ತುಂಡುಡುಗೆ ತೊಟ್ಟಿದ್ದ ಯುವತಿ: ಅನಾಮಿಕ ವ್ಯಕ್ತಿ ಮಾಡಿದ್ದೇನು ಗೊತ್ತಾ?
Recommended Video
ಬೆಂಗಳೂರು, ಅ 8: ತುಂಡುಡುಗೆ ತೊಟ್ಟಿದ್ದ ಯುವತಿಯನ್ನು ಅನಾಮಿಕ ವ್ಯಕ್ತಿ ಪ್ರಶ್ನಿಸಿದ ಘಟನೆ, ನಗರದ HSR ಲೇಔಟ್ ನಲ್ಲಿ ನಡೆದಿದೆ. ಕಳೆದ ಗುರುವಾರ (ಅ 3) ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಯುವತಿ, ಬೈಕ್ ನಲ್ಲಿ ಹಿಂದಗಡೆ ಕುಳಿತು ತನ್ನ ಸ್ನೇಹಿತನ ಜೊತೆಗೆ ಹೋಗುತ್ತಿದ್ದಳು. ಯುವತಿ, ತುಂಡುಡುಗೆ ಧರಿಸಿದ್ದನ್ನು ನೋಡಿದ ಅನಾಮಿಕ ವ್ಯಕ್ತಿ ಇದನ್ನು ಪ್ರಶ್ನಿಸಿದ್ದಾನೆ.
ಭಾರತದ ಸಂಸ್ಕೃತಿಗೆ ಅವಮಾನ ಮಾಡುತ್ತಿದ್ದೀರಾ ಎಂದು ಆ ವ್ಯಕ್ತಿ ಯುವತಿಯನ್ನು ಪ್ರಶ್ನಿಸಿದ್ದಾನೆ. ಆ ವೇಳೆ, ವ್ಯಕ್ತಿಗೂ ಮತ್ತು ಯುವತಿಯ ಸ್ನೇಹಿತನ ನಡುವೆ ವಾಗ್ಯುದ್ದ ನಡೆದಿದೆ.

"ನೀವೊಬ್ಬರು ವಿದ್ಯಾವಂತರು, ಈ ರೀತಿಯ ಬಟ್ಟೆ ಹಾಕಿಕೊಂಡರೆ ತಪ್ಪೇನು" ಎಂದು ಯುವತಿಯ ಗೆಳೆಯ ಪ್ರಶ್ನಿಸಿದ್ದಾನೆ. "ನಿಮ್ಮಂತಹ ವ್ಯಕ್ತಿಗಳಿಂದಲೇ ದೇಶಕ್ಕೆ ಕೆಟ್ಟ ಹೆಸರು ಬರುವುದು" ಎಂದು ವ್ಯಕ್ತಿಯ ಜೊತೆ, ಮಾತಿನ ಚಕಮಕಿ ನಡೆದಿದೆ.
Man in Bengaluru heckles a young woman for not adhering to ‘Indian dress code’, whatever that is. A man dressed in a pair of trousers and collared shirt. pic.twitter.com/Yd176K6nr3
— Padmaja joshi (@PadmajaJoshi) October 6, 2019
"ದಯವಿಟ್ಟು, ನಮ್ಮ ಸಂಸ್ಕೃತಿಯಂತೆ ಬಟ್ಟೆಯನ್ನು ಧರಿಸಿ" ಎಂದು ಅನಾಮಿಕ ವ್ಯಕ್ತಿ, ಯುವತಿಯ ಗೆಳೆಯನಿಗೆ ಸಲಹೆಯನ್ನು ನೀಡಿದ್ದಾನೆ. "ನೀವೊಬ್ಬರು ಮೆಂಟಲ್ ಬ್ಯಾಲನ್ಸ್ ಇಲ್ಲದ ವ್ಯಕ್ತಿ" ಎಂದು ಯುವತಿಯ ಗೆಳೆಯ, ಆ ವ್ಯಕ್ತಿಯನ್ನು ಜರಿದಿದ್ದಾನೆ.
ಈ ಘಟನೆಯನ್ನು ವಿಡಿಯೋ ಮಾಡಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ವೀವ್ಸ್ ಅನ್ನು ಪಡೆದುಕೊಂಡಿದೆ.












Click it and Unblock the Notifications