'ಮತ್ತೊಮ್ಮೆ ಮೋದಿ' ಎಂದ ಎಕ್ಸಿಟ್ ಪೋಲ್ : ಪ್ರಕಾಶ್ ರೈ ಏನಂದ್ರು?
Recommended Video
ಬೆಂಗಳೂರು, ಮೇ 20: ಬಹುತೇಕ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ 'ಮತ್ತೊಮ್ಮೆ ಮೋದಿ' ಎಂದಿದ್ದು, ಈ ಕುರಿತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಪ್ರತಿಕ್ರಿಯೆ ನೀಡಿದ್ದಾರೆ.
"ಚುನಾವಣೋತ್ತರ ಸಮೀಕ್ಷೆ ಫಲಿತಾಂಶದ ಮೂಲಕ ಕೆಲವರು ಕೆಲದಿನ ಹಗಲುಗನಸು ಕಾಣಲು ಬಿಡಿ. ಆದರೆ ಮೇ 23 ರಂದು ನಿಮ್ಮ ಹಗಲುಗನಸು ಸುಳ್ಳು ಎಂಬುದನ್ನು ಜನರು ಸಾಬೀತುಪಡಿಸುತ್ತಾರೆ. ಅಲ್ಲಿಯವರೆಗೂ ಮಹಾತ್ಮಾ ಗಾಂಧೀಜಿಯವರು ಈ ಹಾಡನ್ನು ಹಾಡುತ್ತ, ಸಂಭ್ರಮಿಸೋಣ" ಎಂದು 'ರಘುಪತಿ ರಾಘವ್ ರಾಜಾರಾಮಾ' ಹಾಡಿನೊಂದಿಗಿನ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ ಪ್ರಕಾಶ್ ರೈ.
ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿಯ ಪಿಸಿ ಮೋಹನ್ ಮತ್ತು ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ಎದುರು ಪಕ್ಷೇತರ ಅಭ್ಯರ್ಥಿಯಾಗಿ ಪ್ರಕಾಶ್ ರಾಜ್ ಕಣಕ್ಕಿಳಿದಿದ್ದಾರೆ. ಮೊದಲು ತಮಗೆ ಕಾಂಗ್ರೆಸ್ ಬೆಂಬಲ ನೀಡಬಹುದು ಎಂದು ನಿರೀಕ್ಷಿಸಿದ್ದ ಅವರಿಗೆ, ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಮುಖಭಂಗವನ್ನುಂಟು ಮಾಡಿತ್ತು.
|
23 ರ ನಂತರ ರಿಲ್ಯಾಕ್ಸ್ ಮಾಡಿ!
ತಮ್ಮ ಎಲ್ಲಾ ನಾಟಕಗಳೂ ವಿಫಲವಾದ ಮೇಲೆ ಪ್ರಕಾಶ್ ರೈ ರಾಹುಲ್ ಗಾಂಧಿ ಅವರ ಮೊರೆಹೋಗುತ್ತಾರೆ. ರಾಹುಲ್ ಗಾಂಧಿ ಅವರನ್ನು ಕೇಳಿ, 23 ರ ನಂತರ ನಿಮಗೆ ರಿಲ್ಯಾಕ್ಸ್ ಮಾಡಲು ಒಳ್ಳೆಯ ಸ್ಥಳ ಸೂಚಿಸಬಹುದು- ಕಿಂಗ್ ಪಕ್ಷಿ
|
23 ರಂದು ಏನೇ ಆದರೂ ಸಂಭ್ರಮಿಸಿ!
ಈ ಟ್ವೀಟ್ ಅನ್ನು ಸೇವ್ ಮಾಡಿಟ್ಟುಕೊಳ್ಳಿ. 23 ರಂದು ಏನೇ ಆದರೂ ಸಂಭ್ರಮಿಸಿ ನೋಡೋಣ! ಆದರೆ ಇವಿಎಂ ದೋಷ ಎನ್ನುತ್ತ ನಿಮ್ಮ ಜಸ್ಟ್ ಆಸ್ಕಿಂಗ್ ನೊಂದಿಗೆ ನಮ್ಮ ಬಳಿ ಬರಬೇಡಿ- ರಮೇಶ್ ನಿಪ್ಪಾಣಿ
|
ಮೀಸೆ ಮಣ್ಣಾಗಲ್ಲ!
ಜಟ್ಟಿ ಜಾರಿ ಬಿದ್ರು ಮೀಸೆ ಮಣ್ಣು ಆಗಲ್ಲ-ಸುರೇಶ್ ಚಿಂಚೋಳಿ
|
ಜನ ನಿರ್ಧಾರ ಮಾಡಿದ್ದಾರೆ!
ಸರ್, ನೀವು ನಿಮಗೆ ಏನು ಬೇಕೋ ಅದನ್ನು ಹೇಳಬಹುದು. ಆದರೆ ಜನರು ಏನು ಮಾಡಬೇಕೋ ಅದನ್ನು ಅವರು ನಿರ್ಧರಿಸಿದ್ದಾರೆ. ಆದರೆ ಮೇ 23 ರಂದು ನೀವೆಲ್ಲಿರುತ್ತೀರಿ ಎಂಬುದನ್ನು ತಿಳಿಯಬೇಕು! ಅಕಸ್ಮಾತ್ ನೀವು ಹೇಳಿದ್ದು ಸತ್ಯವೇ ಆದರೆ ನಾನು ನಿಮ್ಮನ್ನು ಗ್ರೇಟ್ ಎನ್ನುತ್ತೇನೆ. ಸುಳ್ಳಾದರೆ ನೀವು ರಾಜಕೀಯ ಬಿಟ್ಟು ಚಲನಚಿತ್ರದಲ್ಲೇ ಮುಂದುವರಿಯಿರಿ. ಸಮೀಕ್ಷೆ ಮಾಡುವ ಏಜೆನ್ಸಿಗಳು ಮೂರ್ಖರು ಎಂದುಕೊಳ್ಳಬೇಡಿ-ಅರಸ್ ಟ್ರೂಲಿ ಶೀನೂ












Click it and Unblock the Notifications