ವಾಯುಭಾರ ಕುಸಿತ, ಬೆಂಗಳೂರಲ್ಲಿ ಜಿಟಿ-ಜಿಟಿ ಮಳೆ, 5 ದಿನ ಛತ್ರಿ ಮರೆಯುವಂತಿಲ್ಲ
Recommended Video

ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ 5 ದಿನಗಳು ಬಾರಿ ಮಳೆ ಸಾಧ್ಯತೆ | Oneindia Kannada
ಬೆಂಗಳೂರು, ಅಕ್ಟೋಬರ್ 04: ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆಯೇ ಮಳೆ ಪ್ರಾರಂಭವಾಗಿದ್ದು, ಇದೇ ವಾತಾವರಣ ಇನ್ನೂ ಐದು ದಿನಗಳು ಮುಂದುವರೆಯಲಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಆಗುತ್ತಲಿದೆ. ಬೆಂಗಳೂರಿನಲ್ಲಿ ಬೆಳಿಗ್ಗೆಯೇ ಜಿಟಿ-ಜಿಟಿ ಮಳೆ ಪ್ರಾರಂಭವಾಗಿದ್ದು, ನಗರಕ್ಕೆ ತಂಪು ಸುರಿದಿದೆ.

ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಮುನ್ಸೂಚನೆ ನೀಡಲಾಗಿದೆ. ಉಡುಪಿ, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇನ್ನೂ ಒಂದು ವಾರದ ವರೆಗೆ ಮಳೆ ಸತತವಾಗಿ ಇರಲಿದೆ.
ಕೇರಳಕ್ಕೆ ಮತ್ತೆ ರೆಡ್ ಅಲರ್ಟ್ ನೀಡಲಾಗಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಭಾರಿ ಪ್ರವಾಹ ಕಂಡಿದ್ದ ಕೇರಳ ಈಗ ಮತ್ತೆ ಭಾರಿ ಮಳೆಗೆ ತಯಾರಾಗಬೇಕಿದೆ. ಅರಬ್ಬಿ ಸಮುದ್ರ ತೀರದ ಮೀನುಗಾರರು ಇನ್ನೂ ಒಂದು ವಾರದ ಕಾಲ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.












Click it and Unblock the Notifications