ಬೆಂಗಳೂರಲ್ಲಿ ಚಂದ್ರಗ್ರಹಣ ಕಾರಣ ಹೆರಿಗೆಗೇ ಅರ್ಧಚಂದ್ರ
Recommended Video

ಬೆಂಗಳೂರು, ಜು.27: ಕೇತುಗ್ರಸ್ಥ ಚಂದ್ರಗ್ರಹಣ ಹಿನ್ನೆಲೆ ಗರ್ಭಿಣಿಯರು ಹೆರಿಗೆ ನಿಗದಿ ದಿನಾಂಕವನ್ನು ಮೂರು ದಿನ ಮುಂದಕ್ಕೆ ಹಾಕಲು ವೈದ್ಯರನ್ನು ಒತ್ತಾಯಿಸುತ್ತಿದ್ದಾರೆ. ಶುಭ ಅಶುಭ ಫಲ ಏನೇ ಇರಲಿ ಗ್ರಹಣದ ದಿನ ಹುಟ್ಟಿದ ಮಗು ಎಂಬ ಮಾತು ಬರಬಾರದು ಎಂಬ ಹಿನ್ನೆಲೆಯಲ್ಲಿ ಹರಿಗೆಯನ್ನು ಮುಂದೂಡಲು ಒತ್ತಾಯಿಸುತ್ತಿದ್ದಾರೆ.
ನಗರದ ಪೋರ್ಟಿಸ್ ಆಸ್ಪತ್ರೆಸೇರಿ ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಇದು ತಲೆನೋವಾಗಿದೆ. ಗ್ರಹಣದ ದಿನ ಹೆರಿಗೆಯಾದರೆ ಏನು ಅಡ್ಡ ಪರಿಣಾಮ ಉಂಟಾಗಬಹುದು ಎಂದು ವೈದ್ಯರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಗ್ರಹಣ ದಿನ ಹೆರಿಗೆಯಾಗುತ್ತೆ ಎಂದು ಹೇಳಿದ್ದಾರೆ ಅದನ್ನು ಮುಂದೂಡಲು ಸಾಧ್ಯವೇ ಎಂದು ಜ್ಯೋತಿಷಿಗಳ ಮೊರೆ ಹೋಗಿದ್ದಾರೆ.
ಗ್ರಹಣಕ್ಕೂ ಹೆರಿಗೆಗೂ ಯಾವುದೇ ರೀತಿಯ ಸಂಬಂಧವಿಲ್ಲ, ಹುಟ್ಟುವ ಮಗುವಿಗೆ ಗ್ರಹಣದಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ವೈದ್ಯರು ಮನವರಿಕೆ ಮಾಡಲು ಎಷ್ಟೇ ಪ್ರಯತ್ನಿಸಿದರೂ ಕೇಳುವ ಪರಿಸ್ಥಿತಿಯಲ್ಲಿ ಅವರಿಲ್ಲ, ಮಧ್ಯಮ ವರ್ಗದವರು ಹೆಚ್ಚು ಸಂಖ್ಯೆಯಲ್ಲಿ ಈ ರೀತಿಯ ವಿಚಾರಣೆಗೆ ಬರುತ್ತಿದ್ದಾರೆ.

ಸಂಪ್ರದಾಯಸ್ಥ ಕುಟುಂಬಗಳಂತೂ ಗ್ರಹಣ ಗ್ರಹಚಾರವೆಂದೇ ಭಾವಿಸಿದ್ದಾರೆ. ಹಿರಿಯ ಒತ್ತಡಕ್ಕೆ ಒಳಗಾಗಿ ಬಲವಂತದ ಹೆರಿಗೆಗೆ ಬೇಡಿಕೆ ಇಡುತ್ತಿದ್ದಾರೆ ಇನ್ನು ಶ್ರೀಮಂತ ಕುಟುಂಬಗಳು ಗ್ರಹಣದಿಂದ ಯಾವುದೇ ತೊಂದರೆಯಾಗಬಾರದು ಎಂದು ಮನೆಯಲ್ಲಿಯೇ ಪೂಜೆ ಪುನಸ್ಕಾರಗಳನ್ನು ಮಾಡಿಸುತ್ತಿದ್ದಾರೆ.












Click it and Unblock the Notifications