ಬೆಂಗಳೂರು; 27 ಕೇಂದ್ರದಲ್ಲಿ ಕೊವ್ಯಾಕ್ಸಿನ್ 2ನೇ ಡೋಸ್ ಲಭ್ಯ, ಪಟ್ಟಿ
ಬೆಂಗಳೂರು, ಮೇ 31; ಕರ್ನಾಟಕದಲ್ಲಿ ಕೋವಿಡ್ ವಿರುದ್ಧದ ಲಸಿಕೆಯ ಕೊರತೆ ಉಂಟಾಗಿದೆ. ಸರ್ಕಾರ 45 ವರ್ಷ ಮೀರಿದವರಿಗೆ ಲಸಿಕೆ ನೀಡಲು ಆದ್ಯತೆ ನೀಡುತ್ತಿದೆ. ಆದರೆ ಕೊವ್ಯಾಕ್ಸಿನ್ ಲಸಿಕೆ ಸಿಗುತ್ತಿಲ್ಲ ಎಂಬುದು ಜನರ ಸಾಮಾನ್ಯವಾದ ದೂರಾಗಿದೆ.
ಮೊದಲ ಡೋಸ್ ಕೊವ್ಯಾಕ್ಸಿನ್ ಪಡೆದವರು 2ನೇ ಡೋಸ್‌ಗಾಗಿ ಕಾಯುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಕೊವ್ಯಾಕ್ಸಿನ್ ಎಲ್ಲಿ ಸಿಗಲಿದೆ? ಎಂದು ಜನರು ಪ್ರತಿದಿನ ವಿಚಾರಿಸುತ್ತಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಿನ ಜನರಿಗೆ ಸಿಹಿಸುದ್ದಿ ನೀಡಿದೆ. ಬೆಂಗಳೂರಿನಲ್ಲಿ ಕೊವ್ಯಾಕ್ಸಿನ್ ಎಲ್ಲಿ ಲಭ್ಯವಿದೆ? ಎಂದು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಈ ಕುರಿತು ಟ್ವೀಟ್ ಮಾಡಿದ್ದಾರೆ. 2ನೇ ಡೋಸ್ ಕೊವ್ಯಾಕ್ಸಿನ್ ಪಡೆಯಬೇಕಾದವರು ತಮ್ಮ ಹತ್ತಿರದ ಸೆಂಟರ್‌ಗಳಿಗೆ ಹೋಗಿ ಕೊವ್ಯಾಕ್ಸಿನ್ ಲಸಿಕೆ ಪಡೆಯಬಹುದಾಗಿದೆ.
ಬಿಬಿಎಂಪಿ ಆಯುಕ್ತರು ವಲಯವಾರು ಕೊವ್ಯಾಕ್ಸಿನ್ ಲಸಿಕೆ ಲಭ್ಯವಿರುವ ಸೆಂಟರ್‌ಗಳ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಒಟ್ಟು 27 ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದ್ದು, 2ನೇ ಡೋಸ್ ಪಡೆಯಬಹುದಾಗಿದೆ.
ಎರಡನೇ ಡೋಸ್‌ಗೆ ಕಾಯುತ್ತಿರುವವರು ನೇರವಾಗಿ ವಾಕ್ಇನ್ ಮೂಲಕ ಬರಬಹುದು. ಆನ್‌ಲೈನ್ ಮೂಲಕ ಮೊದಲೇ ನೋಂದಣಿ ಮಾಡುವ ಅಗತ್ಯವಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಎಲ್ಲೆಲ್ಲಿ ಲಭ್ಯವಿದೆ ಕೊವ್ಯಾಕ್ಸಿನ್
#Covaxin 2nd dose is available at the following 27 select hospitals/PHCs. Walk-in only for those who are due for 2nd dose.
— Gaurav Gupta,IAS (@BBMPCOMM) May 30, 2021
ಕೊವಾಕ್ಸಿನ್ 2ನೇ ಡೋಸ್ ಈ ಕೆಳಗಿನ 27 ಆಸ್ಪತ್ರೆ/ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದೆ. 2ನೇ ಡೋಸಿಗೆ ಕಾಯುತ್ತಿರುವವರು ನೇರವಾಗಿ ವಾಕ್ಇನ್ ಮೂಲಕ ಬರಬಹುದು. #BBMPVaccinationDrive pic.twitter.com/0LQi1zSSmz












Click it and Unblock the Notifications