ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ನೀನು ಚೈನೀಸ್ ಎಂದು ನಿಂದಿಸಿ ಹಲ್ಲೆ, ದರೋಡೆ

|
Google Oneindia Kannada News

ಬೆಂಗಳೂರು, ಮೇ 24 : ಮೊಮೊ ಅಂಗಡಿ ಮಾಲೀಕನಿಗೆ ನೀನು ಚೀನಾದವನು ಎಂದು ನಿಂದಿಸಿ ಹಣ, ಮೊಬೈಲ್ ಫೋನ್ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹದೇಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Recommended Video

ನಾಳೆ ಬೇಕಾಬಿಟ್ಟಿ ರಸ್ತೆಗೆ ಇಳಿದರೆ ಕಠಿಣ ಶಿಕ್ಷೆ | Curfew | Oneindia Kannada

ಡಾರ್ಜಿಲಿಂಗ್ ಮೂಲದ 30 ವರ್ಷದ ರೋಹಿತ್ ತಾಪಾ ಸಹಕಾರ ನಗರದಲ್ಲಿ ಮೊಮೊ ಅಂಗಡಿ ಇಟ್ಟುಕೊಂಡಿದ್ದಾರೆ. ಲಾಕ್ ಡೌನ್ ಪರಿಣಾಮ ಅಂಗಡಿ ಮಚ್ಚಲಾಗಿದ್ದು, ಮಂಗಳವಾರ ಅಂಗಡಿ ತೆರೆಯಲು ಸೋಮವಾರ ಖರೀದಿಗೆ ಹೋಗಿದ್ದರು.

ಮಣಿಪುರ ಮಹಿಳೆಗೆ ಚೀನಾಕ್ಕೆ ಹೋಗಿ ಎಂದು ನಿಂದಿಸದವ ಬಂಧನ! ಮಣಿಪುರ ಮಹಿಳೆಗೆ ಚೀನಾಕ್ಕೆ ಹೋಗಿ ಎಂದು ನಿಂದಿಸದವ ಬಂಧನ!

ಸೋಮವಾರ ಸಂಜೆ ಕೆ. ಆರ್. ಪುರಂ ರೈಲ್ವೆ ನಿಲ್ದಾಣದ ಬಳಿಕ ಯುವಕನೊಬ್ಬ ರೋಹಿತ್ ತಾಪಾ ಬೈಕ್ ಅಡ್ಡಗಟ್ಟಿ ಡ್ರಾಪ್ ಕೇಳಿದ್ದಾನೆ. ಫ್ಲೈ ಓವರ್ ಸಮೀಪ ಬಿಡುವಂತೆ ಕೇಳಿಕೊಂಡಿದ್ದಾನೆ. ನಮ್ಮ ಮೆಟ್ರೋ ಮಾರ್ಗ ನಿರ್ಮಾಣ ಹಂತದ ಬಳಿ ಬಂದಾಗ ಬೈಕ್ ನಿಲ್ಲಿಸಲು ಕೋರಿದ್ದಾನೆ.

ವಿಶ್ವ ಆರೋಗ್ಯ ಅಧೀವೇಶನದಲ್ಲಿ ಚೀನಾ ಅಧ್ಯಕ್ಷರ ಮಹತ್ವದ ಹೇಳಿಕೆವಿಶ್ವ ಆರೋಗ್ಯ ಅಧೀವೇಶನದಲ್ಲಿ ಚೀನಾ ಅಧ್ಯಕ್ಷರ ಮಹತ್ವದ ಹೇಳಿಕೆ

Man Abused Your Are Chinese And Robbed In Bengaluru

ರೋಹಿತ್ ಬೈಕ್ ನಿಲ್ಲಿಸಿದಾಗ ಸ್ನೇಹಿತರಿಗೆ ಕರೆ ಮಾಡಬೇಕು ಫೋನ್ ಕೊಡಿ ಎಂದು ಹೇಳಿದ್ದಾನೆ. ರೋಹಿತ್ ಫೋನ್ ನೀಡಿದಾಗ ಮತ್ತೆ ನಾಲ್ವರು ಯುವಕರು ಸ್ಥಳಕ್ಕೆ ಬಂದಿದ್ದಾರೆ. ರೋಹಿತ್‌ಗೆ ಚಾಕು ತೋರಿಸಿ ಬೆದರಿಸಿ ನಿರ್ಮಾಣ ಹಂತದ ಜಾಗಕ್ಕೆ ಕರೆದುಕೊಂಡು ಹೋಗಿದ್ದಾರೆ.

ಲಾಕ್‌ಡೌನ್‌; ರೊಚ್ಚಿಗೆದ್ದ ಕುಡುಕರಿಂದ ಬಾರ್ ದರೋಡೆ!ಲಾಕ್‌ಡೌನ್‌; ರೊಚ್ಚಿಗೆದ್ದ ಕುಡುಕರಿಂದ ಬಾರ್ ದರೋಡೆ!

ಬಳಿಕ ರೋಹಿತ್ ಮೇಲೆ ಹಲ್ಲೆ ನಡೆಸಿ, ಪರ್ಸ್‌ನಲ್ಲಿದ್ದ 7 ಸಾವಿರ ಹಣ, ಫೋನ್ ಕಿತ್ತುಕೊಂಡಿದ್ದಾರೆ. ಕೈಯಲ್ಲಿದ್ದ ಎರಡು ಬಂಗಾರದ ಉಂಗುರ ಕಿತ್ತುಕೊಂಡು ಎದೆ, ತೊಡೆ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾರೆ. ಕೈ ಬೆರಳಿಗೆ ಗಾಯ ಮಾಡಿದ್ದಾರೆ.

ಅಂಗಡಿಗೆ ದಿನಸಿ ತರಲು ಇಟ್ಟುಕೊಂಡಿರುವ ಹಣ ಅದನ್ನು ವಾಪಸ್ ಕೊಡಿ ಎಂದು ಕೇಳಿದ್ದಕ್ಕೆ, 'ನೀವು ಚೀನಾದವನು' ಎಂದು ನಿಂದಿಸಿ ಪುನಃ ಹಲ್ಲೆ ಮಾಡಿದ್ದಾರೆ. ರೋಹಿತ್ ಈ ಕುರಿತು ಮಹದೇವಪುರ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಘಟನೆ ನಡೆದ ಸ್ಥಳದ ಸಿಸಿಟಿಇವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟು 5 ಜನರ ತಂಡ ರೋಹಿತ್ ಮೇಲೆ ಹಲ್ಲೆ ಮಾಡಿ, ಚಾಕುವಿನಿಂದ ಚುಚ್ಚಿ ದರೋಡೆ ಮಾಡಿದೆ.

English summary
30 year man who owned Chines food outlet in Sahakarnagar robbed by 5 people gang and abused him your are Chinese. Complaint filed in Mahadevapura police station limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X