Get Updates
Get notified of breaking news, exclusive insights, and must-see stories!

ಬೆಂಗಳೂರಿನ ಸಮೀಪದ ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ: ಡಿ.ಕೆ ಶಿವಕುಮಾರ್ ಮಾಸ್ಟರ್ ಪ್ಲ್ಯಾನ್ ಕಾರಣ!

ಬೆಂಗಳೂರಿನ ಹೊರ ಭಾಗದ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಮಾಸ್ಟರ್ ಪ್ಲ್ಯಾನ್‌ವೊಂದನ್ನು ಮಾಡಿದ್ದು. ಈ ಭಾಗದಲ್ಲಿ ಭೂಮಿಗೆ ಬಂಗಾರ ಬೆಲೆ ಬರುವುದಕ್ಕೆ ಶುರುವಾಗಿದೆ. ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಜಾರಿಯಾದ ಮೇಲೆ ವಿವಿಧ ಪ್ರದೇಶದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಇದೀಗ ಬೆಂಗಳೂರಿನ ಹೊರ ವಲಯದಲ್ಲೂ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಶುರುವಾಗಿದೆ.

ಹೌದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ಕೆಲವೊಂದು ಮಾಸ್ಟರ್ ಪ್ಲ್ಯಾನ್‌ಗಳಿಂದಾಗಿ ಬೆಂಗಳೂರು ಸೇರಿದಂತೆ ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ) ಹಾಗೂ ಬೆಂಗಳೂರಿನ ಹೊರ ವಲಯದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ.

Land Turns to Gold Near Bengaluru D K Shivakumar s Master Plan

ಇದೀಗ ಬೆಂಗಳೂರಿನ ಸಮೀಪದ ಆನೇಕಲ್‌ನಲ್ಲಿ ಶೀಘ್ರದಲ್ಲೇ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ 80,000 ಆಸನ ಸಾಮರ್ಥ್ಯವಿರುವ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು, ಇದು ನಮ್ಮ ಜನರ ಮಹತ್ವಾಕಾಂಕ್ಷೆಗಳನ್ನು ಪ್ರದರ್ಶಿಸುತ್ತದೆ. ಈ ಆಧುನಿಕ ಸ್ಥಳವು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದರ ಜೊತೆಗೆ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೇಂದ್ರವಾಗಲಿದೆ. ಬೆಂಗಳೂರಿನ ಶಕ್ತಿ ಮತ್ತು ಹೆಮ್ಮೆಯನ್ನು ಪ್ರತಿಬಿಂಬಿಸುವ ಸ್ಥಳಗಳನ್ನು ರಚಿಸುವುದು ನಮ್ಮ ದೃಷ್ಟಿ ಎಂದು ಅವರು ಹೇಳಿದ್ದಾರೆ.

ಈ ಯೋಜನೆಯಿಂದಾಗಿ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಇದೆ. ಆನೇಕಲ್ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಜಾರಿಯಾಗುತ್ತಿರುವ ಬೃಹತ್ ಯೋಜನೆ ಇದಾಗಿದೆ. ಬರೋಬ್ಬರಿ 75 ಎಕರೆ ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ಆನೇಕಲ್ ಬಳಿ ಬೃಹತ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಂಪುಟ ಅಸ್ತು ಎಂದಿದೆ. ಚಿನ್ನಸ್ವಾಮಿ ಸ್ಟೇಡಿಯಂ ಹಳೆಯದಾಗಿರುವುದರಿಂದ ಹಾಗೂ 35,000 ಆಸನಗಳ ಸಾಮರ್ಥ್ಯವಷ್ಟೇ ಇರುವುದರಿಂದ ಆನೇಕಲ್ ಬಳಿ ಬೃಹತ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಂಪುಟ ಅನುಮೋದನೆ ಕೊಡಲಾಗಿದೆ.

ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಬಳಿ 75 ಎಕರೆಯಲ್ಲಿ 2,350 ಕೋಟಿ ವೆಚ್ಚದಲ್ಲಿ ಸ್ಟೇಡಿಯಂ ನಿರ್ಮಾಣ ಮಾಡಲಾಗುತ್ತಿದ್ದು, 80,000 ಆಸನಗಳ ಸಾಮರ್ಥ್ಯವಿರುವ ಸ್ಟೇಡಿಯಂ ನಿರ್ಮಿಸಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಸಂಗೀತ ಕಚೇರಿಗಳು, ಸಾರ್ವಜನಿಕ ಕೂಟಗಳು ಕೂಡ ಆಯೋಜಿಸಲು ಅನುಕೂಲವಾಗುವಂತೆ ಸ್ಟೇಡಿಯಂ ನಿರ್ಮಿಸಲು ನಿರ್ಧಾರಿಸಿದ್ದು, ಸಮಗ್ರ ಅಭಿವೃದ್ಧಿಯೇ ನಮ್ಮ ಉದ್ದೇಶ ಎಂದು ಡಿ.ಕೆ ಶಿವಕುಮಾರ್‌ ಅವರು ಹೇಳಿದ್ದಾರೆ. ಇದರಿಂದ ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಮೂಡಿದೆ.

ಆದರೆ ಇದಕ್ಕೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಲಕ್ಷ್ಮೀಶ್ ಎನ್ನುವವರು, ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಆನೇಕಲ್ ಭಾಗದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಾಡುವಂತಹ ಕ್ರಿಕೆಟ್ ಸ್ಟೇಡಿಯಂ ಅನ್ನು ಮಾಡುವ ಬದಲು ಮಾಗಡಿ-ನೆಲಮಂಗಲ ಭಾಗದಲ್ಲಿ ಮಾಡುವುದು ಒಳಿತಲ್ಲವೇ? ವಿಶಾಲ ಕರ್ನಾಟಕದ ಕಡೆಗೆ ವಿಶ್ವ ದರ್ಜೆಯ ಸೌಲಭ್ಯ ಬರಲಿ.

ಈಗ ಕ್ರಿಕೆಟ್ ಸ್ಟೇಡಿಯಂ ಮಾಡಿ, ಮುಂದೆ ಮೆಟ್ರೊ ಮಾಡುತ್ತಾರೆ. ಅದಕ್ಕೆ ಹೊಸೂರಿನ ಸಂಪರ್ಕವನ್ನೂ ಕೊಡುತ್ತಾರೆ. ತಮಿಳುನಾಡಿನ ಸರ್ಕಾರದಿಂದ ಹೊಸೂರಿನಲ್ಲಿ ವಿಶ್ವ ದರ್ಜೆಯ ಸಾಫ್ಟವೇರ್ ಪಾರ್ಕ್ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬರುತ್ತದೆ. ಅಲ್ಲಿಗೆ ಬೆಂಗಳೂರು ಮತ್ತು ತನ್ಮೂಲಕ ಕರ್ನಾಟಕದ ಔದ್ಯಮಿಕ ಬೆಳವಣಿಗೆಗೆ ಬಹುದೊಡ್ಡ ಹಿನ್ನೆಡೆಯಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+