ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೇಜಸ್ವಿನಿಗೆ ಕೈತಪ್ಪಿದ ಟಿಕೆಟ್: ಯಡಿಯೂರಪ್ಪ ಅವರಿಗೂ ಅಚ್ಚರಿ!

|
Google Oneindia Kannada News

Recommended Video

Tejasvi Surya: ಯಡಿಯೂರಪ್ಪ ಅವರಿಗೂ ಅಚ್ಚರಿ! | Oneindia Kannada

ಬೆಂಗಳೂರು, ಮಾರ್ಚ್ 26: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಕೈತಪ್ಪಿರುವುದು ತೇಜಸ್ವಿನಿ ಅವರ ಬೆಂಬಲಿಗರು, ಬಿಜೆಪಿ ಅಭಿಮಾನಿಗಳು ಮಾತ್ರವಲ್ಲ, ಸ್ವತಃ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೂ ಅಚ್ಚರಿ ಮೂಡಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಯಡಿಯೂರಪ್ಪ ಅವರು ತೇಜಸ್ವಿನಿ ಅನಂತ್ ಕುಮಾರ್ ಅವರ ಸ್ಪರ್ಧೆಗೆ ಒಲವು ತೋರಿದ್ದರೂ, ದೆಹಲಿಯಲ್ಲಿ ತೇಜಸ್ವಿ ಸೂರ್ಯ ಅವರ ಪರ ತೆರೆಮರೆಯಲ್ಲಿ ತೀವ್ರ ಲಾಬಿ ನಡೆದಿದೆ ಎನ್ನಲಾಗಿತ್ತು. ಆರೆಸ್ಸೆಸ್ ಕೂಡ ತೇಜಸ್ವಿನಿ ಅವರನ್ನು ಕಣಕ್ಕಿಳಿಸಲು ಸಹಮತಿ ಹೊಂದಿರಲಿಲ್ಲ. ಶಾಸಕ ರವಿಸುಬ್ರಮಣ್ಯ ಅವರು ಅಣ್ಣನ ಮಗನನ್ನೇ ಅಭ್ಯರ್ಥಿಯನ್ನಾಗಿ ಮಾಡಲು ಶತಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.

ಟಿಕೆಟ್ ಕೈತಪ್ಪಿದ್ದಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಏನಂದ್ರು? ಟಿಕೆಟ್ ಕೈತಪ್ಪಿದ್ದಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಏನಂದ್ರು?

ದೆಹಲಿಯಲ್ಲಿ ಲಾಬಿ ದೊಡ್ಡಮಟ್ಟದಲ್ಲಿ ನಡೆದಿದ್ದರಿಂದ ಯಡಿಯೂರಪ್ಪ ಅವರಿಂದಲೂ ತೇಜಸ್ವಿನಿ ಅವರಿಗೆ ಟಿಕೆಟ್ ಕೊಡುವುದು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.

Lok Sabha elections 2019 bengaluru south Tejaswini ananth kumar bs yeddyurappa shocked

ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, 'ತೇಜಸ್ವಿನಿ ಅವರಿಗೆ ಟಿಕೆಟ್ ತಪ್ಪಿದ್ದು ಆಶ್ಚರ್ಯ ಉಂಟುಮಾಡಿದೆ. ದೆಹಲಿಯಲ್ಲಿ ಏನು ನಡೆದಿದೆಯೋ ಗೊತ್ತಿಲ್ಲ. ನಾವು ತೇಜಸ್ವಿನಿ ಅವರ ಹೆಸರನ್ನು ಮಾತ್ರ ಶಿಫಾರಸು ಮಾಡಿದ್ದೆವು' ಎಂದು ತಿಳಿಸಿದ್ದಾರೆ.

ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದೇಕೆ?ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದೇಕೆ?

ತೇಜಸ್ವಿನಿ ಅವರಿಗೆ ಟಿಕೆಟ್ ಕೈತಪ್ಪಿರುವುದಕ್ಕೆ ಅವರ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನಂತ್ ಕುಮಾರ್ ಅವರ ನಿವಾಸಕ್ಕೆ ಬಂದಿದ್ದ ಶಾಸಕ ರವಿಸುಬ್ರಮಣ್ಯ ಅವರ ಕಾರಿಗೆ ಮುತ್ತಿಗೆ ಹಾಕಿದ ಬೆಂಬಲಿಗರು ಆಕ್ರೋಶ ಪ್ರದರ್ಶಿಸಿದರು.

ಅನಂತ್ ಕುಮಾರ್ ನನ್ನ ಮೊದಲ ಗುರು: ತೇಜಸ್ವಿ ಸೂರ್ಯ ಅನಂತ್ ಕುಮಾರ್ ನನ್ನ ಮೊದಲ ಗುರು: ತೇಜಸ್ವಿ ಸೂರ್ಯ

ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರಂತಹ ಅರ್ಹ ಅಭ್ಯರ್ಥಿ ಇರುವಾಗ ಅವರ ಬದಲು ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದ್ದು ಏಕೆ? ತೇಜಸ್ವಿ ಇನ್ನೂ ಚಿಕ್ಕವರು. ಅವರನ್ನು ಅನಂತ್ ಕುಮಾರ್ ಅವರೇ ಬೆಳೆಸಿದ್ದು. ಹೀಗಿರುವಾಗ ಚಿಕ್ಕವರನ್ನು ಹೇಗೆ ಆಯ್ಕೆ ಮಾಡಿದಿರಿ? ಎಂದು ಪ್ರಶ್ನಿಸಿದರು.

English summary
BJP state President BS Yeddyurappa expressed shock over the selection of Tejaswi Surya for Bengaluru South Lok Sabha seat instead Tejaswini Ananth Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X