ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಗೆ ದೋಖಾ
ಬೆಂಗಳೂರು, ಫೆ. 8: ವಿಚ್ಛೇದಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಭೂಪ ಆಕೆಯೊಂದಿಗೆ ಸಂಸಾರವನ್ನೇ ಹೂಡಿದ್ದ. ಇದೀಗ ಮದುವೆ ದಿನಾಂಕ ಸಮೀಪಿಸುತ್ತಿದ್ದಂತೆ ಉಂಡಾಡಿ ಗುಂಡನಂತೆ ನಿನ್ನ ಮದುವೆಯಾಗಲ್ಲ ಎಂದು ಹೇಳಿ ಎಸ್ಕೇಪ್ ಆಗಿದ್ದಾನೆ. ನೊಂದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಬಿನ್ನಮಂಗಲದ ನಿವಾಸಿ ಮಹಿಳೆಗೆ ಮೊದಲು ಮದುವೆಯಾಗಿತ್ತು. ಇಬ್ಬರು ಮಕ್ಕಳಿದ್ದು ಗಂಡ ವಿಚ್ಛೇದನ ಕೊಟ್ಟಿದ್ದ. ಇದಾದ ಬಳಿಕ ಸಾಕಿಬ್ ಅಹಮದ್ ಖುರೇಶಿ ಎಂಬಾಕೆ ಮೂರು ವರ್ಷದ ಹಿಂದೆ ಪರಿಚಯವಾಗಿದ್ದರು. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಲು ನಿಶ್ಚಯಿಸಿದ್ದರು. ಖುರೇಶಿ ಸಂತ್ರಸ್ತ ಮಹಿಳೆ ಮನೆಗೆ ಬಂದು ಹೋಗಿ ಬರುತ್ತಿದ್ದ. ಇಬ್ಬರು ಮದುವೆ ಸಂಬಂಧ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಫೆ.24 ರಂದು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಮದುವೆಯಾಗಬೇಕಿತ್ತು. ಆದಾಗಲೇ ಖುರೇಶಿ ಎಸ್ಕೇಪ್ ಆಗಿದ್ದಾನೆ.

ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ದೈಹಿಕವಾಗಿ ಬಳಿಸಿಕೊಂಡು ವಂಚನೆ ಮಾಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದು, ಖುರೇಶಿ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.












Click it and Unblock the Notifications