ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡ ಅನುಮಾನಾಸ್ಪದ ವ್ಯಕ್ತಿ ಪತ್ತೆ
ಬೆಂಗಳೂರು, ಮೇ 11: ಮೆಟ್ರೋ ನಿಲ್ದಾಣದಲ್ಲಿ ಎರಡು ದಿನಗಳ ಹಿಂದೆ ಅನುಮಾಸ್ಪದವಾಗಿ ಕಾಣಿಸಿಕೊಂಡ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಎರಡು ದಿನಗಳ ಹಿಂದೆ ಗಡ್ಡಬಿಟ್ಟು, ತಲೆಗೆ ರುಮಾಲು ಸುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ, ಸಿಸಿಟಿವಿಯ ದೃಶ್ಯಗಳನ್ನು ಪರಿಶೀಲಿಸಿದಾಗ ಈತನ ಹಾವಭಾವದ ಮೇಲೆ ಅನುಮಾನ ಮೂಡಿದ್ದವು. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದರು.
ಈ ವ್ಯಕ್ತಿಯ ಪತ್ತೆಗಾಗಿ ಪೊಲೀಸರು ಕರಪತ್ರಗಳನ್ನು ಸಹ ಹಂಚಿಕೆ ಮಾಡಿದ್ದರು, ಅಂತಿಮವಾಗಿ ನಿನ್ನೆ ರಾತ್ರಿ ವೇಳೆಗೆ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದು, ಆತ ಯಾವುದೇ ಉಗ್ರ ಸಂಘಟನೆಗೆ ಸೇರಿದವನಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಕಾಣಿಸಿಕೊಂಡ ವ್ಯಕ್ತಿಯ ಹೆಸರು ಸಾಜಿದ್ ಖಾನ್ ಎಂದಾಗಿದ್ದು, ಅವರುರಾಜಸ್ಥಾನ ಮೂಲದವರಾಗಿದ್ದಾರೆ. ಹಜ್ ಯಾತ್ರೆಗೆ ತೆರಳಿದ್ದ ಅವರು, ಆರ್‌ಟಿ ನಗರದ ಮಸೀದಿಯಲ್ಲಿ ಪ್ರವಚನ ನೀಡಲೆಂದು ಬೆಂಗಳೂರಿಗೆ ಆಗಮಿಸಿದ್ದರು.
ಸಾಜಿದ್ ಖಾನ್ ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡ ದಿನವೇ ಮತ್ತೊಬ್ಬ ಮುಸ್ಲಿಂ ವ್ಯಕ್ತಿಯೂ ಸಹ ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡು, ಆತನನ್ನು ಸಹ ಕೆಲವು ಮಾಧ್ಯಮಗಳು ಶಂಕಿತ ಉಗ್ರನೆಂದು ಬಿಂಬಿಸಿದ್ದವು, ಆದರೆ ಆತ ಮೆಜೆಸ್ಟಿಕ್ ಬಳಿ ವಾಚ್ ರಿಪೇರಿಯವ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಯಿತು.












Click it and Unblock the Notifications