ಪರಿಚಯಸ್ಥನನ್ನು 'ತಮ್ಮ' ಎಂದು ಉದ್ಘರಿಸಿದ್ದಕ್ಕೆ ಏನೆಲ್ಲಾ ಆಯ್ತು ನೋಡಿ
ಬೆಂಗಳೂರು, ಮಾರ್ಚ್ 20: ಬೈಕಿನಲ್ಲಿ ಹೋಗುತ್ತಿದ್ದ ಪರಿಚಯಸ್ಥರೊಬ್ಬರ ಹೆಸರು ನೆನಪಾಗದೆ ಏ ತಮ್ಮಾ ಎಂದು ಕರೆದಿದ್ದಕ್ಕೆ ಬೈಕ್ ನಿಲ್ಲಿಸಿ ಕರೆದವನಿಗೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಅಂಜನಪ್ಪ ಹಲ್ಲೆಗೊಳಗಾದವರು, ಹರಿಹರನಗರದ ನಿವಾಸಿಯಾದ ಅಂಜನಪ್ಪ ಮತ್ತು ಅವರ ಸ್ನೇಹಿತ ಊಟವಾದ ಬಳಿಕ ರಾತ್ರಿ ಸುಮಾರು 10.45ರ ಸಮಯದಲ್ಲಿ ವಾಯುವಿಹಾರಕ್ಕೆಂದು ತೆರಳಿದ್ದರು.
ಆಗ ಸುಮಾರು ಎರಡು ವರ್ಷಗಳಿಂದ ಪರಿಚಯವಿದ್ದ ರವಿ ಎನ್ನುವವನು ಬೈಕ್‌ನಲ್ಲಿ ಹೋಗುತ್ತಿದ್ದುದನ್ನು ನೋಡಿ ತಕ್ಷಣಕ್ಕೆ ಹೆಸರು ನೆನಪಾಗದೆ ಏ ತಮ್ಮಾ ಎಂದು ಕರೆದಿದ್ದಾರೆ. ಅಷ್ಟಕ್ಕೇ ಗಾಡಿ ನಿಲ್ಲಿಸಿ ಬಂದು ಮದ್ಯದ ಬಾಟಲಿಯಿಂದ ಹಡೆದು ಹಲ್ಲೆ ಮಾಡಿದ್ದಾರೆ.

ತಮ್ಮ ಎನ್ನುವುದು ಕೆಟ್ಟ ಪದ ಅಲ್ಲ ಸಹೋದರ ಎಂದು ಎಷ್ಟೇ ಹೇಳಿದರೂ ಕೇಳಿಸಿಕೊಳ್ಳದೆ ಹಲ್ಲೆ ನಡೆಸಿದ್ದಾನೆ. ಮದ್ಯದ ಬಾಟಲಿ ಒಡೆದು ಅದರ ಚೂರಿನಿಂದ ಅಂಜನಪ್ಪ ಅವರ ಕಾಲಿಗೆ ಇರಿದಿದ್ದಾರೆ. ತಕ್ಷಣ ಸ್ಥಳೀಯರು ಅಲ್ಲಿಗೆ ಬರುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಬಳಿಕ ಅಂಜನಪ್ಪ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.












Click it and Unblock the Notifications