ಜುಲೈ ಅಂತ್ಯಕ್ಕೆ ಬೆಂಗಳೂರಿನಲ್ಲಿ ಕೊವ್ಯಾಕ್ಸಿನ್ ಉತ್ಪಾದನೆ

ಬೆಂಗಳೂರು, ಜೂನ್ 30; ಹೈದರಾಬಾದ್ ಮೂಲದ ಕೋವಿಡ್ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್ ಬೆಂಗಳೂರಿನಲ್ಲಿ ಶೀಘ್ರವೇ ಲಸಿಕೆ ಉತ್ಪಾದನೆ ಮಾಡಲಿದೆ. ಜುಲೈ ಅಂತ್ಯದ ವೇಳೆಗೆ ಬೆಂಗಳೂರಲ್ಲಿ ಉತ್ಪಾದನೆ ಆರಂಭವಾಗುವ ನಿರೀಕ್ಷೆ ಇದೆ.

ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಮಾಡುತ್ತದೆ. ಲಸಿಕೆ ಉತ್ಪಾದನೆಗೆ ಬೇಕಾದ ತಯಾರಿಗಳ ಬಗ್ಗೆ ಸರ್ಕಾರದ ಜೊತೆಗೆ ಪ್ರಕ್ರಿಯೆಗಳು ನಡೆಯುತ್ತಿವೆ. ಜುಲೈ ಅಂತ್ಯಕ್ಕೆ ಉತ್ಪಾದನೆ ಆರಂಭಿಸುವ ವಿಶ್ವಾಸವಿದೆ.

ಏಪ್ರಿಲ್‌ನಲ್ಲಿ ಭಾರತ್ ಬಯೋಟೆಕ್ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರದಲ್ಲಿ ಕೊವ್ಯಾಕ್ಸಿನ್ ಉತ್ಪಾದನೆ ಮಾಡುವುದಾಗಿ ಘೋಷಣೆ ಮಾಡಿತ್ತು. ಬೆಂಗಳೂರು ನಗರದಲ್ಲಿ ವಾರ್ಷಿಕ 700 ಮಿಲಿಯನ್ ಡೋಸ್ ಲಸಿಕೆ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ.

Manufacturing Of Covaxin In Bengaluru City Soon

ಮುಂದಿನ ದಿನಗಳಲ್ಲಿ ಹೈದರಾಬಾದ್ ಮೂಲದ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್ ಪ್ರತಿ ತಿಂಗಳು 10-12 ಮಿಲಿಯನ್ ಡೋಸ್ ಲಸಿಕೆಯನ್ನು ತಯಾರು ಮಾಡುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ವಿವಿಧ ನಗರದಲ್ಲಿ ಉತ್ಪಾದನೆ ಆರಂಭಿಸಬೇಕಿದೆ.

ವೈ ಶ್ರೇಣಿಯ ಭದ್ರತೆ; ಭಾರತ್ ಬಯೋಟೆಕ್‌ನ ಅಧ್ಯಕ್ಷ ಕೃಷ್ಣ ಎಲ್ಲಗೆ ಕೇಂದ್ರ ಸರ್ಕಾರ 'ವೈ' ಶ್ರೇಣಿಯ ಭದ್ರತೆ ನೀಡಿದೆ. ಔಷಧ ಕಂಡುಹಿಡಿಯುವುದು, ಔಷಧಿಗಳ ಅಭಿವೃದ್ಧಿ, ಅನೇಕ ಲಸಿಕೆಗಳ ಉತ್ಪಾದನೆಯಲ್ಲಿ ಭಾರತ್ ಬಯೋಟೆಕ್ ತೊಡಗಿದೆ.

ಜೀವ ರಕ್ಷಕ ಲಸಿಕೆಗಳು ಮತ್ತು ಅಗತ್ಯ ಔಷಧಿ ಉತ್ಪಾದನೆಯ ಕಾರಣ ಕೃಷ್ಣ ಎಲ್ಲಗೆ ಭದ್ರತೆ ನೀಡಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಶಸ್ತ್ರ ಸಜ್ಜಿತ ಕಮಾಂಡೋಗಳು ಭದ್ರತೆಗೆ ನಿಯೋಜನೆಗೊಳ್ಳಲಿದ್ದಾರೆ.

ಕೃಷ್ಣ ಎಲ್ಲ ದೇಶದ ಯಾವುದೇ ಭಾಗಕ್ಕೆ ಪ್ರಯಾಣ ಮಾಡಿದರೂ ಮೂವರು ಶಸ್ತ್ರ ಸಜ್ಜಿತ ಕಮಾಂಡೋಗಳು ಅವರ ಜೊತೆ ಇರಲಿದ್ದಾರೆ. ತೆಲಂಗಾಣ ರಾಜ್ಯದ ಶಮೀರ್‌ಪೇಟ್ ಪ್ರದೇಶದಲ್ಲಿರುವ ಭಾರತ್ ಬಯೋಟೆಕ್ ಕಚೇರಿಗೆ ಕೇಂದ್ರ ಗೃಹ ಸಚಿವಾಲಯ ಅರೆಸೇನಾಪಡೆ ಭದ್ರತೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+