ಲೋಕಾಯುಕ್ತ ಇನ್‌ಸ್ಪೆಕ್ಟರ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು
ಬೆಂಗಳೂರು, ಸೆಪ್ಟೆಂಬರ್ 12: ಎಂಬತ್ತು ಲಕ್ಷ ಹಣ ಪಡೆದು ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಲೋಕಾಯುಕ್ತ ಇನ್‌ಸ್ಪೆಕ್ಟರ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಮಂಡ್ಯ ಲೋಕಾಯುಕ್ತ ಕಚೇರಿಯಲ್ಲಿ ಇನ್‌ಸ್ಪೆಕ್ಟರ್ ಆಗಿರುವ ದಿನೇಶ್ ಕುಮಾರ್ 80 ಲಕ್ಷಗಳನ್ನು ಪಡೆದು ವಂಚನೆ ಮಾಡಿದ್ದಾರೆ, ಹಣ ವಾಪಸ್ ಕೇಳಿದರೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಿವಕುಮಾರ್ ಲೋಕಾಯುಕ್ತದಲ್ಲಿ ದೂರು ನೀಡಿದ್ದಾರೆ.
ತನ್ನ ಗ್ರಾಮ ಹೊಳೆನರಸೀಪುರದಲ್ಲಿ 20 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದೇನೆ, ಸೊಪ್ಪನ್ನು ಬೆಳೆದು ಅದನ್ನು ಹದ ಮಾಡಿ ಮಾರುಕಟ್ಟಯಲ್ಲಿ ಮಾರಿ ವ್ಯವಹಾರ ನಡೆಸಿಕೊಂಡು ಬರುತ್ತಿದ್ದೆ, ಸುಮಾರು 15 ವರ್ಷಗಳ ಹಿಂದೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಸಬ್‌ಇನ್‌ಸ್ಪಟೆಕ್ಟರ್ ಆಗಿದ್ದ ದಿನೇಶ ಕುಮಾರ್ ಅವರ ಪರಿಚಯವಾಗಿ ಉತ್ತಮ ಬಾಂಧವ್ಯ ಬೆಳೆಯಿತು.

ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣವಾದಾಗ ಇನ್‌ಸ್ಪೆಕ್ಟರ್ ದಿನೇಶ್ ಬಂದು ತಾನು ಕಷ್ಟದಲ್ಲಿದ್ದೇನೆ, ಯರುಯೂರು ಗ್ರಾಮದ ಲೋಕೇಶ್ ಅವರ 9500 ಕೋಟಿ ರೂ ಗಳನ್ನು ಆದಾಯ ತೆರಿಗೆ ಇಲಾಖೆಯವರು ವಶಪಡಿಸಿಕೊಂಡಿದ್ದಾರೆ ಅದೆಲ್ಲವೂ ಕಾನೂನು ಬದ್ಧ ಹಣ ಅದನ್ನು ಬಿಡಿಸಿಕೊಳ್ಳಲು ನೂರು ಕೋಟಿ ಲಂಚವಾಗಿ ನೀಡಬೇಕು.

ಹೇಗಾದರೂ ಮಾಡಿ ಹತ್ತು ಕೋಟಿ ಹೊಂದಿಸಿಕೊಡಿ ಎಂದು ಕೇಳಿದ್ದರು. ಬಳಿಕ ಸ್ನೇಹಿತರ ಬಳಿಯಿದ್ದ ಹಣವೆಲ್ಲಾ ಪಡೆದುಕೊಂಡು 80 ಲಕ್ಷ ಹಣವನ್ನು ನೀಡಿದ್ದೆ, ಹಣ ಪಡೆಯುವಾಗ ಲೋಕೇಶ್ ಕೂಡ ಜತೆಗಿದ್ದರು ಆದರೆ ಈಗ ಹಣ ವಾಪಸ್ ಕೊಡಿ ಎಂದು ಕೇಳಲು ಹೋದರೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.












Click it and Unblock the Notifications