ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋದಲ್ಲಿ ಯುವತಿ ಹಿಂಬಾಲಿಸಿ ಕಿರುಕುಳ: ಸಾರ್ವಜನಿಕರಿಂದ ಥಳಿತ

By Nayana
|
Google Oneindia Kannada News

Recommended Video

ಮೆಟ್ರೋದಲ್ಲಿ ಯುವತಿ ಹಿಂಬಾಲಿಸಿ ಕಿರುಕುಳ | Oneindia Kannada

ಬೆಂಗಳೂರು, ಜು.25: ಮೆಟ್ರೋ ರೈಲಿನಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಷ್ಟೇ ಅಲ್ಲದೆ ಮೈ,ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಸಾರ್ವಜನಿಕರು ಥಳಿಸಿ ಪೊಲೀಸರ ಕೈಗೆ ಒಪ್ಪಿಸಿರುವ ಘಟನೆ ಬನಶಂಕರಿಯಲ್ಲಿ ನಡೆದಿದೆ.

ಯುವತಿ ನೀಡಿದ ದೂರು ಆಧರಿಸಿ ಕುಮಾರಸ್ವಾಮಿ ಲೇಔಟ್‌ ಪೊಲೀಸರು ದೀಲಾಕ್ಷ ಎಂಬುವವನನ್ನು ಬಂಧಿಸಿದ್ದಾರೆ.

ಮೆಟ್ರೋದಲ್ಲಿ ಯುವತಿ ಫೋಟೊ ಕ್ಲಿಕ್ಕಿಸಿದ ಸೆಕ್ಯುರಿಟಿ ಗಾರ್ಡ್‌ ಬಂಧನಮೆಟ್ರೋದಲ್ಲಿ ಯುವತಿ ಫೋಟೊ ಕ್ಲಿಕ್ಕಿಸಿದ ಸೆಕ್ಯುರಿಟಿ ಗಾರ್ಡ್‌ ಬಂಧನ

ಯುವತಿ ಮೆಟ್ರೋದಲ್ಲಿ ನಿಂತ ಬಳಿಕ ದೀಲಾಕ್ಷ ಆಕೆಯ ಪಕ್ಕದಲ್ಲೇ ಬಂದು ನಿಲ್ಲುತ್ತಿದ್ದ, ಆಕೆ ಬೆಳಗ್ಗೆ 11.30ರ ಸುಮಾರಿಗೆ ಮಹಾಲಕ್ಷ್ಮೀ ಲೇಔಟ್‌ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಹತ್ತಿದ್ದರು. ಆತನ ವರ್ತನೆ ಸಹಿಸಲಾಗದೆ ಮಹಿಳೆ ಸಾಕಷ್ಟು ಬಾರಿ ಪಕ್ಕಕ್ಕೆ ಸರಿದಿದ್ದರೂ ಆಕೆಯ ಬಳಿ ಅಸಭ್ಯವಾಗಿ ವರ್ತಿಸಿದ್ದಾನೆ.

ಅಷ್ಟೇ ಅಲ್ಲದೆ ಯುವತಿ ಮೆಟ್ರೋ ಇಳಿದ ಬಳಿಕವೂ ಬನಶಂಕರಿ ದೇವಸ್ಥಾನದವರೆಗೂ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ, ನೀವು ಯಾರು, ಊರು ಯಾವುದು, ಇಬ್ಬರು ಜೊತೆಯಲ್ಲೇ ಹೋಗೋಣ ಎನ್ನುವ ಮಾತುಗಳನ್ನು ಆಡಿದ್ದಾನೆ. ನಂತರ ಆಕೆ ದೇವಸ್ಥಾನದ ಬಳಿ ಹಣ್ಣು ತೆಗೆದುಕೊಳ್ಳುವಾಗ ಆತ ತಾನೇ ಹಣ ನೀಡಲು ಮುಂದೆ ಬಂದಿದ್ದಾನೆ.

ಜತೆಗೆ ನಿನಗೆ ಹಣದ ಅಗತ್ಯವಿದ್ದರೆ ಹೇಳು ನಾನು ಕೊಡುತ್ತೇನೆ ಎಂದು ಕೂಡ ಕೆಟ್ಟದಾಗಿ ವರ್ತಿಸಿದ್ದಾನೆ, ಕೈ ಹಿಡಿದು ನಿನ್ನ ಮೊಬೈಲ್‌ ನಂಬರ್‌ ಕೊಡು ಎಂದು ಪೀಡಿಸಿದ್ದಾನೆ ಬಳಿಕ ಆಕೆ ಪತಿಯ ನಂಬರ್‌ ಕೊಟ್ಟು ದೇವಸ್ಥಾನಕ್ಕೆ ಹೋಗಿದ್ದಾಳೆ, ಬಳಿಕ ಪತಿಗೆ ಮಾಹಿತಿ ನೀಡಿದ್ದಾಳೆ, ನಂತರ ಸಾರ್ವಜನಿಕರನ್ನು ಕರೆದು ಈ ವಿಚಾರ ತಿಳಿಸಿದ್ದಾಳೆ, ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಇತ್ತೀಚೆಗಷ್ಟೇ ಮೆಟ್ರೋದಲ್ಲಿ ಯುವತಿಯ ಫೋಟೊ ಕ್ಲಿಕ್ಕಿಸಿದ ಸೆಕ್ಯುರಿಟಿ ಗಾರ್ಡ್‌ನನ್ನು ಬಂಧಿಸಲಾಗಿತ್ತು.

English summary
Man misbehave with woman in metro. Later group of people beaten him near Banashakari Temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X