Video Viral: ಬನ್ನೇರುಘಟ್ಟ ಸಫಾರಿ ವಾಹನದ ಮೇಲೆ ಚಿರತೆ ದಾಳಿ! ಮುಂದೇನಾಯ್ತು?
ಭಾರತದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಹ ಒಂದು. ಇಲ್ಲಿ ನಿತ್ಯ ಅದರಲ್ಲು ವಾರಾಂತ್ಯಕ್ಕೆ ಅಪಾರ ಸಂಖ್ಯೆಯ ಪ್ರವಾಸಿಗುರ ವನ್ಯಜೀವಿಗಳನ್ನು ಕಾಣಲು ಬರುತ್ತಾರೆ. ಹೀಗೆ ಸಪಾರಿ ವಾಹನದಲ್ಲಿ ಬಂದವರ ಚಿರತೆ ಕಾಣಸಿಕೊಂಡಿದೆ. ಮುಂದೆ ಆ ಚಿರತೆ ಏನು ಮಾಡಿತು ಎಂಬುದು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಂದಿನಂತೆ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರ ದಂಡು ಸಫಾರಿಗೆ ಬಂದಿತ್ತು. ಹೀಗೆ ಕಾಡಿನೊಳಕ್ಕೆ ಸಫಾರಿ ವಾಹನದಲ್ಲಿ ತೆರಳುವಾಗ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆಯೊಂದು ಸಫಾರಿ ಬಸ್ಸಿನ ಮೇಲೆ ಹಾರಿ 12 ವರ್ಷದ ಬಾಲಕನ ಕೈಯನ್ನು ಗಾಯ ಮಾಡಿದೆ. ವಾಹನದ ಮೇಲೆ ದಾಳಿ ಮಾಡಿದ ವಿಡಿಯೋ ವೈರಲ್ ಆಗಿದೆ.

ಪ್ರವಾಸಿಗರು ಅರಣ್ಯದಲ್ಲಿ ಪ್ರಾಣಿಗಳನ್ನು ವೀಕ್ಷಿಸಲು ವಾಹನ ನಿಲ್ಲಿಸಿದಾಗ ಚಿರತೆ ರಸ್ತೆಬದಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಆ ಚಿರತೆ ನೋಡುತ್ತಲೇ ಸಫಾರಿ ವಾಹನ ಮುಂದೆ ಚಲಿಸುತ್ತಿದ್ದಂತೆ ಚಿರತೆ ಟ್ರಿಗರ್ ಆಗಿದೆ. ನೋಡ ನೋಡುತ್ತಿದ್ದಂತೆ ಆ ವಾಹನದ ಮೇಲೆ ಬೆನ್ನಟ್ಟಿದೆ, ಎರಗಿದೆ. ನಂತರ ಪ್ರಾಣಿ ಬಸ್ ಮೇಲೆ ಹಾರಿ ಹುಡುಗನ ಕೈಯನ್ನು ಕಚ್ಚಿದೆ. ಈ ಘಟನೆಯಿಂದ ಬಸ್ ಒಳಗಿದ್ದವರಲ್ಲಿ ಆತಂಕ ಉಂಟು ಮಾಡಿದೆ. ಮತ್ತೊಂದು ಸಫಾರಿ ವಾಹನದಲ್ಲಿ ಬಾಲಕನಿಗೆ ಕೈ ಪರಚಿದ, ದಾಳಿ ಮಾಡಿದ ವಿಡಿಯೋ ಸೆರೆ ಹಿಡಿಯಲಾಗಿದೆ.
Leopard attacks 13-year-old at Bannerghatta National Park in Bengaluru during a safari ride.
— Vani Mehrotra (@vani_mehrotra) August 15, 2025
The incident happened this afternoon and the minor was immediately attended to by the park staff and was then taken to a hospital. He was discharged after treatment. pic.twitter.com/Oc7rEubsNH
ಈ ವೇಳೆ ಬಾಲಕನಿಗೆ ಸುಮ್ಮನಿರುವಂತೆ, ಬಸ್ ಅನ್ನು ಮುಂದೆ ಚಾಲನೆ ಮಾಡುವಂತೆ ಕೂಗಾಡಿದ್ದು ಕೇಳಿ ಬಂದಿದೆ. ಚಿರತೆ ದಾಲಿ ಮಾಡುತ್ತಿದ್ದಂತೆ ಸಹ ಪ್ರಯಾಣಿಕರು ಗದ್ದಲ ಮಾಡಿದ ಸುಮ್ಮನಿಸುವಂತೆ, ಶಾಂತವಾಗಿರುವಂತೆ ಸೂಚನೆ ನೀಡುವುದು ಸಹ ಕೇಳಿ ಬರುತ್ತದೆ. ಇಂತಹ ಚಿರತೆ ದಾಳಿ ಘಟನೆ ಈ ರಾಷ್ಟ್ರೀಯ ಉದ್ಯಾನದಲ್ಲಿ ಇದೇ ಮೊದಲೇನಲ್ಲ. ಕಳೆದ ವರ್ಷ, ಚಿರತೆ ಸಫಾರಿ ಬಸ್ಸಿನ ಮೇಲೆ ಹಾರಿತ್ತು. ಈ ಘಟನೆಯ ವಿಡಿಯೋ ಸಹ ವೈರಲ್ ಆಗಿತ್ತು. ಬನ್ನೇರುಘಟ್ಟ ಉದ್ಯಾನಕ್ಕೆ ಹೋದಾಗ ಆದಷ್ಟು ಎಚ್ಚರಿಕೆಯಿಂದ ಪ್ರವಾಸಿಗರು ವರ್ತಿಸಬೇಕು. ಸೂಕ್ತ ಬಿದ್ರತೆ ಉದ್ಯಾನ ಸಿಬ್ಬಂದಿ ಒದಗಿಸಬೇಕು.












Click it and Unblock the Notifications