ಜ.11ರಂದು ಬೆಂಗಳೂರಲ್ಲಿ 'ಕೇಜ್ರಿವಾಲ್‌ ಜೊತೆ ಭೋಜನ'

ಬೆಂಗಳೂರು, ಜ. 3 : ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಪಕ್ಷಕ್ಕೆ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಜ.11ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 'ಕೇಜ್ರಿವಾಲ್ ಜೊತೆ ಭೋಜನ' ಎಂಬ ಕಾರ್ಯಕ್ರಮವನ್ನು ಅಂದು ಎಎಪಿ ರಾಜ್ಯ ಘಟಕ ಆಯೋಜಿಸಿದೆ.

ಶುಕ್ರವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ಮುಖಂಡ ವಿ. ಬಾಲಕೃಷ್ಣನ್‌ ಅವರು, ಜ.11ರಂದು ಅರವಿಂದ್ ಕೇಜ್ರಿವಾಲ್ ಬೆಂಗಳೂರಿಗೆ ಆಗಮಿಸುತ್ತಿದ್ದು, 'ಕೇಜ್ರಿವಾಲ್ ಜೊತೆ ಭೋಜನ' ಎಂಬ ಕಾರ್ಯಕ್ರಮವನ್ನು ಅಂದು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

v balakrishnan

ಆಮ್ ಆದ್ಮಿ ಪಕ್ಷದ ನಿಧಿಗೆ ದೇಣಿಗೆ ನೀಡುವವರು ಅಂದು 20 ಸಾವಿರ ರೂ.ಗಳನ್ನು ನೀಡಿ, ಕೇಜ್ರಿವಾಲ್ ಜೊತೆ ಭೋಜನ ಮಾಡಬಹುದು ಎಂದರು. ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿ­ಸಿಕೊಂಡು ಅಥವ ದೂರವಾಣಿ ಕರೆ ಮೂಲಕ ಹೆಸರು ನೋಂದಣಿ ಮಾಡಿಕೊಂಡು ಕೇಜ್ರಿವಾಲ್‌ ಜೊತೆ ಭೋಜನ ಸವಿಯಬಹುದಾಗಿದೆ ಎಂದರು.[ಕೇಜ್ರಿವಾಲ್ ಜೊತೆ ಊಟಕ್ಕೆ 20 ಸಾವಿರ ರೂ.!]

ಪಕ್ಷಕ್ಕೆ ಪಾರದರ್ಶಕವಾಗಿ ಹಣ ಸಂಗ್ರಹಿಸುವುದು ಸ್ವಚ್ಛ ರಾಜಕೀಯದ ಒಂದು ಭಾಗ ಎಂದು ಆಮ್ ಆದ್ಮಿ ಪಕ್ಷ ನಂಬಿಕೆ ಇಟ್ಟುಕೊಂಡಿದೆ. ಆದ್ದರಿಂದ ಕಳೆದ ಬಾರಿ ಚುನಾವಣೆಯಲ್ಲಿ ಮಾಡಿದಂತೆ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ, ಅರವಿಂದ್ ಕೇಜ್ರಿವಾಲ್ ಪಕ್ಷಕ್ಕಾಗಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎಂದು ಬಾಲಕೃಷ್ಣನ್ ತಿಳಿಸಿದರು. [ಕೇಜ್ರಿವಾಲ್ ಡಿನ್ನರ್ : 93 ಲಕ್ಷ ಸಂಗ್ರಹ]

ಪಕ್ಷ ಪಡೆಯುವ ಪ್ರತಿ ದೇಣಿಗೆಯ ವಿವರಗಳನ್ನು ಪಕ್ಷದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಜ.11ರಂದು ಕೇಜ್ರೀವಾಲ್ ಜೊತೆ ಭೋಜನ ಸವಿಯುವ ಆಸಕ್ತಿ ಉಳ್ಳವರು 080-3301 3349 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ http://lunchwithak.aapkar.in/ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿ­ಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

93 ಲಕ್ಷ ಸಂಗ್ರಹಣೆ ಮಾಡಿದ್ದರು : ನವೆಂಬರ್‌ನಲ್ಲಿ ಮುಂಬೈನಲ್ಲಿ ಆಪ್ ಡಿನ್ನರ್ ಆಯೋಜನೆ ಮಾಡಿ 93 ಲಕ್ಷ ರೂ. ಸಂಗ್ರಹಿತ್ತು. ಭಾರತ ಮಾತ್ರವಲ್ಲದೇ ಅಮೆರಿಕದಲ್ಲಿಯೂ ಕೇಜ್ರಿವಾಲ್ ಡಿನ್ನರ್ ಆಯೋಜಿಸಿದ್ದರು. ಸದ್ಯ ಬೆಂಗಳೂರಿನ ಸರದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+