ಸಾವಿತ್ರಮ್ನೋರೇ, ಮತ್ತೆ ಮಾಂಗಲ್ಯ ಸರ ಕಳಕೊಂಡೀರಿ ಎಚ್ಚರಿಕೆ!
ಬೆಂಗಳೂರು, ಜುಲೈ, 09 : ಗೃಹಿಣಿಯರೇ ಹುಷಾರ್..ನಿಮ್ಮ ಮನೆಯಲ್ಲಿ ಬೆಲೆಬಾಳುವ ಚಿನ್ನಾಭರಣವಿದೆಯಾ? ಮನೆಕೆಲಸದವರನ್ನು ಇಟ್ಟುಕೊಂಡಿದ್ದೀರಾ? ಹಾಗಾದರೆ ಎರಡರ ಕಡೆಗೂ ಕೊಂಚ ಗಮನಕೊಡಿ. ಇಲ್ಲದಿದ್ದರೆ ಬಿಕ್ಕಿ ಬಿಕ್ಕಿ ಅಳುವ ಪರಿಸ್ಥಿತಿ ಬಂದೊದಗೀತು ಜೋಕೆ! ಏನು ಅಂತಾ ವಿಚಾರ ಗೊತ್ತಾಗಿಲ್ವ? ಹಾಗಾದರೆ ಈ ಸುದ್ದಿ ಓದಿ............
ಮನೆ ಕೆಲಸ ಮಾಡುತ್ತ ನಂಬಿಕೆ ಗಳಿಸಿಕೊಂಡು ಅವಕಾಶ ಸಿಕ್ಕಾಗ ಮನೆ ಒಡತಿಯ ಸರ ಕದ್ದು ಪರಾರಿಯಾಗಿದ್ದವಳನ್ನು ಬಂಧಿಸಿರುವ ಬೆಂಗಳೂರು ದಕ್ಷಿಣ ವಲಯದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು 67 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ[ನಟಿ ರಾಧಿಕಾ ಮನೆ ಕಳ್ಳತನ ಸ್ಕೆಚ್, ಜಸ್ಟ್ ಮಿಸ್!]

ಮಂಡ್ಯ ಮೂಲದ ಗೀತಾ ಬಂಧಿತ ಸರಗಳ್ಳಿ. ಈಕೆ ಹಲವು ದಿನಗಳಿಂದ ಮನೆ ಒಡತಿಯಾದ ಸಾವಿತ್ರಮ್ಮನವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ಸಾಧಿಸಿಕೊಂಡ ಗೀತಾ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಳು.
ಸುಮಾರು 1,80,000 ರೂ ಬೆಲೆಬಾಳುವ ಮಾಂಗಲ್ಯ ಸರವನ್ನು ಕದ್ದು ಕಾಲು ಕಿತ್ತಿದ್ದ ಗೀತಾಳ ವಿರುದ್ದ, ಸಾವಿತ್ರಮ್ಮ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಗೀತಾಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications