Land grabbers arrest: ಬೆಂಗಳೂರಿನಲ್ಲಿ ನಿವೇಶನ ಲಪಟಾಯಿಸುವ ಜಾಲ ಪತ್ತೆ
ಬೆಂಗಳೂರು, ಮಾ. 15: ರಾಜಧಾನಿ ಬೆಂಗಳೂರಿನಲ್ಲಿ ನಿವೇಶನ ಹೊಂದಿದ್ದೀರಾ? ಎಚ್ಚರವಿರಲಿ, ಸ್ವಲ್ಪ ಯಾಮಾರಿದರೂ ನಿಮ್ಮ ನಿವೇಶನಕ್ಕೆ ಬೇರೆಯದ್ದೆ ಮಾಲೀಕರು ಹುಟ್ಟಿಕೊಳ್ಳುತ್ತಾರೆ. ಯಾಕೆಂದರೆ ಬೆಂಗಳೂರಿನಲ್ಲಿ ಖಾಲಿ ನಿವೇಶನ ಗುರುತಿಸಿ ಅದಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುವ ದೊಡ್ಡ ಜಾಲವೊಂದಿದೆ. ಅದರ ಒಂದು ಗ್ಯಾಂಗ್ ಅನ್ನು ಯಲಹಂಕ ಉಪ ನಗರ ಪೊಲೀಸರು ಬಂಧಿಸಿದ್ದಾರೆ. ಸುಮಾರು 2 ಸಾವಿರಕ್ಕೂ ಅಧಿಕ ನಕಲಿ ಛಾಪಾ ಕಾಗದಗಳನ್ನು ಸೃಷ್ಟಿಸಿ ಖಾಲಿ ನಿವೇಶನ ಕಬ್ಜಾ ಮಾಡುವ ಮಾಡಿರುವ ಸಂಗತಿ ತನಿಖೆಯಲ್ಲಿ ಬಯಲಾಗಿದೆ.
ವಿದೇಶಿ ವೈದ್ಯನ ಸೈಟು ಕಬ್ಜಾ: ಆ ವ್ಯಕ್ತಿಯ ಹೆಸರು ಪ್ರಶಾಂತ್ ರೆಡ್ಡಿ. ಚಿಕ್ಕಬೊಮ್ಮಸಂದ್ರದ ನಿವಾಸಿ. ವೃತ್ತಿಯಲ್ಲಿ ವೈದ್ಯರಾಗಿರುವ ಜಯಪ್ರತಾಪ್ ರೆಡ್ಡಿ ವಿದೇಶದಲ್ಲಿ ನೆಲೆಸಿದ್ದಾರೆ. ವಯೋವೃದ್ಧ ತಂದೆ ಜಯಪ್ರತಾಪ್ ರೆಡ್ಡಿ ಚಿಕ್ಕಬೊಮ್ಮಸಂದ್ರದಲ್ಲಿ ನೆಲೆಸಿದ್ದಾರೆ. ಜಯ ಪ್ರತಾಪ್ ರೆಡ್ಡಿಗೆ ಸೇರಿದ 2400 ಚದರಡಿಯ ನಿವೇಶನವನ್ನು ಹೊಂದಿದ್ದರು. ಜಯ ಪ್ರತಾಪ್ ರೆಡ್ಡಿ ಅಮೆರಿಕದಲ್ಲಿರುವ ವಿಚಾರ ತಿಳಿದ ಕಿರಾತಕರು ಅಸಲಿ ದಾಖಲೆ ಎಂಬಂತೆ ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಕೇವಲ ಇದೊಂದು ನಿವೇಶನವಲ್ಲ, ಯಲಹಂಕ ಉಪ ನಗರ ಠಾಣೆಯಲ್ಲಿ ಖಾಲಿ ನಿವೇಶನಗಳನ್ನು ಗುರುತಿಸಿ, ಅವುಗಳಿಗೆ ಅಗತ್ಯ ನಕಲಿ ಛಾಪಾ ಕಾಗದ, ಸೇಲ್ ಡೀಡ್, ಜಿಪಿಎ ರಿಜಿಸ್ಟರ್, ಸೇಲ್ ಅಗ್ರಿಮೆಂಟ್ ಸೃಷ್ಟಿಸಿ ಬೇರೆಯವರ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ಮೋಸ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಆರಕ್ಕೂ ಹೆಚ್ಚು ಪ್ರಕರಣ ಈ ಆರೋಪಿಗಳ ವಿರುದ್ಧ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡುವ ಕಿರಾತಕರ ಗ್ಯಾಂಗ್ ವಿವರ ಇಲ್ಲಿದೆ ನೋಡಿ.

ಪಾಯಿಸನ್ ಪ್ರದೀಪ: ಪ್ರದೀಪ್ ಅಲಿಯಾಸ್ ಪಾಯಿಸನ್ ಪ್ರದೀಪ ಅಲಿಯಾಸ್ ಸಂಗಯ್ಯ ವಯಸ್ಸು 28 ವರ್ಷ, ಅಟ್ಟೂರು ಬಡಾವಣೆ, ಹಾಲಿ ವಾಸ, ಪ್ರೆಸ್ಟೀಜ್ ರಾಯಲ್ ಗರ್ಡನ್ ಅಪಾರ್ಟ್ ಮೆಂಟ್, ದೊಡ್ಡಬಳ್ಳಾಪುರ ರಸ್ತೆ,
ಧರ್ಮಲಿಂಗಂ: ಧರ್ಮಲಿಂಗಂ ಈ ಪ್ರಕರಣದ ನಾಲ್ಕನೇ ಆರೋಪಿ, ವಯಸ್ಸು 48 ವರ್ಷ, ಕನಕಪುರ ಮೂಲದವನು. ಹಾಲಿ ವಾಸ ಚಿಕ್ಕಬೊಮ್ಮಸಂದ್ರ, ಯಲಹಂಕ ಉಪ ನಗರ,
ಮಂಜುನಾಥ್ ಕೆ. : ವಯಸ್ಸು 43 ವರ್ಷ, ಯಲಹಂಕ ಉಪ ನಗರದ ಎನ್ಇಎಸ್ ಬಸ್ ನಿಲ್ದಾಣದಲ್ಲಿ ವಾಸ.
ಯಾರಬ್: ಈತ ಈ ಪ್ರಕರಣ ಆರನೇ ಆರೋಪಿ, ವಯಸ್ಸು 41 ವರ್ಷ, ಇಡಬ್ಲೂಎಸ್ ಎರಡನೇ ಹಂತ, ಯಲಹಂಕ ಉಪ ನಗರ,
ವೈ.ಅರ್. ಮಂಜುನಾಥ್: ಏಳನೇ ಆರೋಪಿ, ಅಟ್ಟೂರು ಲೇಔಟ್ ನಿವಾಸಿ, ಯಲಹಂಕ ಉಪನಗರ ಬೆಂಗಳೂರು.
ಅಬ್ದುಲ್ ಘನಿ: ಈತ 67 ವರ್ಷ ವಯಸ್ಸಿನವ. ಕೊಡಿಗೇಹಳ್ಳಿ ನಿವಾಸಿ. ಈತನ ಹೆಸರಿನಲ್ಲಿ ನಕಲಿ ಸೇಲ್ ಡೀಡ್ ಮಾಡಿ ನಿವೇಶನಗಳನ್ನು ಪರಭಾರೆ ಮಾಡುತ್ತಿದ್ದರು.
ಶಭಾನ ಭಾನು: ಶ್ಯಾಂಪುರ, ಆರ್.ಟಿ. ನಗರ ನಿವಾಸಿ, ಈ ಕಿರಾತಕರೊಂದಿಗೆ ಕೈ ಜೋಡಿಸಿ ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಈಕೆ ಹೆಸರಿನಲ್ಲಿ ಸೃಷ್ಟಿಸಿ ಪರಭಾರೆ ಮಾಡಲಾಗುತ್ತಿತ್ತು. ಕೊಲೆ ಅರೋಪಿ ರಾಮಯ್ಯ ಅಲಿಯಾಸ್ ಅಟೋ ರಾಮ ಕೂಡ ಈ ಜಾಲದಲ್ಲಿ ಭಾಗಿಯಾಗಿದ್ದು, ಇತ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ, ನ್ಯಾಯಾಂಗ ಬಂಧನದಿಂದ ಬಿಡುಗಡೆಯಾಗಿ ಈ ದಂಧೆಯಲ್ಲಿ ತೊಡಗಿಸಿಕೊಂಡಿರುತ್ತಾನೆ.
ಬಂಧಿತ ಅರೋಪಿಗಳಿಂದ 2130 ನಕಲಿ ಛಾಪಾ ಕಾಗದ, ಉಪ ನೋಂದಣಾಧಿಕಾರಿ ಕಚೇರಿಗಳಿಗೆ ಸಂಬಂಧಿಸಿದಂತೆ 17 ಸೀಲು, ಟೈಪ್ ರೈಟಿಂಗ್ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರಿಂದ ಯಲಹಂಕ ಭಾಗದ ನಿವೇಶನ ಮಾಲೀಕರು ನಿಟ್ಟುಸಿರು ಬಿಟ್ಟಂತಾಗಿದೆ.
Recommended Video
-
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ












Click it and Unblock the Notifications