ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸರ ವಶದಲ್ಲಿ 46 ಸಾವಿರ ವಾಹನಗಳು!

|
Google Oneindia Kannada News

ಬೆಂಗಳೂರು, ಏಪ್ರಿಲ್ 29 : ಬೆಂಗಳೂರು ನಗರದಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಿಲ್ಲ. ಸಂಚಾರಿ ಪೊಲೀಸರು ನಗರದ ಹಲವು ಪ್ರದೇಶಗಳಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ಸಂಚಾರ ನಡೆಸುವ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.

ಸೋಮವಾರ ಒಂದೇ ದಿನ ಪೊಲೀಸರು ನಗರದಲ್ಲಿ 973 ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲಾಕ್ ಡೌನ್ ನಿಯಮಗಳನ್ನು ಸ್ವಲ್ಪ ಸಡಿಲಿಸಿದ ಬಳಿಕ ಜನರು ಅನಗತ್ಯವಾಗಿ ವಾಹನಗಳ ಜೊತೆ ರಸ್ತೆಗೆ ಇಳಿದಿದ್ದಾರೆ.

ಲಾಕ್‌ಡೌನ್: ಖಾಸಗಿ ವಾಹನ ಸವಾರರಿಗೆ ಕೇಂದ್ರದ ಮಾರ್ಗಸೂಚಿಲಾಕ್‌ಡೌನ್: ಖಾಸಗಿ ವಾಹನ ಸವಾರರಿಗೆ ಕೇಂದ್ರದ ಮಾರ್ಗಸೂಚಿ

ಬೆಂಗಳೂರು ನಗರದ ಹಲವು ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಪಾಸು ಹೊಂದಿರುವ ಮತ್ತು ಅಗತ್ಯ ಸೇವೆಗಳ ವಾಹನಗಳಿಗೆ ಮಾತ್ರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಉಳಿದ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ.

ಬೆಂಗಳೂರು ಪೊಲೀಸರಿಗೆ ತಲೆನೋವು ತಂದ ಬೈಕ್‌ಗಳು! ಬೆಂಗಳೂರು ಪೊಲೀಸರಿಗೆ ತಲೆನೋವು ತಂದ ಬೈಕ್‌ಗಳು!

ಕೆಲವರು ಪಾಸುಗಳನ್ನು ದುರುಪಯೋಗ ಮಾಡಿಕೊಂಡು, ನಕಲಿ ಪಾಸುಗಳನ್ನು ಹಿಡಿದು ಓಡಾಡುತ್ತಿದ್ದಾರೆ. ಅಂತಹವರನ್ನು ಪೊಲೀಸರು ತಡೆಯುತ್ತಿದ್ದು, ತಕ್ಷಣ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.

ಲಾಕ್ ಡೌನ್; ಪೊಲೀಸರು ಹಿಡಿದ ವಾಹನಗಳಿಗೆ ದಂಡ ಮೊತ್ತ ನಿಗದಿ ಲಾಕ್ ಡೌನ್; ಪೊಲೀಸರು ಹಿಡಿದ ವಾಹನಗಳಿಗೆ ದಂಡ ಮೊತ್ತ ನಿಗದಿ

ಲಾಕ್ ಡೌನ್ ಸಡಿಲವಾಗಿಲ್ಲ

ಲಾಕ್ ಡೌನ್ ಸಡಿಲವಾಗಿಲ್ಲ

ಬೆಂಗಳೂರು ನಗರದಲ್ಲಿ ಲಾಕ್ ಡೌನ್ ಸಡಿಲಗೊಂಡಿಲ್ಲ. ಮೇ 3ರ ತನಕ ಎರಡನೇ ಹಂತದ ಲಾಕ್ ಡೌನ್ ನಗರದಲ್ಲಿ ಜಾರಿಯಲ್ಲಿರುತ್ತದೆ. ಆದರೆ, ಅನಗತ್ಯವಾಗಿ ಜನರು ವಾಹನಗಳ ಜೊತೆ ರಸ್ತೆಗೆ ಇಳಿದಿದ್ದಾರೆ. ಸೋಮವಾರ ಒಂದೇ ದಿನ ಲಾಕ್ ಡೌನ್ ನಿಯಮ ಪಾಲಿಸದ 973 ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಷ್ಟು ವಾಹನಗಳು ವಶಕ್ಕೆ

ಎಷ್ಟು ವಾಹನಗಳು ವಶಕ್ಕೆ

ಲಾಕ್ ಡೌನ್ ಜಾರಿಗೊಂಡ ದಿನದಿಂದ ಇಲ್ಲಿಯ ತನಕ 46,673 ವಾಹನಗಳನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆ ವಾಹನಗಳನ್ನು ಆಯಾ ಠಾಣಾ ವ್ಯಾಪ್ತಿಯಲ್ಲಿ ನಿಲ್ಲಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಮಾಲೀಕರಿಗೆ ವಾಪಸ್ ನೀಡಲಾಗುತ್ತದೆ.

ವಾಹನಗಳಲ್ಲಿ ಸುತ್ತಾಟ

ವಾಹನಗಳಲ್ಲಿ ಸುತ್ತಾಟ

"ಬೆಂಗಳೂರು ನಗರದಲ್ಲಿ ಲಾಕ್ ಡೌನ್ ಮುಂದುವರೆದಿದೆ. ರಾಜ್ಯ ಸರ್ಕಾರ ಕೆಲವು ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಿದೆ. ಆದರೆ, ಹಲವರು ತಮ್ಮ ವಾಹನದಲ್ಲಿ ಅನಗತ್ಯವಾಗಿ ಸುತ್ತಾಟ ನಡೆಸುತ್ತಿದ್ದಾರೆ. ಅಂತಹ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಾರ್ಕಿಂಗ್ ಸಮಸ್ಯೆ

ಪಾರ್ಕಿಂಗ್ ಸಮಸ್ಯೆ

ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಆದರೆ, ಅವುಗಳನ್ನು ಪಾರ್ಕಿಂಗ್ ಮಾಡುವುದು ಸಮಸ್ಯೆಯಾಗಿದೆ. ಪೊಲೀಸ್ ಠಾಣೆಯ ಆವರಣ ಭರ್ತಿಯಾಗಿದ್ದು, ಶಾಲಾ-ಕಾಲೇಜುಗಳ ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸಲಾಗಿದೆ.

English summary
Bengaluru police seized 46,673 vehicles who violate rules during the nationwide lockdown imposed in the wake of coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X