ಬೆಂಗಳೂರು: ಎಲ್ಲೆಲ್ಲಿ ಶಿವರಾತ್ರಿ ನಗೆ ಜಾಗರಣೆ?

ಬೆಂಗಳೂರು, ಫೆ. 17 : ಶಿವರಾತ್ರಿ ಪ್ರಯುಕ್ತ ನಗರದ ಪ್ರಮುಖ ದೇವಾಲಯಗಳಲ್ಲಿ ಭಕ್ತರು ಬೆಳಗ್ಗೆಯಿಂದ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಶಿವರಾತ್ರಿ ಜಾಗರಣೆಗೂ ಅನೇಕ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗೆ ಹಬ್ಬ, ಕಾವ್ಯ ತತ್ವ ಪ್ರಸಾರ ದಂಥ ಕಾರ್ಯಕ್ರಮಗಳು ಬೆಳಗಿನವರೆಗೆ ನಡೆಯಲಿದೆ. ನಗರದ ಮಲ್ಲೇಶ್ವರಂ, ರಾಜಾಜಿನಗರ, ಕಲಾಗ್ರಾಮ, ಬಸವೇಶ್ವರ ನಗರ, ಕಾಡಿಗುಡಿ ಸೇರಿದಂತೆ ಹಲವು ಭಾಗದಲ್ಲಿ ಜಾಗರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.[ಪಾಂಡವರು ತಂಗಿದ್ದ ಭೀಮೇಶ್ವರದಲ್ಲಿ ಶಿವರಾತ್ರಿ ಉತ್ಸವ]

bengaluru

ಸಿರೂರು ಪಾರ್ಕ್, ಮಂತ್ರಿ ಮಾಲ್ ಎದುರು ಮಲ್ಲೇಶ್ವರಂ
: ಪ್ರಾಣೇಶ್, ರವಿಭಜಂತ್ರಿ, ಬಸವರಾಜ ಮಹಾಮನಿ, ಡಾ.ಬೆಣ್ಣೆ ಬಸವರಾಜು, ಮಿಮಿಕ್ರಿ ಶರಣು, ನರಸಿಂಹ ಜೋಷಿ, ವೈಜನಾಥ್ ಸಜ್ಜನ್‌ಶೆಟ್ಟಿ, ಜೆ.ಮರಿಯಪ್ಪ, ಖ್ಯಾತ ಜಾದೂಗಾರ ಪ್ರಹ್ಲಾದಾಚಾರ್ಯ, ಮೈಸೂರು ಆನಂದ್, ಎಂ.ಎಸ್.ಎನ್., ಮಿಮಿಕ್ರಿ ರಮೇಶ್‌ಬಾಬು, ಸುಪ್ರಭಾ, ವಿಕ್ರಮ್ ಸೂರಿ ಮತ್ತು ತಂಡದಿಂದ ಇಲ್ಲಿ ಜಾಣ- ಜಾಣೆಯರ ನಗೆ ಜಾಗರಣೆ ಕಾರ್ಯಕ್ರಮ ಸಂಜೆ 7 ಕ್ಕೆ ಆರಂಭವಾಗಲಿದೆ.

ಕಲಾಗ್ರಾಮ, ಜ್ಞಾನಭಾರತಿ ಆವರಣ, ಮಲ್ಲತಹಳ್ಳಿ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯಿಂದ ತತ್ವಪ್ ಕಾವ್ಯ ಶಿವರಾತ್ರಿ

ಬಸವೇಶ್ವರನಗರ, ಫ್ಕಾರೆನ್ಸ್ ಗ್ರೌಂಡ್: ಪ್ರೋ. ಕೃಷ್ಣೇಗೌಡ ಮತ್ತು ತಂಡದಿಂದ ನಗೆ ಜಾಗರಣೆ ಕಾರ್ಯಕ್ರಮ ಸಂಜೆ 6 ರಿಂದ ಆರಂಭ[ಚಿತ್ರಗಳಲ್ಲಿ: ಶಿವ ಶಿವ ಎಂದರೆ ಭಯವಿಲ್ಲವೆಂದ ಭಕ್ತ ಕೋಟಿ]

ಜಯನಗರ : ಜಯನಗರದ ಶರಣ ಸಂಗಮ ವತಿಯಿಂದ 4ನೆ ಬ್ಲಾಕ್‌ನ ಬಿಬಿಎಂಪಿ ಆಟದ ಮೈದಾನದಲ್ಲಿ ನಗೆ ಜಾಗರಣೆ ನಡೆಯಲಿದೆ. ಅಂಧ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ, ಅನಾಥ ಮಕ್ಕಳಿಗೆ ಪಾತ್ರೆ-ಬಟ್ಟೆ ವಿತರಣೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜೆಪಿ ನಗರ : ಜೆಪಿ ನಗರ 2ನೆ ಹಂತ ಶ್ರೀ ದುರ್ಗಾಪರಮೇಶ್ವರಿ ಆಟದ ಮೈದಾನದಲ್ಲಿ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮವಿದೆ. ಮಿಮಿಕ್ರಿ ದಯಾನಂದ ಮತ್ತು ತಂಡದಿಂದ ಹಾಸ್ಯಲೋಕ, ಡಾ.ಸುವರ್ಣಾ ರವಿಶಂಕರ್ ಅವರಿಂದ ಸಮೂಹ ನೃತ್ಯ, ಸುಪ್ರಿತ್ ಗಾಂಧಾರ ಮತ್ತು ತಂಡದಿಂದ ಸಂಗೀತ, ನೃತ್ಯ, ಸಂಗೀತಶೆಟ್ಟಿ ಅವರಿಂದ ಭಕ್ತಿಸೌರಭ, ರಾಧಿಕಾ ಮಕರಾಂ ಅವರಿಂದ ಒಡಿಸ್ಸಿ, ಎಸ್.ಆಕಾಶ್ ಅವರಿಂದ ಹಿಂದೂಸ್ಥಾನಿ ಕೊಳಲು ವಾದನ ನಡೆಯಲಿದೆ.

ಪ್ರಕಾಶನಗರ : ಪ್ರಕಾಶನಗರದ ಓಂ ಭುವನೇಶ್ವರ ಶ್ರೀಯೋಗ ಮುನೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಾಗೂ ಕರಗ ವಾರ್ಷಿ ಕೋತ್ಸವದ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಗೆ ಶಿವತಾಂಡವ, ಭಕ್ತಿಗೀತೆಗಳು, ರಾತ್ರಿ 12 ಗಂಟೆಗೆ ಅಭಿಷೇಕ, ಲಕ್ಷಾರ್ಚನೆ ನಡೆಯಲಿದೆ.

ಸರ್ವಜ್ಞ ನಗರ: ಸರ್ವಜ್ಞ ನಗರದ ದೊಡ್ಡಕುಂಟೆ ಶ್ರೀಮತ್ ತಿಂಥಿಣಿ ಮೌನಗುರು ಸ್ವಾಮಿಗಳ ಮಠಾಲಯದಲ್ಲಿ ಗುರುಪೂಜಾರಾಧನಾ ಮತ್ತು ಮಹಾ ಶಿವರಾತ್ರಿ ಮಹೋತ್ಸವ ನಡೆಯಲಿದ್ದು ಸಂಜೆ 6.30ಕ್ಕೆ ರೇಣುಕಾ ಮಂಜುನಾಥ್ ಮತ್ತು ವೃಂದದಿಂದ ಕರ್ನಾಟಕ ಸಂಗೀತ ಕಚೇರಿ ಏರ್ಪಡಿಸಲಾಗಿದೆ.

ಚಿಕ್ಕಪೇಟೆ: ಚಿಕ್ಕಪೇಟೆಯ ಶ್ರೀ ಮಹಂತಿನ ಮಠದಲ್ಲಿ ಶಿವರಾತ್ರಿ ಪ್ರಯುಕ್ತ ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿ, ಶ್ರೀ ಕ್ಷೇತ್ರನಾಥ ವಿರೂಪಾಕ್ಷ ಸ್ವಾಮಿ ಹಾಗೂ ಸರ್ವ ದೇವರುಗಳಿಗೆ ಏಕವಾರ ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತಿತರ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾತ್ರಿ 11 ಗಂಟೆಯಿಂದ ಬೆಳಗಿನ ಜಾವದವರೆಗೆ ಶ್ರೀ ಶಿವಶಂಕರ್ ಶಾಸ್ತ್ರಿ ತಂಡದಿಂದ ಸಿದ್ಧಾಂತ ಶಿಖಾಮಣಿ ಗ್ರಂಥ ಪಾರಾಯಣ ಹಾಗೂ ಶಿವಭಜನೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+