ಜೂನ್ 4ರಂದು ಮಲೆಗಳಲ್ಲಿ ಮದುಮಗಳು ಇಂಗ್ಲೀಷ್ ಅನುವಾದ ಕೃತಿ ಬಿಡುಗಡೆ
ಬೆಂಗಳೂರು, ಮೇ 29: ರಾಷ್ಟ್ರಕವಿ ಕುವೆಂಪು ವಿರಚಿತ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ಇಂಗ್ಲೀಷ್ ಅನುವಾದ ಕೃತಿ The Bride In the Rainy Mountains ಬಿಡುಗಡೆಗೆ ಸಿದ್ಧವಾಗಿದ ಎಂದು ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ತಿಳಿಸಿದೆ. ಜೂನ್ 4ರಂದು ಬೆಂಗಳೂರಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಆಯೋಜನೆಯಾಗಿದೆ.
ಪುಸ್ತಕದ ಹೆಸರು: The Bride In the Rainy Mountains
ಕನ್ನಡ ಮೂಲಕೃತಿ: ಕುವೆಂಪು ವಿರಚಿತ 'ಮಲೆಗಳಲ್ಲಿ ಮದುಮಗಳು' ಕಾದಂಬರಿ
ಅನುವಾದಕರು: ಡಾ. ಕೆ .ಎಂ ಶ್ರೀನಿವಾಸಗೌಡ ಮತ್ತು ಜಿ.ಕೆ ಶ್ರೀಕಂಠಮೂರ್ತಿ
ಬಿಡುಗಡೆ: ಡಾ. ಎಚ್. ಎಚ್ ಶಿವಪ್ರಕಾಶ್, ಹಿರಿಯ ಕವಿ ಮತ್ತು ನಾಟಕಕಾರರು
ಪುಸ್ತಕ ಕುರಿತು: ಡಾ ರಾಜೇಂದ್ರ ಚೆನ್ನಿ, ವಿಶ್ರಾಂತ ಪ್ರಾಧ್ಯಾಪಕರು ಮತ್ತು ವಿಮರ್ಶಕರು, ಶಿವಮೊಗ್ಗ

***
ಪುಸ್ತಕದ ಹೆಸರು: ಕಟ್ಟುವ ಹಾದಿಯಲ್ಲಿ...(ಕುವೆಂಪು ಪ್ರತಿಷ್ಠಾನದ ಉಗಮ ಮತ್ತು ವಿಕಾಸ)
ಲೇಖಕರು: ಕಡಿದಾಳ್ ಪ್ರಕಾಶ್
ಬಿಡುಗಡೆ: ಟಿ.ಎಸ್ ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕರು
ಪುಸ್ತಕ ಕುರಿತು: ಡಾ. ಬಸವರಾಜ ಕಲ್ಗುಡಿ, ವಿಶ್ರಾಂತ ಪ್ರಾಧ್ಯಾಪಕರು ಮತ್ತು ವಿಮರ್ಶಕರು, ಬೆಂಗಳೂರು
ಅಧ್ಯಕ್ಷತೆ: ನಾಡೋಜ ಪ್ರೊ. ಹಂ.ಪ ನಾಗರಾಜಯ್ಯ, ಅಧ್ಯಕ್ಷರು, ಕುವೆಂಪು ಪ್ರತಿಷ್ಠಾನ
ಕಾರ್ಯಕ್ರಮಕ್ಕೆ ಶುಭ ಹಾರೈಸುವವರು:
ಸಹ್ಯಾದ್ರಿ ಸಂಘ, ಬೆಂಗಳೂರು
ಸಮಾಜಮುಖಿ ಪ್ರಕಾಶ, ಬೆಂಗಳೂರು
ಅವಿರತ ಪ್ರತಿಷ್ಠಾನ, ಬೆಂಗಳೂರು
ಎಂ ಚಂದ್ರಶೇಖರ್ ಪ್ರತಿಷ್ಠಾನ, ಬೆಂಗಳೂರು
ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ, ಬೆಂಗಳೂರು
ಐಬಿಎಚ್ ಪ್ರಕಾಶನ, ಬೆಂಗಳೂರು
ಕಾರ್ಯಕ್ರಮದ ನೇರ ಪ್ರಸಾರವನ್ನು ಬುಕ್ ಬ್ರಹ್ಮ ಜಾಲ ತಾಣ ಮೂಲಕ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಬಹುದು.












Click it and Unblock the Notifications