ಸಿಎಂ ಕುಮಾರಸ್ವಾಮಿ ಮನೆಯಲ್ಲಿ ಬಾಂಬ್ ಇದೆ: ಪೊಲೀಸರಿಗೆ ಕರೆ
ಬೆಂಗಳೂರು, ಡಿಸೆಂಬರ್ 18: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಮನೆಯಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ್ದ ಆರೋಪಿ ಮನ್ಸೂರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಸಿಎಂ ಮನೆಯಲ್ಲಿ ಬಾಂಬ್ ಇದೆ ಎಂದು ಮನ್ಸೂರ್ ಕರೆ ಮಾಡಿದ್ದು, ಆತನ ಹೆಸರು ಗೋಪಾಲ್ ಎಂದು ಹೇಳಿಕೊಂಡಿದ್ದ, ಆತ ಜೆಪಿ ನಗರ ಇನ್‌ಸ್ಪೆಕ್ಟರ್ ಹಿತೇಂದ್ರ ಅವರಿಗೆ ರಾತ್ರಿ 9.45ರ ಸುಮಾರಿಗೆ ಕಾಲ್ ಮಾಡಿದ್ದ, ಇದನ್ನು ಕೇಳಿ ಗಾಬರಿಗೊಂಡ ಪೊಲೀಸರು ತಕ್ಷಣವೇ ಎಸ್‌ಪಿ ದಳ, ಶ್ವಾನದಳವನ್ನು ಕರೆಸಿದ್ದರು.

ರಾತ್ರಿ ಇಡೀ ಜೆಪಿನಗರ ನಿವಾಸದ ಸುತ್ತಮುತ್ತ ಪರಿಶೀಲನೆ ನಡೆಸಿದ್ದಾರೆ, ಆದರೆ ಪರಿಶೀಲನೆ ವೇಳೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಬಳಿಕ ವ್ಯಕ್ತಿಯ ವಿರುದ್ಧ ದೂರು ದಾಖಲಿಗಿದ್ದು, ಪೊಲೀಸರು ಮನ್ಸೂರ್ ಎಂಬಾತನನ್ನು ಬಂಧಿಸಿದ್ದಾರೆ.












Click it and Unblock the Notifications