ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿದರೆ ಧರ್ಮಯುದ್ಧ

|
Google Oneindia Kannada News

Recommended Video

      ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿದರೆ ಧರ್ಮಯುದ್ಧ | Oneindia Kananda

      ಬೆಂಗಳೂರು, ಮಾರ್ಚ್ 19: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟ ಸಹೋದ್ಯೋಗಿಗಳ ಮಹತ್ವದ ಸಭೆ ನಡೆಯುತ್ತಿದೆ. ಇಂದಿನ ತೀರ್ಮಾನವು ಬಹಳ ಮುಖ್ಯವಾಗಿದ್ದು, ಇಲ್ಲಿ ತೆಗೆದುಕೊಳ್ಳುವ ನಿರ್ಧಾರ ಲಿಂಗಾಯತ ಸಮಾಜದ ಮುಂದಿನ ದಾರಿಯನ್ನು ಸ್ಪಷ್ಟಪಡಿಸಲಿದೆ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

      LIVE: Siddaramaiah cabinet meeting about Ligayat separate religion

      ವರದಿ ಅಂಗೀಕರಿಸಿ, ಇಲ್ಲ ಹೋರಾಟ ಎದುರಿಸಿ: ಲಿಂಗಾಯತರ ಎಚ್ಚರಿಕೆವರದಿ ಅಂಗೀಕರಿಸಿ, ಇಲ್ಲ ಹೋರಾಟ ಎದುರಿಸಿ: ಲಿಂಗಾಯತರ ಎಚ್ಚರಿಕೆ

      ವಿಧಾನಸೌಧದಲ್ಲಿ ಸಭೆಯು ಈಗಾಗಲೇ ಆರಂಭವಾಗಿದ್ದು, ಯಾವ ತೀರ್ಮಾನ ಕೈಗೊಳ್ಳಬಹುದು ಎಂಬ ಸಾಧ್ಯಾಸಾಧ್ಯತೆಗಳ ಬಗ್ಗೆ ಕೂಡ ಲಿಂಗಾಯತ ಸಮಾಜದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇನ್ನೇನು ವಿಧಾನಸಭೆ ಚುನಾವಣೆ ಕೂಡ ಹತ್ತಿರದಲ್ಲಿರುವುದರಿಂದ ಕಾಂಗ್ರೆಸ್ ನೇತೃತ್ವದ ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಿಕ್ಕಾಪಟ್ಟೆ ಮಹತ್ವ ಇದೆ.

      ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಸಚಿವಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಸಚಿವ

      Newest FirstOldest First
      2:51 PM, 19 Mar

      ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
      1:23 PM, 19 Mar

      ಬಸವಣ್ಣ ಅವರನ್ನು ವಿರೋಧ ಮಾಡ್ತಿದ್ದವರಿಗೆ ಈಗ ನೆನಪು: ರಂಭಾಪುರಿ ಶ್ರೀ ಬಗ್ಗೆ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಆಕ್ಷೇಪ
      1:13 PM, 19 Mar

      ಸಿದ್ದರಾಮಯ್ಯ ಅವರಿಂದ ಕುಲ ಒಡೆಯುವ ಕೆಲಸ. ನಾವು ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ: ಬಳ್ಳಾರಿಯಲ್ಲಿ ಉಜ್ಜಯಿನಿ ಪೀಠದ ಸಿದ್ದಲಿಂಗರಾಜ ದೇಶಿಕೇಂದ್ರ ಸ್ವಾಮೀಜಿ
      12:42 PM, 19 Mar

      ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಪರವಾಗಿರುವ ಸಚಿವರಾದ ಎಂ.ಬಿ.ಪಾಟೀಲ ಹಾಗೂ ವಿನಯ ಕುಲಕರ್ಣಿಯಿಂದ ಸಂಪುಟ ಸಭೆಯಲ್ಲಿ ಅಭಿಪ್ರಾಯ ಕೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
      12:34 PM, 19 Mar

      ಉತ್ತರ ಕರ್ನಾಟಕದ ಮಹಾದಾಯಿ ಸಮಸ್ಯೆ ಬಗೆಹರಿಸುವುದರಲ್ಲಿ ಇಲ್ಲದ ಉತ್ಸಾಹ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಏಕೆ?: ರಂಭಾಪುರಿ ಶ್ರೀ ಪ್ರಶ್ನೆ
      12:32 PM, 19 Mar

      ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವಂತೆ ಸಿದ್ದರಾಮಯ್ಯ ಸಂಪುಟ ಕೇಂದ್ರಕ್ಕೆ ಶಿಫಾರಸು ಮಾಡಿದರೆ ಧರ್ಮ ಯುದ್ಧ ನಿಶ್ಚಿತ: ರಂಭಾಪುರಿ ಶ್ರೀ
      12:30 PM, 19 Mar

      ಧರ್ಮ ವಿವಾದವನ್ನು ಸಿದ್ದರಾಮಯ್ಯ ಮೈ ಮೇಲೆ ಎಳೆದುಕೊಂಡಿದ್ದಾರೆ: ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್
      Advertisement
      12:28 PM, 19 Mar

      ಸಿದ್ದರಾಮಯ್ಯ ಎಲ್ಲರ ಪ್ರೀತಿಯನ್ನೂ ಗಳಿಸಿ ಮುಂದಕ್ಕೆ ಹೆಜ್ಜೆಯಿಡಲಿ. ಏಕಪಕ್ಷೀಯವಾದ ತೀರ್ಮಾನ ತೆಗೆದುಕೊಳ್ಳುವುದು ಬೇಡ: ಹುಬ್ಬಳ್ಳಿಯಲ್ಲಿ ರಂಭಾಪುರಿ ಶ್ರೀ
      12:28 PM, 19 Mar

      ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ: ನ್ಯಾ ನಾಗಮೋಹನ್ ದಾಸ್ ತಜ್ಞರ ಸಮಿತಿ ವರದಿಯನ್ನು ಸಂಪುಟ ಸಭೆಯಲ್ಲಿ ಒಪ್ಪಲು ಹೆಚ್ಚುತ್ತಿರುವ ಒತ್ತಡ
      12:25 PM, 19 Mar

      ಲಿಂಗಾಯತ ಪ್ರತ್ಯೇಕ ಧರ್ಮ ಆಗುವುದರಿಂದ ಬಡವರಿಗೆ ಯಾವುದೇ ಅನುಕೂಲ ಇಲ್ಲ. ಇದೊಂದು ರಾಜಕೀಯ ಹುನ್ನಾರ ಅಷ್ಟೇ: ಗಂಗಾಧರ ಸ್ವಾಮೀಜಿ, ಕಂಬಾಳಿ ಮಠ
      12:23 PM, 19 Mar

      ಅಲ್ಪ ಸಂಖ್ಯಾತ ಸ್ಥಾನಮಾನ ಅನ್ನೋದು ಸರಕಾರ ನೀಡುವ ಭಿಕ್ಷೆ. ನಮಗೆ ಅದು ಬೇಡ: ಗಂಗಾಧರ ಸ್ವಾಮೀಜಿ, ಕಂಬಾಳಿ ಮಠ
      12:22 PM, 19 Mar

      ಲಿಂಗಾಯತ ಪ್ರತ್ಯೇಕ ಧರ್ಮದ ಪರವಾಗಿ ನಿರ್ಧಾರ ಕೈಗೊಂಡರೆ ಕಾಂಗ್ರೆಸ್ ಗೆ ಸರಿಯಾದ ಪಾಠ ಕಲಿಸಬೇಕಾಗುತ್ತದೆ: ರಂಭಾಪುರಿ ಶ್ರೀ
      Advertisement
      12:20 PM, 19 Mar

      99 ಜಾತಿಗಳನ್ನು ಪರಿಶೀಲನೆ ಮಾಡಿದರೆ ಸತ್ಯ ಏನೆಂದು ಗೊತ್ತಾಗುತ್ತದೆ. ಅವರಿಗೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸೇರುವ ಆಸಕ್ತಿ ಇಲ್ಲ: ರಂಭಾಪುರಿ ಶ್ರೀ
      12:17 PM, 19 Mar

      ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಕಾನೂನು ಸಲಹೆಯನ್ನು ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ
      12:10 PM, 19 Mar

      ಸಿದ್ದರಾಮಯ್ಯ ಸಂಪುಟದಲ್ಲೇ ಭಿನ್ನ ರಾಗ : ವಿನಯ ಕುಲಕರ್ಣಿ, ಎಂ.ಬಿ.ಪಾಟೀಲ ವಿರುದ್ಧ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅಸಮಾಧಾನ
      12:01 PM, 19 Mar

      ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಅತಿರೇಕದ ತೀರ್ಮಾನ ಮಾಡಿದರೆ ಕಾಂಗ್ರೆಸ್ ಗೆ ಹೊಡೆತ: ಹುಬ್ಬಳ್ಳಿ ಪತ್ರಿಕಾಗೋಷ್ಠಿಯಲ್ಲಿ ರಂಭಾಪುರಿ ಶ್ರೀ
      12:01 PM, 19 Mar

      ನಾನು ರಾಜೀನಾಮೆ ನೀಡುವ ಪ್ರಸ್ತಾವ ಇಲ್ಲ. ಇದೆಲ್ಲ ಮಾಧ್ಯಮ ಸೃಷ್ಟಿ. ಈ ಸುದ್ದಿಯ ಹಿಂದೆ ಸಚಿವರಾದ ಎಂ.ಬಿ.ಪಾಟೀಲ ಹಾಗೂ ವಿನಯ ಕುಲಕರ್ಣಿ ಇದ್ದಾರೆ: ಎಸ್.ಎಸ್.ಮಲ್ಲಿಕಾರ್ಜುನ್ ಆರೋಪ
      11:56 AM, 19 Mar

      ಸಿದ್ದರಾಮಯ್ಯ ಕೆಲವೇ ಮಠಾಧೀಶರ ಮಾತು ಕೇಳಬಾರದು: ಹುಬ್ಬಳ್ಳಿಯಲ್ಲಿ ರಂಭಾಪುರಿ ಶ್ರೀ ಪತ್ರಿಕಾಗೋಷ್ಠಿ
      11:55 AM, 19 Mar

      ಸಂಪುಟದಲ್ಲಿ ಆಗುವ ತೀರ್ಮಾನ ಗಮನಿಸಿ ಮುಂದಿನ ನಿರ್ಧಾರ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
      11:51 AM, 19 Mar

      ವೀರಶೈವ ಮಹಾಸಭೆಯ ಸಲಹೆ ನಿರಾಕರಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಗಾರರಿಗೆ ದುಗುಡ
      11:50 AM, 19 Mar

      ತಜ್ಞರ ಸಮಿತಿಯಲ್ಲಿ ಇರುವವರೆಲ್ಲರೂ ಲಿಂಗಾಯತ ಪ್ರತ್ಯೇಕ ಧರ್ಮದ ನಿರ್ಧಾರ ಪರ ಇದ್ದಾರೆ. ಅವರ ವರದಿ ಒಪ್ಪಲು ಸಾಧ್ಯವಿಲ್ಲ: ಆರೋಪ
      11:50 AM, 19 Mar

      ವೀರಶೈವ- ಲಿಂಗಾಯತ ಗಂಡಭೇರುಂಡ ಇದ್ದ ಹಾಗೆ. ಒಂದೇ ದೇಹ ಎರಡು ತಲೆ ಇದ್ದ ಹಾಗೆ. ಇಂಡಿಯಾ- ಭಾರತ ಬೇರೆ ಅಲ್ಲ
      11:48 AM, 19 Mar

      ವೀರಶೈವ ಧರ್ಮ ಪ್ರಾಚೀನವಾದುದು. ಇಲ್ಲಿ ಗೊಂದಲ ಉಂಟು ಮಾಡುವುದು ಸರಿಯಲ್ಲ: ರಂಭಾಪುರಿ ಶ್ರೀ
      11:48 AM, 19 Mar

      ಲಿಂಗಾಯತ ಪ್ರತ್ಯೇಕ ಧರ್ಮ ತೀರ್ಮಾನಕ್ಕೆ ತಜ್ಞರ ಸಮಿತಿ ರಚಿಸಿದ್ದು ಸರಿಯಲ್ಲ: ರಂಭಾಪುರಿ ಶ್ರೀ
      11:47 AM, 19 Mar

      ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಸರಕಾರ ಒಪ್ಪಬಾರದು ಎಂದು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ಮಾಡಿ ರಂಭಾಪುರಿ ಶ್ರೀ ಆಗ್ರಹ

      English summary
      Karnataka CM Siddaramaiah cabinet meeting about Ligayat separate religion started in Vidhanasoudha. It will be very crucial decision citing up coming Karnataka assembly elections.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X