ಪತ್ನಿ ಹಾಗೂ ನಾಯಿಯನ್ನು ಕೊಂದು ಪತಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು
ಬೆಂಗಳೂರು, ಏ.10: ಉದ್ಯಮಿಯೊಬ್ಬರು ಪತ್ನಿಯನ್ನು ಕೊಂದು ಪ್ರೀತಿಯ ನಾಯಿಯನ್ನು ಮಹಡಿಯಿಂದ ತಳ್ಳಿ ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಆತ್ಮಹತ್ಯೆ ಬಳಿಕ ಪೊಲೀಸರ ತಪಾಸಣೆ ವೇಳೆ ಅಲ್ಲಿ ಏಪ್ರಿಲ್ 2ರಂದು ಬೆಳಗ್ಗೆ 10ರ ಸುಮಾರಿಗೆ ಫ್ಲ್ಯಾಟ್‌ನಲ್ಲಿ ಪತ್ನಿಗೆ ಡಂಬಲ್ಸ್‌ನಿಂದ ಹಲ್ಲೆ ನಡೆಸಿ ಕೊಂದ ಅತುಲ್, ನಂತರ ಆರನೇ ಮಹಡಿಗೆ ತೆರಳಿದ್ದಾರೆ. ಅಲ್ಲಿ ತಮ್ಮ ಸಾಕು ನಾಯಿಯನ್ನು ಮಹಡಿಯಿಂದ ತಳ್ಳಿ, ನಂತರ ತಾವೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮತ್ತು ಕೊಲೆ ಕೃತ್ಯಕ್ಕೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ ಮೂಲದ ಅತುಲ್ ಅವರು ಎರಡು ದಶಕಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದರು. ಆರು ವರ್ಷಗಳಿಂದ ಸದಾಶಿವನಗರದ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯ ಫ್ಲ್ಯಾಟ್‌ನಲ್ಲಿ ಪತ್ನಿ ಹಾಗೂ ಸೋದರನ ಪುತ್ರನ ಜೊತೆ ವಾಸವಾಗಿದ್ದರು.

ಮೃತರ ಮನೆಯಲ್ಲಿ ಮರಣ ಪತ್ರ ಪತ್ತೆಯಾಗಿತ್ತು.ಇದರಲ್ಲಿ ಕ್ಯಾನ್ಸರ್ ಕಾಯಿಲೆಯೊಂದು ಮಾರಕ ರೋಗವಾಗಿದೆ ಎಂದು ಅತುಲ್ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಮನೆಯಲ್ಲಿ ಸಿಕ್ಕ ಡೆತ್‌ನೋಟ್‌ನಲ್ಲಿ ಬರೆದದ್ದಂತೆ ಪತ್ನಿ ಮಮತಾ ಹಾಗೂ ಪತಿ ಅತುಲ್ ಉಪಾಧ್ಯಾಯ ಇಬ್ಬರಿಗೂ ಕ್ಯಾನ್ಸರ್ ಇರಲಿಲ್ಲ ಎಂಬ ಮಾಹಿತಿ ಶವಪರೀಕ್ಷೆಯಲ್ಲಿ ಗೊತ್ತಾಗಿದೆ.
ಘಟನೆಯ ಮಾಹಿತಿ ತಿಳಿದು ಪೊಲೀಸರು ಫ್ಲ್ಯಾಟ್ ಪರಿಶೀಲನೆ ನಡೆಸಿದಾಗ ಅತುಲ್ ಬರೆದಿದ್ದಾನೆ ಎನ್ನಲಾದ ಡೆತ್‌ನೋಟ್ ಸಿಕ್ಕಿತ್ತು. ಅದರಲ್ಲಿ ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದು, ಆ ರೋಗದಿಂದ ಬಳಲುತ್ತಿರುವುದಕ್ಕಿಂತ ಸಾಯುವುದೇ ಉತ್ತಮ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸದಾಶಿವನಗರ ಪೊಲೀಸರು ಸುಮ್ಮನಾಗಿದ್ದರು.
ಆದರೀಗ ಇಬ್ಬರಿಗೂ ಕ್ಯಾನ್ಸರ್ ಇರಲಿಲ್ಲ ಎಂಬುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ಬಗ್ಗೆ ಪೊಲೀಸರಿಗೆ ಅನುಮಾನ ಶುರುವಾಗಿದೆ.
ಡೆತ್‌ನೋಟ್‌ನಲ್ಲಿ ಕ್ಯಾನ್ಸರ್ ಬಗ್ಗೆ ಉಲ್ಲೇಖ ಮಾಡಿರುವುದು ಏಕೆ. ನಿಜವಾಗಲೂ ಡೆತ್‌ನೋಟ್ ಬರೆದವರು ಯಾರು, ಅವರ ಹೆಸರಿನಲ್ಲಿ ಬೇರೆ ಯಾರಾದರೂ ಬರೆದಿದ್ದಾರೆಯೇ? ಎಂದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.












Click it and Unblock the Notifications