ಗಾರ್ಮೆಂಟ್ಸ್ ನೌಕರರ ಗೋಳಿನ ಕಥೆ ಬಿಚ್ಚಿಟ್ಟ ಸಾವಿತ್ರಿ
ಬೆಂಗಳೂರು, ಏಪ್ರಿಲ್ 19 : 'ನನಗೆ 8000 ಸಾವಿರ ವೇತನ ಬರುತ್ತದೆ. ಪತಿಗೆ 10 ಸಾವಿರ ಸಂಬಳ. ನಾನು ಕೆಲಸ ಮಾಡುವುದು ಅನಿವಾರ್ಯ. ಗಾರ್ಮೆಂಟ್ಸ್‌ನಲ್ಲಿ ಬರುವ ಸಂಬಳ ಕಡಿಮೆಯಾದರೂ ಕುಟುಂಬಕ್ಕೆ ಅದು ಆಧಾರ' ಎಂದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಸಾವಿತ್ರಿ ತಮ್ಮ ಮಾತು ಆರಂಭಿಸಿದರು.
ಬೆಂಗಳೂರಿನಲ್ಲಿ ಎರಡು ದಿನಗಳಿಂದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ಪಿಎಫ್ ಪಡೆಯುವ ನಿಯಮವನ್ನು ಸಡಿಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. [ಬೆಂಗಳೂರು ಪೊಲೀಸರ ಮೂರ್ಖತನ ಇದೇ ಮೊದಲಲ್ಲ]

ಸೋಮವಾರ ನೌಕರರು ನಡೆಸಿದ ಪ್ರತಿಭಟನೆಯಿಂದ 6 ತಾಸು ಸಂಚಾರ ದಟ್ಟಣೆ ಉಂಟಾಗಿತ್ತು. ಮಂಗಳವಾರ ಬೆಳಗ್ಗೆಯಿಂದ ನಗರದ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ. [ಗಾರ್ಮೆಂಟ್ಸ್ ಪ್ರತಿಭಟನೆ ಕ್ಷಣ ಕ್ಷಣದ ಮಾಹಿತಿ]
ಏಕೆ ಪ್ರತಿಭಟನೆ? : ಮೇ 1ರಿಂದ ಜಾರಿಗೆ ಬರುವ ಹೊಸ ನಿಯಮದ ಪ್ರಕಾರ ನಿವೃತ್ತಿಗೆ ಮೊದಲು ಪಿಎಫ್‌ನಲ್ಲಿ ಶೇ 50ರಷ್ಟು ಹಣವನ್ನು ಪಡೆಯಲು ಅವಕಾಶವಿಲ್ಲ. 57 ವರ್ಷ ಅಂದರೆ ನಿವೃತ್ತಿಗಿಂತ ಒಂದು ವರ್ಷ ಮೊದಲು ಪಿಎಫ್ ಹಣವನ್ನು ಪಡೆಯಬಹುದಾಗಿದೆ.
ಕೇಂದ್ರ ಸರ್ಕಾರ ಈ ನಿಯಮವನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿ ಸೋಮವಾರದಿಂದ ಪ್ರತಿಭಟನೆ ನಡೆಯುತ್ತಿದೆ. ಇಂದು ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದೆ. ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.

ಕಡಿಮೆ ಸಂಬಳವಾದರೂ ಅದು ಅಗತ್ಯ : 18 ವರ್ಷಗಳಿಂದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಆರ್.ಎಂ.ಸಾವಿತ್ರಿ ಅವರು ಒನ್ ಇಂಡಿಯಾ ಜೊತೆ ಮಾತನಾಡಿದ್ದು, 'ಕೇಂದ್ರ ಸರ್ಕಾರ ಬಡವರ ವಿರೋಧಿ' ಎಂದು ದೂರಿದ್ದಾರೆ.
ಮಾರತಹಳ್ಳಿಯ ಸುನೀತಾ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿರುವ ಸಾವಿತ್ರಿ ಅವರು ಕಡಿಮೆ ಸಂಬಳದಲ್ಲಿ ಬದುಕುತ್ತಿರುವ ನಮಗೆ ಪಿಎಫ್ ಪಡೆಯುವುದು ಅಗತ್ಯವಾಗಿದೆ. ತುರ್ತು ಸಂದರ್ಭದಲ್ಲಿ ನಾವು ಪಿಎಫ್ ಪಡೆದುಕೊಳ್ಳುತ್ತೇವೆ. ಆದರೆ, ಕೇಂದ್ರ ಸರ್ಕಾರ ಆ ಅವಕಾಶವನ್ನು ಏಕೆ ಕಿತ್ತುಕೊಳ್ಳುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಕಷ್ಟದಲ್ಲಿ ಕೆಲಸ ಮಾಡುತ್ತೇವೆ : '8 ಸಾವಿರ ಸಂಬಳಕ್ಕಾಗಿ ನಾವು 8 ಗಂಟೆ ಕಷ್ಟಪಟ್ಟು ಕೆಲಸ ಮಾಡಬೇಕು. ಯಾವುದೇ ವಿರಾಮವಿಲ್ಲದೇ ಕೆಲಸ ಮಾಡಬೇಕಾಗುತ್ತದೆ. ಯಂತ್ರದ ಮುಂದೆ ನಿಂತು ಊಟ ಮಾಡಬೇಕು. ಶೌಚಾಲಯಕ್ಕೆ ಹೋಗಲು ಮ್ಯಾನೇಜರ್ ಅನುಮತಿ ಪಡೆಯಬೇಕು' ಎನ್ನುತ್ತಾರೆ ಸಾವಿತ್ರಿ.
'ನಾವು ಕೆಲಸ ಮಾಡುವ ಸ್ಥಳವೂ ಚಿಕ್ಕದಾಗಿರುತ್ತದೆ. ಎಲ್ಲಾ ಮಹಿಳೆಯರನ್ನು ಅಲ್ಲಿ ಕೂಡಿ ಹಾಕಲಾಗುತ್ತದೆ. ಕಟ್ಟಡದಲ್ಲಿ ಸರಿಯಾದ ಗಾಳಿಯ ಸೌಲಭ್ಯವಿರುವುದಿಲ್ಲ. ಹಲವಾರು ಕಷ್ಟಗಳ ನಡುವೆಯೇ ನಾವು ಕೆಲಸ ಮಾಡುತ್ತೇವೆ' ಎನ್ನುತ್ತಾರೆ ಸಾವಿತ್ರಿ ಅವರು.
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ












Click it and Unblock the Notifications