ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ನಮ್ಮದು, ಕನ್ನಡಿಗರಿಂದ #Leavebengaluru ಟ್ವಿಟ್ಟರ್ ಅಭಿಯಾನ ಆರಂಭ

|
Google Oneindia Kannada News

ಬೆಂಗಳೂರು ಸೆಪ್ಟಂಬರ್ 08: ಬೆಂಗಳೂರಿಗೆ ಬಂದು ಬದುಕು ರೂಪಿಸಿಕೊಂಡು ಮಳೆಗಾಲದಲ್ಲಿ ಬೆಂಗಳೂರನ್ನೇ ದೂರುವ ವಲಸಿಗರ ವಿರುದ್ಧ ಸ್ಥಳಿಯರು ಸೇರಿದಂತೆ ಕನ್ನಡಿಗರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ.

ವ್ಯಾಪಕ ಮಳೆಯಿಂದಾಗಿ ಬೆಂಗಳೂರಿನ ಕೆಲವು ಭಾಗಕ್ಕೆ ಸಂಕಷ್ಟ ಎದುರಾಗಿದೆ. ಇದನ್ನು ಕಂಡು ಕೆಲವು ವಲಸಿಗರು ಬೆಂಗಳೂರಿನ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ವ್ಯಂಗ್ಯವಾಡುತ್ತಾ ಕೆಲವು ಟ್ರೋಲ್ ಮಾಡುತ್ತಿದ್ದಾರೆ. ಅಂಥವರಿಗೆ ಸ್ಥಳಿಯರು ಲೀವ್‌ಬೆಂಗಳೂರು ಹ್ಯಾಶ್ ಟ್ಯಾಗ್ ಹಾಕಿ ಅಭಿಯಾನ ಆರಂಭಿಸುವ ಮೂಲಕ ಚಳಿ ಬಿಡಿಸಿದ್ದಾರೆ.

ಎಲ್ಲಿಂದಲೋ ಬೆಂಗಳೂರಿಗೆ ಬರುವವರು ಇಲ್ಲಿ ಎಲ್ಲರು ಸಮಾನರು. ಇಲ್ಲಿ ಯಾರಿಗೂ ವಿಶೇಷ ಹಕ್ಕಿಲ್ಲ. ಯಾವುದೇ ಒಂದು ಸಮುದಾಯ ಬೆಂಗಳೂರನ್ನು ನಿರ್ಮಿಸಿಲ್ಲ. ಮುಖ್ಯವಾಗಿ ಯಾರೂ ನಿಮ್ಮ ತೆರಿಗೆಯನ್ನು ಅವಲಂಬಿಸಿಲ್ಲ. ಇಷ್ಟವಿದ್ದರೆ ಇರಬಹುದು. ಇಲ್ಲದಿದ್ದರೆ ಬೆಂಗಳೂರು ಬಿಟ್ಟು ಹೊರಡಬಹುದು. ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಎಂದು ಟ್ವೀಟ್ ಮಾಡಿದ್ದಾರೆ.

ಹೌದು, ಬೆಂಗಳೂರಿಗೆ ಹಿಂದೆಂದೂ ಕಾಣದಷ್ಟು ಮಳೆ ಸುರಿದಿದೆ. ಅತೀವೃಷ್ಟಿ ಉಂಟಾಗಿ ಬಡಾವಣೆಗಳು, ರಸ್ತೆಗಳು ಜಲಾವೃವಾಗಿವೆ. ಅವ್ಯವಸ್ಥೆಯಿಂದಾಗಿ ಹಲವು ಸಮಸ್ಯೆಗಳು ಉದ್ಭವಿಸಿವೆ. ತಮ್ಮ ಮೂಲ ಊರುಗಳಲ್ಲಿ ಹೆಚ್ಚು ಬಿಸಿಲು ಎಂದು, ಊರಿಗೆ ಬರಗಾಲ ಎಂದು ವಲಸೆ ಬಂದು ಬೆಂಗಳೂರೇ ಚೆಂದ ಎನ್ನುತ್ತಿದ್ದರು. ಈಗ ಮಳೆಯ ಕಾರಣಕ್ಕೆ ಅನ್ನ, ನೀರು, ಉದ್ಯೋಗ ಸೇರಿದಂತೆ ಸುಂದರ ಬದುಕು ನೀಡಿದ ಬೆಂಗಳೂರನ್ನೇ ದೂರುತ್ತಿರುವುದು ಎಷ್ಟು ಸರಿ? ಎಂದು ಮುನಿನಾಗಪ್ಪ ಎಂ.ಎಂಬುವವರು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಒಟ್ಟಾಗಿ ಸರ್ಕಾರವನ್ನು ಪ್ರಶ್ನಿಸಬೇಕು

ಒಟ್ಟಾಗಿ ಸರ್ಕಾರವನ್ನು ಪ್ರಶ್ನಿಸಬೇಕು

ನಮಗೆ ಕಷ್ಟ ಬಂದಾಗ ಯಾವುದೋ ರೂಪದಲ್ಲಿ ಆಸರೆಯಾಗಿದ್ದು ಬೆಂಗಳೂರು. ಈಗ ಅಪಾರ ಮಳೆಯಿಂದಾಗಿ ಬೆಂಗಳೂರಿಗೆ ಸಂಕಷ್ಟ ಒದಗಿ ಬಂದಿದೆ. ಈ ಸಮಯದಲ್ಲಿ ಬೆಂಗಳೂರಿನ ಎಲ್ಲ ಕನ್ನಡಿಗರು, ವಲಸಿಗರು ಒಟ್ಟುಗೂಡಿ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಬೇಕು. ಆಡಳಿತ ವ್ಯವಸ್ಥೆ ಕುರಿತು ಮಾತನಾಡಬೇಕು. ಕೋವಿಡ್ ಸಾಂಕ್ರಾಮಿಕ ರೋಗದ 3 ವರ್ಷಗಳಲ್ಲಿ ನೀವು ಏನು ಮಾಡಿದ್ದೀರಿ?. ಬೆಂಗಳೂರು ನಗರಕ್ಕೆ ಯಾವ ಹೊಸ ಮೂಲ ಸೌಕರ್ಯವನ್ನು ನಿರ್ಮಿಸಿದ್ದೀರಿ ಎಂದು ಪ್ರಶ್ನಿಸಬೇಕು. ಅದರ ಹೊರತು ಪರಸ್ಪರ ನಿಂದಿಸುತ್ತಾ ಜಗಳವಾಡುವುದನ್ನು ಬಿಡಬೇಕು ಎಂದಿದ್ದಾರೆ.

ಇಷ್ಟವಿಲ್ಲದಿದ್ದರೆ ಬೆಂಗಳೂರು ಬಿಟ್ಟು ತೊಲಗಿ

ಇಷ್ಟವಿಲ್ಲದಿದ್ದರೆ ಬೆಂಗಳೂರು ಬಿಟ್ಟು ತೊಲಗಿ

ವಲಸಿಗರು ಕೋವಿಡ್ ಕಾಲದಲ್ಲೂ ಬೆಂಗಳೂರನ್ನು ದೂರಿದರು. ಇದೀಗ ಮಳೆಗಾದಲ್ಲೂ ದೂರುತ್ತಿದ್ದಾರೆ. ನಿಮ್ಮ ಕಷ್ಟದ ಸಮಯದಲ್ಲಿ ಮಾತ್ರ ಬೆಂಗಳೂರು ಬೇಕಾ? ಎಂದು ಆಕ್ರೋಶವು ವ್ಯಕ್ತವಾಗಿದೆ. ನಿಮ್ಮಿಂದ ಬೆಂಗಳೂರಲ್ಲ, ಬೆಂಗಳೂರಿಂದ ನೀವು ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ.

ಈ ವಲಸಿಗರಿಗೆ ತಮ್ಮ ಊರು, ನಗರಗಳನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಬೆಂಗಳೂರಿನಂತಹ ಬೇರೆ ನಗರಗಳ ವಲಸೆ ಹೋಗಿ ತಮ್ಮ ಗಂಜಿ ಕಂಡುಕೊಳ್ಳುತ್ತಾರೆ. ಕೊನೆಗೆ ಅನ್ನ ಹಾಕಿದ ಊರಿನ ಬಗ್ಗೆಯೇ ವ್ಯಂಗ್ಯವಾಡುತ್ತಾರೆ. ನಿಮಗೆ ಬೆಂಗಳೂರು ಇಷ್ಟವಿಲ್ಲದಿದ್ದರೆ ಬೆಂಗಳೂರು ಬಿಟ್ಟು ತೊಲಗಿ ಎಂದು ಬಬ್ರುವಾಹನ ಹೆಸರಿನ ಟ್ವಿಟ್ಟರ ಪೇಜಿನಲ್ಲಿ ಪೋಸ್ಟ್ ಹಾಕಿ ಎಚ್ಚರಿಕೆ ನೀಡಲಾಗಿದೆ.

#LeaveBengaluru ಟ್ರೆಂಡಿಂಗ್

#LeaveBengaluru, ಬೆಂಗಳೂರು ಬಿಟ್ಟುಹೋಗಿ, #GetlostMigrants ಎಂಬ ಹ್ಯಾಶ್‌ ಟ್ಯಾಗ್‌ ಬುಧವಾರ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ ಆಗಿತ್ತು. ಸಾಕಷ್ಟು ಜನ ಕನ್ನಡಿಗರ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಬೆಂಗಳೂರು ಕನ್ನಡಿಗರನ ಆಸ್ತಿ, ಇದು ನಮ್ಮ ಊರು ಸಾಕು ನೀವು ಬೆಂಗಳೂರು ಹಾಳು ಮಾಡಿದ್ದು ಎಂದು ಜರಿದಿದ್ದಾರೆ. ಇನ್ನೂ ಕೆಲವರು ಕನ್ನಡದ ಬಗ್ಗೆ, ಬೆಂಗಳೂರಿನ ಬಗ್ಗೆ ಇಷ್ಟದ ನಟರ ವಿಡಿಯೋ/ಡೈಲಾಗ್‌ಗಳನ್ನು #LeaveBengaluru ಹ್ಯಾಶ್‌ ಟ್ಯಾಗ್ ಸಹಿತ ಪೋಸ್ಟ್ ಹಾಕಿದ್ದಾರೆ. ಬೆಂಗಳೂರಿನಷ್ಟು ಇನ್ನಿತರ ನಗರಗಳು ಸುರಕ್ಷಿತವಲ್ಲ ಎಂದು ಇತರರ ಪೋಸ್ಟ್ ಶೇರ್ ಮಾಡಿ ಅಭಿಯಾನಕ್ಕೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಳೆಯಿಂದ ಬೆಂಗಳೂರಲ್ಲಿ ಪ್ರವಾಹ

ಮಳೆಯಿಂದ ಬೆಂಗಳೂರಲ್ಲಿ ಪ್ರವಾಹ

ಬೆಂಗಳೂರಲ್ಲಿ ಕಳೆದ 2-3 ವಾರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಬೆಂಗಳೂರಿನ ಮಹಾದೇವಪುರ, ವೈಟಫಿಲ್ಡ್, ಸರ್ಜಾಪುರ ಭಾಗದಲ್ಲಿ ಸಾಕಷ್ಟು ಆವಾಂತರಗಳು ಸೃಷ್ಟಿಯಾಗಿವೆ. ರಸ್ತೆ, ಬಡಾವಣೆಗಳು ಜಲಾವೃತಗೊಂಡ ಸಂಚಾರ ಅಸ್ತವ್ಯಸ್ತವಾಗಿದೆ. ಇದರಿಂದ ಜನರಿಗೆ ಐಟಿ ಕಂಪನಿಗಳಿಗೆ ಸಾಕಷ್ಟು ತೊಂದರೆ ಮತ್ತು ನಷ್ಟ ಉಂಟಾಗಿದೆ. ಐಟಿ ಕಂಪನಿಗಳ ಮುಖ್ಯಸ್ಥರು ಸಭೆಯಲ್ಲಿ ನಮಗೆ ಬೆಂಗಳೂರು ಬಿಡುವ ಮನಸ್ಸಿಲ್ಲ. ಆದರೆ, ಸಮಸ್ಯೆ, ಹಾನಿ ಕುರಿತು ಸರ್ಕಾರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.

ಆದರೆ ಉದ್ಯೋಗ ಅರಸಿ ಬಂದ ವಲಸಿಗರ ಪೈಕಿ ಕೆಲವರು ಬೆಂಗಳೂರು ಬಗ್ಗೆ ವ್ಯಂಗ್ಯವಾಡಿದ್ದಾರೆ. ಈ ಹಿಂದೆ ಕೋವಿಡ್ ಕಾಲದಲ್ಲಿ ನಗರದಲ್ಲಿ ಕಠಿಣ ನಿಯಮ ಜಾರಿಗೊಳಿಸಿದಾಗಲೂ ಇದೇ ರೀತಿ ಕೆಲವರು ರಾಜಧಾನಿಯನ್ನು ಜರಿದಿದ್ದರು.


ಸಂಕಷ್ಟದ ಸಂದರ್ಭದಲ್ಲಿ ವಲಸಿಗರು, ಮೂಲ ನಿವಾಸಿಗಳು ಪರಸ್ಪರ ಟೀಕೆ ಮಾಡದೇ ಸರ್ಕಾರವನ್ನು ಪ್ರಶ್ನಿಸಬೇಕು. ಸರ್ಕಾರ ಸಹ ಸದ್ಯದ ಮಳೆ ಸಂಕಷ್ಟ ಪರಿಸ್ಥಿತಿಯನ್ನು ಗಂಭಿರವಾಗಿ ಪರಿಗಣಿಸಿದೆ ಮುಂದೆಂದೂ ಈ ರೀತಿ ಪ್ರವಾಹ ಸ್ಥಿತಿ ಉಂಟಾಗದಂತೆ ನೋಡಿಕೊಳ್ಳಬೇಕಾದ ತುರ್ತು ಅಗತ್ಯತೆ ಇದೆ.

English summary
leavebengaluru Campaign Started by Kannadigas in Twitter against Those who Trolling City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X