• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟೀಚರ್‌ಗೆ ಒಳ ಉಡುಪು ಗಿಫ್ಟ್ ಕೊಟ್ಟ ಮನೆ ಮಾಲೀಕ ಜೈಲಿನ ಅಂದರ್!

|
Google Oneindia Kannada News

ಬೆಂಗಳೂರು, ಜ. 18: ''ನನ್ನ ಹುಟ್ಟುಹಬ್ಬಕ್ಕೆ ಮಹಿಳೆಯರ ಒಳ ಉಡುಪು ಉಡುಗೊರೆ ಕೊಟ್ಟು ಮನೆ ಮಾಲೀಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ' ಎಂದು ಮನೆ ಮಾಲೀಕರ ವಿರುದ್ಧ ಶಿಕ್ಷಕಿ ದೂರು ನೀಡಿದ್ದಾರೆ. ಎರಡು ವರ್ಷದಿಂದ ಬಾಡಿಗೆ ಪಾವತಿ ಮಾಡದ ಶಿಕ್ಷಕಿಯನ್ನು ಬಾಡಿಗೆ ಕೇಳಿದ್ದಕ್ಕೆ ಈ ರೀತಿಯ ಸುಳ್ಳು ದೂರು ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇಂತಹ ಅಪರೂಪದ ಅಪರಾಧ ಪ್ರಕರಣವೊಂದು ಬೆಂಗಳೂರಿನ ಶ್ರೀನಗರದಲ್ಲಿ ನಡೆದಿದೆ.

ಅ ವ್ಯಕ್ತಿಯ ಹೆಸರು ಪದ್ಮನಾಭ. ಹಿರಿಯ ಜೀವ, ಮನೆಯಲ್ಲಿ ಟಿವಿ ನೋಡಿಕೊಂಡು ಮೊಮ್ಮಕ್ಕಳ ಜತೆ ಕಾಲ ಕಳೆಯುವ ವಯಸ್ಸು. ಸ್ವಂತ ಮನೆ ಜತೆಗೆ ತಿಂಗಳಿಗೆ ಬರುವ ಬಾಡಿಗೆ ಹಣ ವೆಚ್ಚ ಮಾಡಿಕೊಂಡು ಸುಖವಾಗಿರಬೇಕಾದ ಎಲ್ಲಾ ಅವಕಾಶಗಳಿದ್ದವು. ಪದ್ಮನಾಭಗೆ ಸೇರಿದ ಮನೆಯಲ್ಲಿ ಹನ್ನೆರಡು ವರ್ಷದಿಂದ ಶಿಕ್ಷಕಿಯೊಬ್ಬರು ಬಾಡಿಗೆಗೆ ಇದ್ದರು. ಇದ್ದಕ್ಕಿದ್ದಂತೆ ಇತ್ತೀಚೆಗೆ ಮನೆ ಮಾಲೀಕ ಪದ್ಮನಾಭ ವಿರುದ್ಧ ಶಿಕ್ಷಕಿ ಹನುಮಂತನಗರ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಹುಟ್ಟು ಹಬ್ಬಕ್ಕೆ ಪದ್ಮನಾಭ ಒಳ ಉಡುಪು ಉಡುಗೊರೆ ಕೊಟ್ಟಿದ್ದಾನೆ. ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸಿ ಕಾಟ ಕೊಡುತ್ತಿದ್ದಾನೆ. ಒಮ್ಮೆ ನಾನು ಒಂಟಿಯಾಗಿ ಮಲಗಿದ್ದಾಗ ಮನೆಗೆ ಚಿಲಕ ಹಾಕಿ ಹೊರ ಹೋಗಿದ್ದ. ಹೊರಗೆ ಏಕಾಂತವಾಗಿ ಕಳೆಯಲು ಜತೆಗೆ ಬರುವಂತೆ ಪೀಡಿಸುತ್ತಿದ್ದಾನೆ ಎಂದು ದೂರಿ ಶಿಕ್ಷಕಿ ಮನೆ ಮಲೀಕರ ವಿರುದ್ಧ ದೂರು ನೀಡಿದ್ದಾರೆ.

ದೂರಿನ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಹನುಮಂತನಗರ ಪೊಲೀಸರು, ಎರಡು ವರ್ಷದಿಂದ ಶಿಕ್ಷಕಿ ಬಾಡಿಗೆ ಪಾವತಿ ಮಾಡಿಲ್ಲ. ಕೇಳಿದ್ದಕ್ಕೆ ಈ ರೀತಿಯ ಅರೋಪ ಹೊರಿಸಿ ದೂರು ನೀಡಿರುವ ಸಂಗತಿ ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಟ್ಟಿದ್ದ ಒಳ ಉಡುಪುಗಳನ್ನು ತಂದು ಕೊಡುವಂತೆ ಸೂಚಿಸಿದ್ದೇವೆ. ಸುಳ್ಳು ಆರೋಪ ಹೊರಿಸಿ ದೂರು ನೀಡಿರುವ ಅಂಶ ಕಂಡು ಬಂದಿದ್ದು, ಈ ಕುರಿತು ತನಿಖೆ ನಡೆದ ಬಳಿಕ ಸತ್ಯ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

English summary
Bengaluru: A 42-year-old school teacher, a resident of Srinagar has accused her landlord of gifting her Undergarment on her birthday Read more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X