ಬೆಂಗಳೂರು: ರಸ್ತೆ ದಾಟುತ್ತಿದ್ದಾಗ ಕಂಟೇನರ್ ಲಾರಿ ಡಿಕ್ಕಿ, ವ್ಯಕ್ತಿ ಸಾವು
ಬೆಂಗಳೂರು, ಜೂನ್ 22: ತಳ್ಳುಗಾಡಿಯೊಂದಿಗೆ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಂಟೇನರ್ ಲಾರಿ ಬಡಿದು, ವ್ಯಕ್ತಿಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನ ಯಶವಂತಪುರ ಬಳಿಯ ಗೊರುಗುಂಟೆಪಾಳ್ಯದಲ್ಲಿ ನಡೆದಿದೆ.
ಕಂಟೇನರ್ ಲಾರಿ ಮಾದನಾಯಕನಹಳ್ಳಿಯಿಂದ ಚೆನ್ನೈಗೆ ತೆರಳುತ್ತಿತ್ತು ಎಂಬುದು ತಿಳಿದುಬಂದಿದೆ. ಲಾರಿ ಚಾಲಕನನ್ನು ಯಶವಂತಪುರ ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಮೃತ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.











Click it and Unblock the Notifications