ಮನ್ಸೂರ್ ಖಾನ್ ಎಲ್ಲಿದೀಯಪ್ಪ? ಕೆಎಸ್ ಈಶ್ವರಪ್ಪ ಪಂಚಿಂಗ್ ಟ್ವೀಟ್ಸ್

ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕ, ಹಿರಿಯ ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಅವರಿಗೆ ನಾಲಗೆ ಮೇಲೆ ನಿಯಂತ್ರಣವಿರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಬಾರಿ ಟೀಕಿಸಿದ್ದನ್ನು ಗಮನಿಸಿರಬಹುದು.

ಆದರೆ, ಈಶ್ವರಪ್ಪ ಅವರ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಮಾತ್ರ ಹದವಾದ ಟೀಕೆ, ಆಗಾಗ ಮೊನಚಾದ ಟ್ವೀಟ್ ಮೂಲಕ ಸಕತ್ ಪಂಚ್ ನೀಡುತ್ತಿದ್ದಾರೆ.

ದಿನ ನಿತ್ಯದ ಆಗು ಹೋಗುಗಳು, ಸರ್ಕಾರದ ವಿರುದ್ಧದ ಟೀಕೆ ಟಿಪ್ಪಣಿಗಳು, ಹಗರಣಗಳು, ಮೋದಿ ಸರ್ಕಾರ ಅಪ್ಡೇಟ್ಸ್ ಅಲ್ಲದೆ, ಕ್ರಿಕೆಟ್ ಪಂದ್ಯದ ಬಗ್ಗೆ ಕೂಡಾ ಟ್ವೀಟ್ ಗಳನ್ನು ಕಾಣಬಹುದು.

ಸದ್ಯಕ್ಕೆ ಐಎಂಎ ಜ್ಯುವೆಲ್ಸ್ ಹಗರಣದ ಬಗ್ಗೆ, ಜಿಂದಾಲ್ ಸಂಸ್ಥೆಗೆ ಸರ್ಕಾರದ ಭೂಮಿ ಕಡಿಮೆ ಬೆಲೆ ನೀಡುತ್ತಿರುವುದರ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.

ಮೊದಲು 78 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್, 37 ಸ್ಥಾನ ಗಳಿಸಿದ್ದ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನವನ್ನು ಮಾರಿಕೊಂಡಿತು. ನಂತರ ಬಂದ "ಮಿಶ್ರ ಸರ್ಕಾರ", ಜಿಂದಾಲ್ ಗೆ ಕಡಿಮೆ ಬೆಲೆಗೆ ಭೂಮಿ ಮಾರಲು ಹೊರಟಿತು. ಇದೊಂದು ಲೂಟಿ ಸರ್ಕಾರ ಎಂದು ಟ್ವೀಟ್ ಮಾಡಿದ್ದಾರೆ.

ಮನ್ಸೂರ್ ನಿರ್ಗಮನ

ಮನ್ಸೂರ್ ನಿರ್ಗಮನ

ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಏನಾಗಿದೆ? ಸರ್ಕಾರ ಸತ್ತೋಗಿದ್ಯಾ? ಝಮೀರ್, ಸರ್ಕಾರ ನಿಮ್ಮೊಂದಿಗೆ ಇದೆ, ಕೂತು ಮಾತೋಡೋಣ ಅಂದರೆ ಅರ್ಥ ಏನು? ಅವರ ಜೊತೆಗೆ ಹಗರಣದಲ್ಲೋ ಅಥವಾ ಹಗರಣ ಮಾಡಿದ ಕಳ್ಳನ ಬೆನ್ನಿಗೊ? ಮಗ್ಗುಲು ಮುರಿದು ಒಳಗೆ ಕೂರಿಸುವ ಬದಲು, ಕೂತು ಮಾತೋಡೋಕೆ ಅವನೇನು ನಿಮ್ಮ ಸಚಿವ ಸಂಪುಟದ ಸಹೋದ್ಯೋಗಿನಾ?

ಸಿದ್ದರಾಮಯಯ್ಯ ಪ್ರತಿಕ್ರಿಯಿಸುತ್ತಿಲ್ಲ

ಸಿದ್ದರಾಮಯಯ್ಯ ಪ್ರತಿಕ್ರಿಯಿಸುತ್ತಿಲ್ಲ

ಇಂತಹ ಬಹು ಕೋಟಿ ಹಗರಣದ ಆರೋಪಿ ಓಡಿ ಹೋದರು, ನಮ್ಮ ಸರ್ಕಾರ ಬರೀ ಪತ್ರಕರ್ತರನ್ನು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ, ಮುಖ್ಯಮಂತ್ರಿಗಳ, ಸಚಿವರ ಬಗ್ಗೆ ಬರೆದವರನ್ನು ಜೈಲಿಗೆ ಕಳುಹಿಸಿವುದರಲ್ಲೇ ಬ್ಯುಸಿ ಆಗಿತ್ತು. ದುರ್ದೈವ.

**

ಐಎಂಎ ಹಗರಣದ ಬಗ್ಗೆಸಿದ್ದರಾಮಯಯ್ಯ ಪ್ರತಿಕ್ರಿಯಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಲು ಬಳಸಿದ ಟ್ವೀಟ್ ಇಲ್ಲಿದೆ

ರೇವಣ್ಣ- ಪರಮೇಶ್ವರ

ರೇವಣ್ಣ- ಪರಮೇಶ್ವರ

ಎಚ್ ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದರೆ, ಎಚ್ ಡಿ ರೇವಣ್ಣ ಸೂಪರ್ ಸಿಎಂ, ಜಿ ಪರಮೇಶ್ವರ ಅವರು ಕೆಎನ್ ರಾಜಣ್ಣ ಹೇಳಿದಂತೆ ಬರೀ ಜೀರೋ ಟ್ರಾಫಿಕ್ ಸಚಿವ ಎಂದು ಟ್ವೀಟ್ ಮಾಡಿ ಕಾಲೆಳೆದ ಕೆಎಸ್ ಈಶ್ವರಪ್ಪ

ವಿಶ್ವಕಪ್ ಬಗ್ಗೆ ಕೂಡಾ ಟ್ವೀಟ್

ವಿಶ್ವಕಪ್ ಬಗ್ಗೆ ಕೂಡಾ ಟ್ವೀಟ್

ಐಸಿಸಿ ವಿಶ್ವಕಪ್ ಕ್ರಿಕೆಟ್ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದಾಗ ಮಾಡಿದ ಟ್ವೀಟ್ ಇಲ್ಲಿದೆ. ಇದಲ್ಲದೆ, ಧೋನಿ ಬಳಸಿದ ಬಲಿದಾನದ ಚಿಹ್ನೆ ಇದ್ದ ಕೀಪರ್ ಗ್ಲೌವ್ಸ್ ಬೆಂಬಲಿಸಿ ಕೂಡಾ ಈಶ್ವರಪ ಟ್ವೀಟ್ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+