ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೈಕೋರ್ಟ್‌ನಲ್ಲಿ ಸಹೋದ್ಯೋಗಿ ಕೊಲೆ, ವಕೀಲನಿಗೆ ಜೀವಾವಧಿ ಶಿಕ್ಷೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28 : ಕರ್ನಾಟಕ ಹೈಕೋರ್ಟ್‌ನಲ್ಲಿ ಸಹೋದ್ಯೋಗಿ, ಪ್ರೇಯಸಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಪರಾಧಿ ಸಹ ವಕೀಲನಾಗಿದ್ದು, 8 ವರ್ಷಗಳ ಹಿಂದೆ ಈ ಘಟನೆ ನಡೆದಿತ್ತು.

ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಅಪರಾಧಿ ರಾಜಪ್ಪಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಜಪ್ಪ ತನ್ನ ಸಹೋದ್ಯೋಗಿ ಜೆ.ಎಸ್.ನವೀನಾ (25) ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ.

ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

ಜುಲೈ 8, 2010ರಂದು ಕರ್ನಾಟಕ ಹೈಕೋರ್ಟ್‌ನ ಕೋರ್ಟ್‌ ನಂಬರ್ 4ರ ಬಳಿ ಮಧ್ಯಾಹ್ನ 1.45ರ ಸುಮಾರಿಗೆ ಈ ಘಟನೆ ನಡೆದಿತ್ತು. ನವೀನಾ ಹತ್ಯೆ ಮಾಡಿದ ಬಳಿಕ ಕೋರ್ಟ್‌ನ ಶೌಚಾಲಯಕ್ಕೆ ತೆರಳಿದ್ದ ರಾಜಪ್ಪ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಆದರೆ, ಚಿಕಿತ್ಸೆ ಬಳಿಕ ಬದುಕಿಳಿದಿದ್ದ.

ದಸರಾ ವೇಳೆ ಸಂಪೂರ್ಣ ರಸ್ತೆಗುಂಡಿ ಮುಚ್ಚಿ: ಹೈಕೋರ್ಟ್ ತಾಕೀತುದಸರಾ ವೇಳೆ ಸಂಪೂರ್ಣ ರಸ್ತೆಗುಂಡಿ ಮುಚ್ಚಿ: ಹೈಕೋರ್ಟ್ ತಾಕೀತು

Life sentence for advocate for murder colleague

ಕೋಲಾರ ಮೂಲದ ರಾಜಪ್ಪ ಮತ್ತು ನವೀನಾ ಇಬ್ಬರೂ ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದರು. ಇಬ್ಬರೂ ಮದುವೆಯಾಗಲು ಬಯಸಿದ್ದರು. ಆದರೆ, ನವೀನಾ ಅವರು ಮತ್ತೊಬ್ಬ ವಕೀಲರ ಜೊತೆ ಕ್ಲೋಸ್ ಆಗಿದ್ದಾರೆ ಎಂದು ರಾಜಪ್ಪ ಜಗಳವಾಡಿದ್ದ.

ಮಿಸ್ಸಿಂಗ್ ಕರ್ನಾಟಕ: 3 ವರ್ಷದಲ್ಲಿ 50 ಸಾವಿರ ಮಂದಿ ಕಾಣೆಮಿಸ್ಸಿಂಗ್ ಕರ್ನಾಟಕ: 3 ವರ್ಷದಲ್ಲಿ 50 ಸಾವಿರ ಮಂದಿ ಕಾಣೆ

ಜುಲೈ 8ರಂದು ಕರ್ನಾಟಕ ಹೈಕೋರ್ಟ್‌ಗೆ ಚಾಕು ಹಿಡಿದು ಬಂದಿದ್ದ ರಾಜಪ್ಪ ನವೀನಾ ಮೇಲೆ ಹಲ್ಲೆ ಮಾಡಿದ್ದ. ಕುತ್ತಿಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದ. ನವೀನಾ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಬ್ಯುಸಿ ಕೋರ್ಟ್‌ ಹಾಲ್‌ನಲ್ಲಿದ್ದ ವಕೀಲರಿಗೆ ಚಾಕು ತೋರಿಸಿ ಬೆದರಿಸಿದ್ದ ರಾಜಪ್ಪ ಶೌಚಾಲಯಕ್ಕೆ ಓಡಿ ವಿಷ ಕುಡಿದಿದ್ದ, ಚಾಕು ಚುಚ್ಚುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ವಕೀಲರು ಮತ್ತು ವಿಧಾನಸೌಧ ಪೊಲೀಸರು ಆತನನ್ನು ರಕ್ಷಣೆ ಮಾಡಿ ಬಂಧಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ ಅಪರಾಧಿ ರಾಜಪ್ಪಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 5 ಸಾವಿರ ರೂ. ದಂಡವನ್ನು ವಿಧಿಸಲಾಗಿದ್ದು, ಅದನ್ನು ಮೃತ ನವೀನಾ ಪೋಷಕರರಿಗೆ ನೀಡಲು ಆದೇಶ ನೀಡಿದೆ.

English summary
The City Civil and Sessions Court of Bengaluru ordered the life sentence to an advocate Rajappa for stabbing his woman colleague Naveena (25) to death in the high court premises on July 8, 2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X