ಬೆಂಗಳೂರು: ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆ ಮಾಡಬೇಕೆಂಬ ಆದೇಶದ ಹಿಂಪಡೆಯಿರಿ: ಹಲವು ಸಂಘಟನೆಗಳ ಆಕ್ರೋಶ
ಬೆಂಗಳೂರು, ಅಕ್ಟೋಬರ್, 02: ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪ್ರತಿಭಟನೆ ಮಾಡುವಂತಿಲ್ಲ, ಸರ್ಕಾರದ ವಿರುದ್ಧ ಗುಂಪು ಗೂಡಿ ಆಕ್ರೋಶ ಹೊರ ಹಾಕಲು ಅನುಮತಿ ಇಲ್ಲ. ಪ್ರತಿಭಟನೆ ಮಾಡಲೇ ಬೇಕು ಅಂತಿದ್ರೆ ಫ್ರೀಡಂ ಪಾರ್ಕ್‌ಗೆ ಬಂದು ಪ್ರತಿಭಟನೆ ಮಾಡಬೇಕು ಎನ್ನುವ ಆದೇಶ ಹೊರಬಿದ್ದಿತ್ತು. ಸದ್ಯ ಈ ವಿಚಾರ ಸಾಕಷ್ಟು ಸಂಘಟನೆಗಳ ಆಕ್ರೋಶಕ್ಕೆ ಕಾರಣ ಆಗಿದೆ. ಯಾವ ಜಾಗದಲ್ಲಿ ನಮಗೆ ಅನ್ಯಾಯ ಆಗಿದ್ಯೋ ಅಲ್ಲಿ ಧ್ವನಿ ಎತ್ತಬೇಕು. ಆದ್ರೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಬೇಕು ಅಂದ್ರೆ ಎಷ್ಟು ಸರಿ? ಅಂತಾ ಪ್ರಶ್ನೆ ಹಲವು ದಿನಗಳಿಂದ ಮಾಡುತ್ತಲೇ ಇದ್ದರು.
ಮುಂದುವರಿದ ಭಾಗವಾಗಿ ಇಂದು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಮಾಡಿ ಹಲವು ಸಂಘಟನೆಗಳು ಆಕ್ರೋಶ ಹೊರ ಹಾಕಿದೆ. ಪ್ರತಿಭಟನೆ ಮಾಡಿದೆ. ಪ್ರತಿಭಟಿಸುವ ಹಕ್ಕಿಗಾಗಿ ಮೆರವಣಿಗೆ ಅನ್ನೋ ಘೋಷ ವಾಕ್ಯದ ಜೊತೆ ಪ್ರತಿಭಟಿಸಲಾಯಿತು.

ಹೋರಾಟವನಗನು ಫ್ರೀಡಂ ಪಾರ್ಕ್‌ಗೆ ಸೀಮಿತಮಾಡಿರುವ ಆದೇಶದ ವಿರುದ್ಧ ಪ್ರತಿಭಟನೆ ಮಾಡಿದ್ದು, ಜನಾಂದೋಲನ ಸಮಿತಿಯಿಂದ ಹೋರಾಟ ಮಾಡಲಾಗಿತ್ತು. ಮೌರ್ಯ ಸರ್ಕ್‌ಲ್‌ನಿಂದ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆವರೆಗೂ ಪ್ರತಿಭಟನಾ ಮೆರವಣಿಗೆ ಮಾಡುವ ಪ್ಲಾನ್ ಮಾಡಿಕೊಂಡಿದ್ದರು. ಈ ವೇಳೆ ಪ್ರತಿಭಟನೆಯನ್ನು ಫ್ರೀಡಂ ಪಾರ್ಕ್‌ಗೆ ಸೀಮಿತವಾಗಿರಿಸಿರುವ ಆದೇಶ ಹಿಂಪಡೆಯುವಂತೆ ಸರ್ಕಾರಕ್ಕೆ ಆಗ್ರಹ ಮಾಡಲಾಯಿತು.
ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುತ್ತಿರುವ ಹೋರಾಟ ಇದು, ನಮ್ಮ ಪ್ರತಿಭಟನೆ ತಡೆದು ಅವರ ಇಷ್ಟಕ್ಕೆ ತಕ್ಕಂತೆ ನಿಯಮಗಳನ್ನು ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡಿದರೆ ಅವರ ವಿರುದ್ಧವೇ ಎಫ್‌ಐಆರ್ ಹಾಕುವ ಕೃತ್ಯ ನಡೆಯುತ್ತಿದೆ. ಇದನ್ನು ಕೊಡಲೇ ರದ್ದು ಮಾಡಬೇಕು ಎಂದು ಸಂಘಟನೆಗಳು ಘೋಷಣೆ ಕೂಗಿದವು.
ನಮ್ಮ ಹೋರಾಟಕ್ಕಾಗಿ ನಮ್ಮ ಪ್ರತಿಭಟನೆ ಎಂದು ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಕೂಗಿದರು. ಈ ವೇಳೆ ಮಾವಳ್ಳಿ ಶಂಕರ್ ಗೌಡ, ವಿನಯ್ ಶ್ರೀವತ್ಸವ್ಯ ಸೇರಿ 100ಕ್ಕೂ ಹೆಚ್ಚು ಪ್ರತಿಭಟನಾಕಾರರು ಭಾಗಿ ಆಗಿದ್ದರು. ಫ್ರೇಡ್ಸ್ ಫಾರ್ ಫ್ಯೂಚರ್, ಸ್ಲಂ ಮಹಿಳಾ ಸಂಘಟನೆ, ವಿದ್ಯಾರ್ಥಿ ಸಂಘಟನೆಗಳು , ಪಿಪಲ್ ಯುನಿಯನ್ ಸಂಘಟನೆ, ಬಹುತ್ವ ಕರ್ನಾಟಕ, ಗಮನ ಮಹಿಳಾ ಸಮೂಹ, ವಕೀಲರ ಸಂಘಟನೆ ಸೇರಿದಂತೆ 35ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಿದ್ದವು.












Click it and Unblock the Notifications