ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂನ್ 28, 29ರಂದು ಮಾಸ್ತಿಕಲ್ಲು ನಾಟಕ ಪ್ರದರ್ಶನ

|
Google Oneindia Kannada News

ಬೆಂಗಳೂರು, ಜೂ.27 : ಸತೀ ಪದ್ಧತಿಯ ಶೋಷಣೆಯ ನೋವುಗಳ ನೋಟವನ್ನು ತೆರೆದಿಡುವ 'ಮಾಸ್ತಿಕಲ್ಲು' ನಾಟಕದ 16ನೇ ಪ್ರದರ್ಶನ ಜೂನ್ 28 ಮತ್ತು 29ರಂದು ನಡೆಯಲಿದೆ. ಬಿ.ಎಂ.ಗಿರಿರಾಜ್ ಈ ನಾಟಕವನ್ನು ರಚಿಸಿ, ನಿರ್ದೇಶಿಸಿದ್ದಾರೆ.

ಜೂನ್ 28 ಭಾನುವಾರ ಸಂಜೆ 4 ಮತ್ತು 7.30ಕ್ಕೆ ಹಾಗೂ 29 ಸೋಮವಾರ ಸಂಜೆ 7.30ಕ್ಕೆ ಕೆಂಗಲ್ ಹನುಮಂತಯ್ಯ ಕಲಾಸೌಧ, ರಾಮಾಂಜನೇಯ ದೆವಸ್ಥಾನದ ಆವರಣ, ಹನುಮಂತನಗರದಲ್ಲಿ ನಾಟಕ ಪ್ರದರ್ಶನವಿದೆ.

drama

ಸತೀ ಪದ್ಧತಿಯ ಶೋಷಣೆಯ ನೋವುಗಳ ನೋಟವನ್ನು ತೆರೆದಿಡುವ ಈ ನಾಟಕ, ರಾಜಾಸ್ಥಾನದಲ್ಲಿ ನಡೆದ ರೂಪಾ ಕನ್ವರ್ ಎಂಬುವರ ಸತೀ ಸಹಗಮನದ ಕಥೆಗೆ ಹತ್ತಿರವಾಗಿದ್ದರೂ, ಡಾ. ಶಿವರಾಮ ಕಾರಂತರ 'ಸರಸಮ್ಮನ ಸಮಾಧಿ' ಕಾದಂಬರಿಯ ಪ್ರೇರಣೆಯಿಂದಲೂ ರಚಿಸಲಾಗಿದೆ.

ಬಿ.ಎಂ.ಗಿರಿರಾಜ್ ಅವರು ಇದನ್ನು ರಚಿಸಿ, ನಿರ್ದೇಶಿಸಿದ್ದಾರೆ. ನಾಟಕದ ಪ್ರಧಾನ ಪಾತ್ರಧಾರಿಯಾದ ಚಂದ್ರಯ್ಯನ ಜೀವನೋದ್ದೇಶವಾದ ಪ್ರೇತಗಳ ಅನ್ವೇಷಣೆ ಅವನನ್ನು ಹಲವು ಮಾನವಾತೀತ ಹಾಗು ರೋಮಾಂಚನಕಾರಿ ಅನುಭವ ಹಾಗು ಸನ್ನಿವೇಶಗಳಿಗೆ ಗುರಿಪಡಿಸುತ್ತದೆ.

ಪ್ರೀತಿ, ತ್ಯಾಗಗಳ ಕಥೆಗಳಿಗೆ ಸಾಕ್ಷಿಯಾಗಿ ನಿಂತಿರುವ ಹಲವು ಮಾಸ್ತಿ ಕಲ್ಲುಗಳ ಪ್ರತೀಕವಾಗಿ ನಾಟಕದ ಹೆಸರನ್ನು 'ಮಾಸ್ತಿಕಲ್ಲು' ಎಂದು ಇಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ 725998222/333, http://www.prakasamtrust.org/mk

ರಂಗಶಂಕರದಲ್ಲಿ ಜುಲೈ 1ರಂದು ನಾಟಕ ಪ್ರದರ್ಶನ : ಜೆ.ಪಿ.ನಗರದಲ್ಲಿರುವ ರಂಗಶಂಕರದಲ್ಲಿ ಶ್ರೀನಿವಾಸ ವೈದ್ಯ ಮತ್ತು ವಸುಧೇಂದ್ರ ಅವರ ಸಣ್ಣ ಕಥೆಗಳ ಆಧಾರಿತ 'ಶ್ರದ್ಧ ಮತ್ತು ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳು' ನಾಟಕ ಪ್ರದರ್ಶನವಿದೆ. ದಿನಾಂಕ : ಜುಲೈ 1, ಬುಧವಾರ. ಸಮಯ ಸಂಜೆ 7.30. ಆನ್ ಲೈನ್‌ ಮೂಲಕ ಟಿಕೆಟ್ ಬುಕ್ ಮಾಡಲು ಕ್ಲಿಕ್ ಮಾಡಿ.

English summary
Masti Kallu play show in Bengaluru on June 28 and 29. Play written and directed by BM Giriraj. This love story is inspired from Shivarama Karanth's epic novel 'Sarasammana Samadhi'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X