಟೀಕಿಸಿದ್ದ ಜಗ್ಗೇಶ್ ವಿರುದ್ಧ ಲಾಯರ್ ಜಗದೀಶ್ ಕಿಡಿ
ಗುರುಪ್ರಸಾದ್ ಸಾವಿನ ಬಳಿಕ ಹೀಗೆ ಹೇಳಿಕೆ ನೀಡಿದ್ದಕ್ಕೆ ನಟ ಜಗ್ಗೇಶ್ ಒಂದಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಅವರು ನಟ ಜಗ್ಗೇಶ್ ವಿರುದ್ಧ ಏಕವಚನದಲ್ಲಿಯೇ ಕಿಡಿ ಕಾರಿದ್ದಾರೆ. ಸತ್ತ ವ್ಯಕ್ತಿಯ ಬಗ್ಗೆ ವಿಶ್ಲೇಷಣೆ ಮಾಡಿ, ವಿಕೃತ ಮರೆಯು ನೀನು ಮನುಷ್ಯನಾ? ಇದೇನಾ ನಿನ್ನ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಗುರುಪ್ರಸಾದ್‌ಗೆ ರಕ್ತ ಬರುತ್ತಿತ್ತು, ಕೀವು ಬರುತ್ತಿತ್ತು ಎಂದು ಸತ್ತವರ ಬಗ್ಗೆ ಮಾತನಾಡುವ ನಿನ್ನ ಸಂಸ್ಕೃತಿ ಇದೇನಾ ಎಂದು ಅವರು ಪ್ರಶ್ನಿಸಿದ್ದಾರೆ. ಈ ಕುರಿತು ಲಾಯರ್ ಜಗದೀಶ್ ಅವರು ಹಂಚಿಕೊಂಡ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications