ಅಕ್ರಮ ಸಂಬಂಧ ಶಂಕೆ: ಕೋಪದಲ್ಲಿ ಪತ್ನಿ ಸ್ನೇಹಿತನ ತಾಯಿಯನ್ನು ಕೊಂದ ಪತಿ

ಬೆಂಳೂರು, ನವೆಂಬರ್ 19: ಪತ್ನಿಯ ಶೀಲ ಶಂಕಿಸಿ ಕೋಪದಲ್ಲಿ ಸ್ನೇಹಿತನ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಕೊತ್ತನೂರಿನ ಸಾವಿತ್ರಮ್ಮ ಮೃತರು, ಘಟನೆಯಲ್ಲಿ ಮೃತ ಸಾವಿತ್ರಮ್ಮ ಪುತ್ರ ಭರತ್ ಹಾಗೂ ತಂದೆ ಸಣ್ಣಪ್ಪ ಎಂಬುವವರಿಗೂ ಚಾಕುವಿನಿಂದ ಇರಿದಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಆನಂದ್ ಕುಮಾರ್ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆನಂದ್ ಕುಮಾರ್ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ, ಕೆಲ ವರ್ಷಗಳ ಹಿಂದೆ ಸ್ನೇಹಾ ಎಂಬುವವರನ್ನು ವಿವಾಹವಾಗಿದ್ದು, ಆನಂದ್ ದಂಪತಿಗೆ 11 ವರ್ಷದ ಮಗಳಿದ್ದಾಳೆ. ದಂಪತಿಗೆ ಕೊತ್ತನೂರಿನ ನಿವಾಸಿ ಆಟೋ ಚಾಲಕ ಭರತ್ ಎಂಬಾತನ ಪರಿಚಯವಾಗಿತ್ತು.

Man suspects wife, kills woman, stabs her son and spouse

ಈ ಮಧ್ಯೆ ಭರತ್ ಆನಂದ್ ಪತ್ನಿ ಜತೆ ಹೆಚ್ಚು ಸಲುಗೆಯಿಂದ ವರ್ತಿಸುತ್ತಿದ್ದರು ಅಲ್ಲದೆ ಭರತ್ ಆಗಾಗ ಆನಂದ್ ಮನೆಗೆ ಹೋಗಿ ಬರುತ್ತಿದ್ದುದನ್ನು ನೋಡಿದ್ದ ಆನಂದ್ ಪತ್ನಿ ಮೇಲೆ ಅನುಮಾನಗೊಂಡಿದ್ದ.

ಇದೇ ವಿಚಾರಕ್ಕೆ ಪತ್ನಿ ಜೊತೆಗೆ ಜಗಳ ನಡೆದು ಪತಿಯ ವರ್ತನೆಯಿಂದ ಕೋಪಗೊಂಡ ಪತ್ನಿ ಭರತ್‌ಗೆ ಕರೆ ಮಾಡಿ ನಡೆದಿದ್ದೆಲ್ಲಾ ವಿವರಿಸಿ ಬುದ್ಧಿಹೇಳುವಂತೆ ಸೂಚಿಸಿದ್ದಳು. ಆಗ ಭರತ್ ಆತನ ಮನೆಗೆ ಬಂದು ತಮ್ಮ ನಡುವೆ ಅಂಥ ಯಾವುದೇ ಸಂಬಂಧವಿಲ್ಲ ಎಂದು ತಿಳಿ ಹೇಳದ್ದರೂ ಆತತ ಕೇಳುವ ಸ್ಥಿತಿಯಲ್ಲಿರಲಿಲ್ಲ.

ಬಳಿಕ ದೊಡ್ಡವರು ಮಾತನಾಡಿದರೆ ಕೇಳಬಹುದು ಎಂದು ಭರತ್ ತಾಯಿಯನ್ನು ಕರೆಸಿದ್ದರು ಆ ಸಂದರ್ಭದಲ್ಲಿ ಭರತ್ ತಾಯಿಯನ್ನು ಕೊಲೆ ಮಾಡಿದ್ದು, ಭರತ್ ಹಾಗೂ ಭರತ್ ತಂದೆಯ ಮೇಲೂ ಕೂಡ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+