ಶಾಂತಾ ಕುಲಕರ್ಣಿಗೆ ಮಕ್ಕಳ ರಂಗ ಪುರಸ್ಕಾರ

ಸಂಜೆ 6.30 ಗಂಟೆಗೆ ರಂಗಭೂಮಿ ಮತ್ತು ಸಿನಿಮಾ ಬಾಲನಟ ಮಾಸ್ಟರ್ ಅನಿಲಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಆಯುಕ್ತ ಹಾಗೂ ನಾಟಕಕಾರ ಬಿ.ಟಿ. ಮುನಿರಾಜಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಹಾಗೂ ಪ್ರಶಸ್ತಿ ಪ್ರದಾನ ಮಾಡುವರು.
ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿ ಹಾಗೂ ಕತೆಗಾರ ಕಾ.ತ. ಚಿಕ್ಕಣ್ಣ ಅಭಿನಂದನೆ ನುಡಿಯುವರು. ಅತಿಥಿಗಳಾಗಿ ಮಕ್ಕಳ ರಂಗತಜ್ಞ ಸಿ. ಲಕ್ಷ್ಮಣ್, ಕವಯಿತ್ರಿ ಹಾಗೂ ಹಿರಿಯ ರಂಗನಟಿ ಜಯಲಕ್ಷ್ಮೀ ಪಾಟೀಲ ಹಾಗೂ ಸಾಹಿತಿ ಯೋಗೇಶ ಮಾಸ್ಟರ್ ಪಾಲ್ಗೊಳ್ಳುವರು. ಶಾಂತಾ ಕುಲಕರ್ಣಿ ಅವರಿಗೆ ಸ್ಪರ್ಷ ಮಕ್ಕಳ ರಂಗ ಪುರಸ್ಕಾರ ಪ್ರದಾನ ಮಾಡಲಾಗುವುದು. [ಯೋಗೇಶ ಮಾಸ್ಟರ್ ಯಾರು?]
ಕಾರ್ಯಕ್ರಮದಲ್ಲಿ ಮೂಕ ನಾಟಕ 'ಫೀನಿಕ್ಸ್' ಪ್ರದರ್ಶಿಸಲಾಗುವುದು. ಜನಸಂಸ್ಕೃತಿ ಪ್ರತಿಷ್ಠಾನ ವತಿಯಿಂದ ನಾಟಕ ಪ್ರಸ್ತುತಪಡಿಸಲಾಗಿದೆ. ಚಿ. ಶ್ರೀನಿವಾಸರಾಜು ನಾಟಕ ರಚಿಸಿದ್ದು, ಸುಮ ಅವರು ನಿರ್ದೇಶನ ನೀಡಿದ್ದಾರೆ.












Click it and Unblock the Notifications