ಬೆಂಗಳೂರಿನ ವಿಲ್ಲಾದಲ್ಲಿ ಮಧ್ಯಪ್ರದೇಶದ ಶಾಸಕರ ವಾಸ್ತವ್ಯ

ಬೆಂಗಳೂರು, ಮಾರ್ಚ್ 05 : ಮಧ್ಯಪ್ರದೇಶದಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಬಿಜೆಪಿ ಪ್ರಯತ್ನ ನಡೆಸಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಕಮಲನಾಥ್ ಸರ್ಕಾರಕ್ಕೆ ಬೆಂಬಲ ನೀಡಿದ್ದ ಬಿಎಸ್‌ಪಿ, ಪಕ್ಷೇತರ ಮತ್ತು ಕೆಲವು ಕಾಂಗ್ರೆಸ್ ಶಾಸಕನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಶಾಸಕರುನ್ನು ಹರ್ಯಾಣ ಮತ್ತು ಕರ್ನಾಟಕಕ್ಕೆ ಕರೆದುಕೊಂಡು ಹೋಗಲಾಗಿದೆ.

Madhya Pradesh MLAs Found In Bengaluru Villas

ಹರ್ಯಾಣದ ಐಷಾರಾಮಿ ಹೋಟೆಲ್‌ನಲ್ಲಿದ್ದ ಶಾಸಕರನ್ನು ಭೋಪಾಲ್‌ಗೆ ಕರೆದುಕೊಂಡು ಬರಲಾಗಿದೆ. ಭೋಪಾಲ್‌ನಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಅವರನ್ನು ಕರೆದುಕೊಂಡು ಬರಲಾಗಿದ್ದು, ಕಾಂಗ್ರೆಸ್‌ನ ಬೇರೆ ಶಾಸಕರು ಅವರಿಗೆ ಕಾವಲಿದ್ದಾರೆ.

ಮಧ್ಯಪ್ರದೇಶದ ಕೆಲವು ಕಾಂಗ್ರೆಸ್, ಪಕ್ಷೇತರ ಸದಸ್ಯರು ಬೆಂಗಳೂರಿನಲ್ಲಿ ಇದ್ದಾರೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಆರೋಪ ಮಾಡಿತ್ತು. ವೈಟ್‌ಫೀಲ್ಡ್‌ ಬಳಿಯ ವಿಲ್ಲಾದಲ್ಲಿ ಅವರು ಪತ್ತೆಯಾಗಿದ್ದಾರೆ. ಅವರ ಫೋನ್‌ಗಳನ್ನು ಸ್ವಿಚ್‌ ಆಫ್‌ ಮಾಡಲಾಗಿದೆ.

ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, "ಬಿಜೆಪಿ ಕಮಲನಾಥ್ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ಶಾಸಕರಿಗೆ 25 ರಿಂದ 35 ಕೋಟಿ ಹಣ ನೀಡುವ ಆಮಿಷವೊಡ್ಡಲಾಗಿದೆ" ಎಂದು ಆರೋಪಿಸಿದ್ದರು.

ಮಧ್ಯಪ್ರದೇಶದಲ್ಲಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 107, ಬಿಎಸ್‌ಪಿ 2, ಎಸ್‌ಪಿ ಒಬ್ಬರು ಶಾಸಕರ ಬಲ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+