ಎಲ್ಲಿದ್ದೀಯಪ್ಪ ಬಾಲಕೃಷ್ಣ? ಐಟಿ ಮುಖ್ಯಸ್ಥರ ಮೇಲೆ ಸಿಎಂ ಏಕವಚನದ ವಾಗ್ದಾಳಿ
Recommended Video

ಬೆಂಗಳೂರು, ಏಪ್ರಿಲ್ 10: ಆದಾಯ ತೆರಿಗೆ ಇಲಾಖೆ ಮುಖ್ಯಸ್ಥ ಬಾಲಕೃಷ್ಣ ಅವರ ವಿರುದ್ಧ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಹರಿಪ್ರಸಾದ್ ಪರ ಮಂಗಳವಾರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 'ಎಲ್ಲಿದ್ದೀಯಪ್ಪ ಬಾಲಕೃಷ್ಣ? ನಮ್ಮ ಜತೆ ಚೆಲ್ಲಾಟವಾಡಬೇಡ. ಮಂಡ್ಯಕ್ಕೆ 300 ಜನರನ್ನು ಕಳುಹಿಸಿ ರೇಡ್ ಮಾಡ್ತೀಯಾ' ಎಂದು ಹರಿಹಾಯ್ದರು.
ಚುನಾವಣಾ ಆಯೋಗಕ್ಕೆ ಬಾಲಕೃಷ್ಣ ನೀಡಿರುವ ದೂರು ಬಿಜೆಪಿಯ ಹೆಡ್ ಕ್ವಾಟ್ರಸ್‌ನಲ್ಲಿ ಸಿದ್ಧವಾಗಿದೆ. ಐಟಿ ಮುಖ್ಯಸ್ಥ ಬಾಲಕೃಷ್ಣ ಬಿಜೆಪಿಯ ಏಜೆಂಟ್. ಅವರ ಆಟಕ್ಕೆ ನಾವು ಹೆದರುವುದಿಲ್ಲ ಎಂದು ಕಿಡಿಕಾರಿದರು.

ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಅವರ ವರ್ಗಾವಣೆಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಚುನಾವಣೆಯಲ್ಲಿ ಆರು ಜಿಲ್ಲಾಧಿಕಾರಿಗಳನ್ನು ಬದಲಾಯಿಸಲಾಗಿದೆ. ಚುನಾವಣಾ ಆಯೋಗವೇ ಜಿಲ್ಲಾಧಿಕಾರಿಗಳನ್ನು ನೇಮಿಸಿದೆ. ನಾಳೆ ಹೊಸ ಜಿಲ್ಲಾಧಿಕಾರಿ ಮೇಲೆ ದೂರು ನೀಡಿದರೆ ಅವರನ್ನೂ ವರ್ಗಾವಣೆ ಮಾಡುತ್ತೀರಾ? ಎಂದು ಕೋಪದಿಂದ ಪ್ರಶ್ನಿಸಿದರು.
ಇಂತಹ ಚುನಾವಣಾ ಆಯೋಗವನ್ನು ನಾನು ಎಲ್ಲಿಯೂ ನೋಡಿಲ್ಲ. ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ, ಐಟಿ, ಸಿಬಿಐ ಎಲ್ಲವೂ ಪ್ರಧಾನಿ ಮೋದಿ ಅವರ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಆರೋಪಿಸಿದರು.
ಪುಲ್ವಾಮಾ ಉಗ್ರರ ದಾಳಿಯ ಕುರಿತು ಮಾಜಿ ಯೋಧರೊಬ್ಬರು ನನ್ನ ಬಳಿ ಹೇಳಿದ್ದನ್ನು ನಾನು ಪ್ರಸ್ತಾಪಿಸಿದ್ದೆ. ಆದರೆ, ಕೆಲವು ಮಾಧ್ಯಮಗಳು ನನ್ನ ಭಾಷಣವನ್ನು ತಿರುಚಿ ಪ್ರಸಾರ ಮಾಡಿವೆ. ನೀವು ಬೇಕಾದರೆ ನನ್ನ ಭಾಷಣವನ್ನು ಆಲಿಸಿ. ವಾಸ್ತವ ಏನೆಂದು ನಿಮಗೇ ಅರ್ಥವಾಗುತ್ತದೆ ಎಂದು ಹೇಳಿದರು.












Click it and Unblock the Notifications