ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

28 ದಿನದಲ್ಲಿ 2.57 ಕೋಟಿ ರೂ. ದಂಡ ವಸೂಲಿ ಮಾಡಿದ ಬೆಂಗಳೂರು ಪೊಲೀಸರು!

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ದಂಡ ವಸೂಲಿಗೆ ಪೊಲೀಸ್ ಇಲಾಖೆ ನೀಡಿದ್ದ ಟಾರ್ಗೆಟ್ ರೀಚ್ ಆಗಿದೆ! ಕೇವಲ 28 ದಿನದಲ್ಲಿ ಮಾಸ್ಕ್ ಹಾಕದ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಜನ ಸಾಮಾನ್ಯರ ಜೇಬಿನಿಂದ ಪೊಲೀಸರು ಬರೋಬ್ಬರಿ 2.57 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ. ಇನ್ನು 1 ಲಕ್ಷ 7 ಸಾವಿರ ಕೇಸು ದಾಖಲಿಸಿದ್ದಾರೆ. ಕೊರೊನಾ ಆತಂಕದ ನಡುವೆಯೂ ನಿಯಮ ಉಲ್ಲಂಘನೆ ಮಾಡಿದರ ವಿರುದ್ಧ ಪೊಲೀಸರು ದಂಡ ಪ್ರಯೋಗ ನಡೆಸಿದ ಪೂರ್ಣ ವಿವರ ಇಲ್ಲಿದೆ ನೋಡಿ !

ಕಷ್ಟ ಕಾಲದಲ್ಲಿ ದಂಡ ಮುಖ್ಯವೇ

ಕಷ್ಟ ಕಾಲದಲ್ಲಿ ದಂಡ ಮುಖ್ಯವೇ

ಕೊರೊನಾ ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಬೆಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರನ್ನು ದಂಡ ವಸೂಲಿಗೆ ಸಜ್ಜುಗೊಳಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಪೊಲಿಸ್ ಠಾಣೆಗಳಿಗೆ ದಿನಕ್ಕೆ ಐವತ್ತು ಪ್ರಕರಣ ಟಾರ್ಗೆಟ್ ನೀಡಲಾಗಿತ್ತು. ಅದರಂತೆ ಮಾಸ್ಕ್ ಇಲ್ಲದೇ ಓಡಾಡುವರ ವಿರುದ್ಧ ದಂಡ ಪ್ರಯೋಗ ಆರಂಭಿಸಿದ್ದರು. ಸಾಮಾಜಿಕ ಅಂತರ ಕಾಪಾಡದವರ ವಿರುದ್ಧವೂ ರಶೀದಿ ಹರಿಯುವ ಅಭಿಯಾನಕ್ಕೆ ಬೆಂಗಳೂರು ಪೊಲೀಸರು ಚಾಲನೆ ನೀಡಿದ್ದರು. ದಂಡ ವಸೂಲಿ ಟಾರ್ಗೆಟ್ ಇಪ್ಪತ್ತು ಎಂಟು ದಿನದಲ್ಲಿಯೇ ರೀಚ್ ಆಗಿರುವುದು ಪೊಲೀಸ್ ಇಲಾಖೆ ಗುಪ್ತಚರ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ಈ ಸತ್ಯ ಹೊರ ಬಿದ್ದಿದೆ.

ಮಾಸ್ಕ್ ಇಲ್ಲದವರ ವಿರುದ್ಧ ದಂಡ ಪ್ರಯೋಗ

ಮಾಸ್ಕ್ ಇಲ್ಲದವರ ವಿರುದ್ಧ ದಂಡ ಪ್ರಯೋಗ

ರಾಜಧಾನಿ ಬೆಂಗಳೂರಿನಲ್ಲಿ ಮಾಸ್ಕ್ ಹಾಕಿಲ್ಲದವರ ಮಾತ್ರವಲ್ಲ, ಸರಿಯಾಗಿ ಮಾಸ್ಕ್ ಹಾಕದವರ ವಿರುದ್ಧವೂ ಈ ಸಲ ದಂಡ ಪ್ರಯೋಗ ಮಾಡಲಾಗಿದೆ. ಕಳೆದ 28 ದಿನದಲ್ಲಿ ಎಂಟು ಪೊಲೀಸ್ ವಿಭಾಗದಿಂದ 98,671 ಪ್ರಕರಣ ದಾಖಲಿಸಲಾಗಿದೆ. ಮಾಸ್ಕ್ ದಂಡದಿಂದಲೇ 2.37 ಕೋಟಿ ರೂಪಾಯಿ ದಂಡವನ್ನು ಬೆಂಗಳೂರು ಪೊಲೀಸರು ವಸೂಲಿ ಮಾಡಿದ್ದಾರೆ. ಅದರಲ್ಲಿ ದಕ್ಷಿಣ ವಿಭಾಗದ ಪೊಲೀಸರು 19,680 ಕೇಸು ದಾಖಲಿಸಿ 47 ಲಕ್ಷ ರೂ. ದಂಡ ಸಂಗ್ರಹ ಮಾಡುವ ಮೂಲಕ ಮೊದಲ ಸ್ಥಾನ ಗಳಿಸಿದ್ದಾರೆ.

ಪಶ್ಚಿಮ ವಿಭಾಗದ ಪೊಲೀಸರು 18 ಸಾವಿರ ಪ್ರಕರಣ ದಾಖಲಿಸಿ 46 ಲಕ್ಷ ರೂ. ದಂಡ ಸಂಗ್ರಹ ಮಾಡಿ ಎರಡನೇ ಸ್ಥಾನ ಗಳಿಸಿದ್ದಾರೆ. ವೈಟ್‌ಫೀಲ್ಡ್ ವಿಭಾಗ ಮತ್ತು ಕೇಂದ್ರ ವಿಭಾಗದ ಪೊಲೀಸರು ಕಡಿಮೆ ಕೇಸು ದಾಖಲಿಸಿ ಕಡಿಮೆ ದಂಡ ಸಂಗ್ರಹ ಮಾಡುವ ಮೂಲಕ ಜನರ ಕಷ್ಟವನ್ನು ಅರಿತುಕೊಂಡು ಕಾರ್ಯ ನಿರ್ವಹಿಸಿದಂತೆ ಮೇಲ್ನೋಟಕ್ಕೆ ಕಾಣುತ್ತದೆ. ದಂಡ ಪ್ರಯೋಗದಿಂದ ಕೊರೊನಾ ನಿಯಂತ್ರಣಕ್ಕೆ ಬರಲ್ಲ ಎಂಬುದು ಗೊತ್ತು. ಜನರಲ್ಲಿ ಜಾಗೃತಿ ಮೂಡಿಸಿ ಎಚ್ಚರಿಸುವ ಭಾಗವಾಗಿ ಪರಿಚಯಿಸಿರುವ ದಂಡ ಪ್ರಯೋಗದಿಂದ ಸರ್ಕಾರದ ಖಜಾನೆಗೆ ಕೋಟಿ ಕೋಟಿ ತುಂಬುತ್ತಿದೆ.

ಸಾಮಾಜಿಕ ಅಂತರ ಉಲ್ಲಂಘನೆ

ಸಾಮಾಜಿಕ ಅಂತರ ಉಲ್ಲಂಘನೆ

ಇನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ವೂ ಪೊಲೀಸರು ದಂಡ ಪ್ರಯೋಗ ಮಾಡಿದ್ದಾರೆ. ಎಂಟು ಪೊಲೀಸ್ ವಿಭಾಗದಿಂದ 8691 ಕೇಸು ದಾಖಲಿಸುವ ಮೂಲಕ 19 ಲಕ್ಷ ರೂ. ದಂಡದ ಮೊತ್ತವನ್ನು ಸಂಗ್ರಹಿಸಲಾಗಿದೆ. ಈ ಮೂಲಕ ಬೆಂಗಳೂರು ಪೊಲೀಸರು ಸರ್ಕಾರದ ಖಜಾನೆಗೆ ದಂಡದ ರೂಪದಲ್ಲಿ ಕೈಯಲ್ಲಾದ ಕೊಡುಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮಾಸ್ಕ್ ಇಲ್ಲದೇ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಹೋಲಿಕೆ ಮಾಡಿದರೆ ಸಾಮಾಜಿಕ ಅಂತರ ಉಲ್ಲಂಘನೆ ಮಾಡಿರುವ ಪ್ರಕರಣಗಳು ತೀರಾ ಕಡಿಮೆ. ಇನ್ನೂ ಸಹ ದಂಡ ಪ್ರಯೋಗ ಮುಂದುವರೆಯಲಿದ್ದು, ಮುಂದಿನ ತಿಂಗಳಾಂತ್ಯಕ್ಕೆ ಸರಾಸರಿ ಐದು ಕೋಟಿ ರೂ. ದಂಡ ವಸೂಲಿಯಾದರೂ ಅಚ್ಚರಿ ಪಡಬೇಕಿಲ್ಲ.

ವಾಹನ ಜಪ್ತಿ ಆಗಿದ್ದು ಎಷ್ಟು

ವಾಹನ ಜಪ್ತಿ ಆಗಿದ್ದು ಎಷ್ಟು

ಇನ್ನೂ ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ರಸ್ತೆಗಳಲ್ಲಿ ಬೇಕಾಬಿಟ್ಟಿ ಓಡಾಡುವ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಕೇವಲ ಎರಡು ದಿನದಲ್ಲಿ 4632 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಅದರಂತೆ 205 ಅಟೋ ಸೇರಿದಂತೆ ತ್ರಿಚಕ್ರ ವಾಹನ, 248 ನಾಲ್ಕು ಚಕ್ರದ ವಾಹನಗಳನ್ನು ಬೆಂಗಳೂರು ಪೊಲೀಸರು ಜಪ್ತಿ ಮಾಡಿದ್ದಾರೆ. ಲಾಕ್ ಡೌನ್ ನಿಯಮ ಜಾರಿಯಾದ ಎರಡು ದಿನದಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚು ವಾಹನಗಳನ್ನು ಬೆಂಗಳೂರು ಪೊಲೀಸರು ಜಪ್ತಿ ಮಾಡುವ ಮೂಲಕ ಅನಾವಶ್ಯಕ ಓಡಾಟ ಮಾಡದಂತೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ವಾಹನ ಜಪ್ತಿ ಮಾಡುವಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಅಗ್ರಗಣ್ಯ ಸ್ಥಾನ ಗಳಿಸಿದ್ದಾರೆ. ಕೇಂದ್ರ ವಿಭಾಗ ಹಾಗೂ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಕಡಿಮೆ ವಾಹನ ಜಪ್ತಿ ಮಾಡಿದ್ದಾರೆ. ಇನ್ನು ಪೊಲೀಸರು ಜಪ್ತಿ ಮಾಡಿರುವ ವಾಹನಗಳನ್ನು ಲಾಕ್ ಡೌನ್ ಅವಧಿ ಮುಗಿದ ಬಳಿಕವಷ್ಟೇ ನ್ಯಾಯಾಲಯದ ಮೂಲಕ ವಾಹನ ಮಾಲೀಕರು ಬಿಡಿಸಿಕೊಳ್ಳಬೇಕು. ನ್ಯಾಯಾಲಯ ನಿಗದಿ ಮಾಡುವ ದಂಡದ ಮೊತ್ತವನ್ನು ಪಾವತಿಸಿದ ನಂತರವೇ ಪೊಲೀಸರು ವಾಹನಗಳನ್ನು ಬಿಟ್ಟು ಕಳಿಸುತ್ತಾರೆ.

ಹೋಟೆಲ್, ರೆಸ್ಟೋರೆಂಟ್ ಬಂದ್

ಹೋಟೆಲ್, ರೆಸ್ಟೋರೆಂಟ್ ಬಂದ್

ಕೊರೊನಾ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಬೆಂಗಳೂರಿನ 41 ಹೋಟೆಲ್, ರೆಸ್ಟೋರೆಂಟ್ ಗಳ ವಿರುದ್ಧ ಬೆಂಗಳೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಮಾಲ್ ಸೇರಿದಂತೆ 18 ಹೋಟೆಲ್, 18 ಶಾಪ್ ಗಳು, ಎಂಟು ಟೀ ಶಾಪ್ ಗಳು ಸೇರಿ 41 ಪ್ರಕರಣಗಳನ್ನು ದಾಖಲಿಸಿದ್ದಾರೆ. ದಂಡ ಪ್ರಯೋಗ ಜನರ ನಿಯಂತ್ರಣದ ಅಸ್ತ್ರ ಎಂಬಂತೆ ಪೊಲೀಸರು ಬಳಸುತ್ತಿದ್ದಾರೆ. ಕೊರೊನಾ ಕಷ್ಟ ಕಾಲದಲ್ಲಿ ಬೆಂಗಳೂರು ಪೊಲೀಸರು ದಂಡ ವಸೂಲಿ ಮಾಡುತ್ತಿರುವುದರ ಬಗ್ಗೆ ಸಾರ್ವಜನಿಕವಾಗ ಸಾಕಷ್ಟು ಆಕ್ಷೇಪಣೆ ಕೇಳಿ ಬಂದಿದ್ದವು. ಇದರ ನಡುವೆಯೂ ದೊಡ್ಡ ಮೊತ್ತದ ದಂಡ ಸಂಗ್ರಹಿಸಿದ್ದಾರೆ.

Recommended Video

#Positive Story: ಮೇ ತಿಂಗಳಿನಲ್ಲಿ ಆಕ್ಸಿಜನ್ ಉತ್ಪಾದನೆ ಶೇ. 25 ರಷ್ಟು ಹೆಚ್ಚಳ | Oneindia Kannada
28 ದಿನದಲ್ಲಿ 2,57 ಕೋಟಿ ರೂ. ದಂಡ ವಸೂಲಿ

28 ದಿನದಲ್ಲಿ 2,57 ಕೋಟಿ ರೂ. ದಂಡ ವಸೂಲಿ

ಮಾಸ್ಕ್ ಧರಿಸದವರ ವಿರುದ್ಧ ಪೊಲೀಸರು ದಾಖಲಿಸಿರುವ ಪ್ರಕರಣಗಳ ವಿವರ: ಪೊಲೀಸ್ ವಿಭಾಗವಾಗರು

English summary
Bengaluru police have registered over 1 lakh cases in a 28 days against people who do not wear masks and not maintaining social distance, collected rs 2.57 cr.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X