ಬೆಂಗಳೂರಿನಲ್ಲಿ ಸ್ಕೈವಾಕ್‌ಗೆ ನೇಣುಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ
ಬೆಂಗಳೂರು, ಸೆಪ್ಟೆಂಬರ್ 29: ಬೆಂಗಳೂರಿನ ಸ್ಕೈವಾಕ್‌ಗೆ ನೇಣುಬಿಗಿದುಕೊಂಡುವ್ಯಕ್ತಿಯೊಬ್ಬ ಅತ್ಮಹತ್ಯೆಗೆ ಶರಣಾಗಿದ್ದಾರೆ.
ಹೆಚ್ಚು ಜನಸಂದಣಿ ಇರುವ ಪ್ರದೇಶವಾದರೂ ಕೂಡ ಯಾರ ಕಣ್ಣಿಗೂ ಇವರು ಬಿದ್ದಿಲ್ಲ.ಬೆಂಗಳೂರು-ತುಮಕೂರು ಹೆದ್ದಾರಿ ಎಂಟನೇ ಮೈಲಿ ಬಳಿ ಘಟನೆ ಸಂಭವಿಸಿದೆ. ಮೃತರನ್ನು ಮೋಹನ್ ದಾಸ್ ಎಂದು ಗುರುತಿಸಲಾಗಿದೆ.
ಮೋಹನ್ ದಾಸ್ ಅವರು ದಾಸರಹಳ್ಳಿ ಕಲ್ಯಾಣನಗರದ ನಿವಾಸಿಯಾಗಿದ್ದಾರೆ. ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ.

Recommended Video
Virat ಹಾಗು Anushka ಬಗ್ಗೆ ಏನೇನೋ ಹೇಳಿ , ಸಮಜಾಯಿಷಿ ನೀಡಿದ Sunil Gavaskar | Oneindia Kannada
ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸ್ಕೈವಾಕ್‌ನಲ್ಲಿ ನೇಣುಹಾಕಿಕೊಂಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂಬುದು ಪೊಲೀಸರ ತನಿಖೆಯಲ್ಲಿ ಹೊರಬರಬೇಕಿದೆ.












Click it and Unblock the Notifications