Get Updates
Get notified of breaking news, exclusive insights, and must-see stories!

ಜನಾರ್ದನ ಹೋಟೆಲ್ ದೋಸೆ ಸವಿದ ವೆಂಕಯ್ಯ ನಾಯ್ಡು!

ಬೆಂಗಳೂರು, ಜೂನ್ 05: ಮಾಜಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಬೆಂಗಳೂರಿನಲ್ಲಿ ದೋಸೆ ಸವಿದು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅಭಿಷೇಕ್ ಅಂಬರೀಷ್ ಮತ್ತು ಅವಿವಾ ವಿವಾಹದಲ್ಲಿ ಪಾಲ್ಗೊಳ್ಳಲು ಅವರು ನಗರಕ್ಕೆ ಸೋಮವಾರ ಆಗಮಿಸಿದ್ದರು.

ಎಂ. ವೆಂಕಯ್ಯ ನಾಯ್ಡು ಸೋಮವಾರ ಶಿವಾನಂದ ಸರ್ಕಲ್‌ನಲ್ಲಿರುವ ಜನಾರ್ದನ ಹೋಟೆಲ್‌ನಲ್ಲಿ ಮಸಾಲೆ ದೋಸೆ ಸವಿದಿದ್ದಾರೆ. 'ನನ್ನ ಇಷ್ಟದ ಉಪಹಾರ ದೋಸೆಯನ್ನು ಬೆಂಗಳೂರಿನ ಜನಾರ್ದನ ಹೋಟೆಲ್‌ನಲ್ಲಿ ಸವಿದೆ' ಎಂದು ಅವರು ಮಸಾಲೆ ದೋಸೆಯ ಚಿತ್ರವನ್ನು ಸಹ ಟ್ವೀಟ್ ಮಾಡಿದ್ದಾರೆ.

M Venkaiah Naidu Enjoyed Dose At Janardhana Hotel Bengaluru

'ನಾನು ಎರಡು ದಶಕದಿಂದ ಹೋಟೆಲ್‌ಗೆ ಭೇಟಿ ನೀಡುತ್ತಿದ್ದೇನೆ. ಈಗಿನ ತಲೆಮಾರಿನ ಮಾಲೀಕರು ಮತ್ತು ಹೋಟಲ್‌ನ ಹಿರಿಯ ಸಿಬ್ಬಂದಿಗಳನ್ನು ಭೇಟಿ ಮಾಡಿದೆ. ಅವರು ನನ್ನನ್ನು ಹಲವು ವರ್ಷಗಳಿಂದ ಬಲ್ಲರು' ಎಂದು ವೆಂಕಯ್ಯ ನಾಯ್ಡು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಹಳೆಯ ಹೋಟೆಲ್; ಬೆಂಗಳೂರು ನಗರದ ಶಿವಾನಂದ ಸರ್ಕಲ್‌ನಲ್ಲಿರುವ ಜನಾರ್ದನ ಹೋಟೆಲ್‌ ಬಹಳ ಹಿಂದಿನ ಹೋಟೆಲ್. ಈ ಹೋಟೆಲ್ ರಾಜಕಾರಣಿಗಳಿಗೆ ಅಚ್ಚುಮೆಚ್ಚು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಇಲ್ಲಿಗೆ ಆಗಮಿಸಿ ಉಪಹಾರ ಸವಿಯುತ್ತಾರೆ. ಅದರಲ್ಲೂ ಇಲ್ಲಿನ ದೋಸೆಗೆ ಅಪಾರ ಅಭಿಮಾನಿ ಬಳಗವಿದೆ.

ಎಂ. ವೆಂಕಯ್ಯ ನಾಯ್ಡು ಬೆಂಗಳೂರು ನಗರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಬಿಜೆಪಿ ಪಕ್ಷದ ವಿವಿಧ ಹುದ್ದೆಯಲ್ಲಿದ್ದ ಕಾಲದಿಂದಲೂ ನಗರದಲ್ಲಿ ಅವರು ಉತ್ತಮ ಸ್ನೇಹಿತರ ಬಳಗ ಹೊಂದಿದ್ದಾರೆ. ಇಂದು ನಗರಕ್ಕೆ ಆಗಮಿಸಿದ್ದ ಅವರು ಜನಾರ್ದನ ಹೋಟೆಲ್ ದೋಸೆ ಸವಿದು ಮತ್ತೆ ಹಳೆಯ ನೆನಪುಗಳನ್ನು ಮಾಡಿಕೊಂಡಿದ್ದಾರೆ.

M Venkaiah Naidu Enjoyed Dose At Janardhana Hotel Bengaluru

ಬೆಂಗಳೂರು ನಗರದ ಬೆಳಗಿನ ಉಪಹಾರದಲ್ಲಿ ಇಡ್ಲಿ, ವಡೆ ಎಷ್ಟು ಪ್ರಸಿದ್ಧಿಯೋ, ಮಸಾಲೆ ದೋಸೆಯೂ ಸಹ ಅಷ್ಟೇ ಪ್ರಸಿದ್ಧಿ. ಅನೇಕ ಗಣ್ಯರು ನಗರಕ್ಕೆ ಆಗಮಿಸಿದಾಗ ನಗರದ ಖ್ಯಾತ ಹೋಟೆಲ್‌ಗಳಿಗೆ ಹೋಗಿ ದೋಸೆ ಸವಿಯುತ್ತಾರೆ. ಕೆಲವು ದಿನಗಳ ಹಿಂದೆ ಮಲ್ಲೇಶ್ವರದ ಸಿಟಿಆರ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಮಸಾಲೆ ದೋಸೆ ಸವಿದಿದ್ದರು.

ಮಾಜಿ ಸಚಿವ, ರೆಬಲ್ ಸ್ಟಾರ್ ದಿ. ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್-ಅವಿವಾ ವಿವಾಹ ಅರಮನೆ ಮೈದಾನದಲ್ಲಿ ನಡೆಯಿತು. ವೆಂಕಯ್ಯ ನಾಯ್ಡು ವಿವಾಹಕ್ಕೆ ತೆರಳಿ ನವ ವಧುವರರಿಗೆ ಆಶೀರ್ವಾದ ಮಾಡಿದರು.

ಅಂಬರೀಷ್-ಅವಿವಾ ವಿವಾಹದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಜೂನ್ 7ರಂದು ಅದ್ಧೂರಿಯಾಗಿ ಆರತಕ್ಷತೆ ಅರಮನೆ ಮೈದಾನದಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+