ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಬ್‌ಅರ್ಬನ್ ರೈಲಿಗಾಗಿ ಭೂಸ್ವಾಧೀನಕ್ಕೆ ಅಧಿಸೂಚನೆ ಪ್ರಕಟ

|
Google Oneindia Kannada News

ಬೆಂಗಳೂರು,ಜನವರಿ 30: ಬೆಂಗಳೂರು ಅಬ್ ಅರ್ಬನ್ ರೈಲು ಯೋಜನೆಗೆ ಅಗತ್ಯವಿರುವ ಭೂ-ಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಇದೀಗ ಯೋಜನೆಯ ನಾಲ್ಕು ಕಾರಿಡಾರ್‌ಗಳ ಪೈಕಿ ಎರಡನೇ ಕಾರಿಡಾರ್ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಮಾರ್ಗದಲ್ಲಿ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಮುಂಬೈ: ಫೆ.1ರಿಂದ ಸ್ಥಳೀಯ ರೈಲುಗಳ ಸಂಚಾರ ಶುರು ಮುಂಬೈ: ಫೆ.1ರಿಂದ ಸ್ಥಳೀಯ ರೈಲುಗಳ ಸಂಚಾರ ಶುರು

ರಾಜಧಾನಿ ಜನರ ಬಹುವರ್ಷಗಳ ಬೇಡಿಕೆಯಾಗಿರುವ ಉಪನಗರ ರೈಲು ಯೋಜನೆ ಅನುಷ್ಠಾನ ಪ್ರಕ್ರಿಯೆಗಳು ಗರಿಗೆದರಿವೆ. ಯೋಜನೆಯ 15,767 ಕೋಟಿ ಅಂದಾಜು ವೆಚ್ಚದಲ್ಲಿ 148.17 ಕಿ.ಮೀ ರೈಲು ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ.

ಮೊದಲ ಹಂತದಲ್ಲಿ ಏನಿರಲಿದೆ

ಮೊದಲ ಹಂತದಲ್ಲಿ ಏನಿರಲಿದೆ

ಮೊದಲ ಹಂತದಲ್ಲಿ ಈಗಿರುವ ಕಾರಿಡಾರ್‌ನ ಭಾಗ 1ರ ಚಿಕ್ಕಬಾಣಾವರದಿಂದ ಜಾಲಹಳ್ಳಿವರೆಗೆ ಒಟ್ಟು 4891 ಚದರ ಮೀಟರ್ ವಿಸ್ತೀರ್ಣ ಭೂಸ್ವಾಧೀನ ಮಾಡಲಾಗುತ್ತದೆ.

ಕ್ರಯ, ಭೋಗ್ಯ,ಒಪ್ಪಂದಕ್ಕಿಲ್ಲ ಅವಕಾಶ

ಕ್ರಯ, ಭೋಗ್ಯ,ಒಪ್ಪಂದಕ್ಕಿಲ್ಲ ಅವಕಾಶ

ರಾಜ್ಯ ಸರ್ಕಾರದ ಪರವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಈ ಅಧಿಸೂಚನೆ ಹೊರಡಿಸಿದೆ. ಅದರಂತೆ ಅಧಿಸೂಚನೆ ಪ್ರಕಟಿಸಲಾಗಿರುವ ಭೂಮಿಯನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಉಪನಗರ ರೈಲು ಯೋಜನೆ ವಿಭಾಗದ ವಿಶೇಷ ಭೂಸ್ವಾಧೀನಾಧಿಕಾರಿ ಅನುಮತಿ ಇಲ್ಲದೆ ವಿಲೇವಾರಿ, ಒಪ್ಪಂದ, ಕ್ರಯ, ಭೋಗ್ಯ ಇನ್ನಿತರೆ ರೀತಿಯ ಚಟುವಟಿಕೆ ಮಾಡುವಂತಿಲ್ಲ ಎಂದು ಹೇಳಿದೆ.

ಭೂಮಿಯಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ

ಭೂಮಿಯಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ

ಹಾಗೆಯೇ ಈ ಭೂಮಿಯಲ್ಲಿ ಕಟ್ಟಡಗಳ ನಿರ್ಮಾಣ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವಂತಿಲ್ಲ,ಒದು ವೇಳೆ ಅಂತಹ ಚಟುವಟಿಕೆ ಮಾಡಿದರೂ ಈ ಭೂಮಿಗೆ ಪರಿಹಾರ ನಿಗದಿ ಮಾಡುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ, ಅಂತಿಮವಾಗಿ ಸ್ವತ್ತುಗಳನ್ನು ಸ್ವಾಧೀನಕ್ಕೆ ಪಡೆಯಲಾಗುತ್ತದೆ ಎಂದು ಹೇಳಲಾಗಿದೆ.

Recommended Video

Union budget 2021 | Budget ಮಂಡಿಸಿದ ಮೊದಲ ಮಹಿಳೆ ಯಾರು ಗೊತ್ತಾ? | Oneindia Kannada
ಮತ್ತೆಲ್ಲಿ ಭೂಸ್ವಾಧೀನ ಕಾರ್ಯ

ಮತ್ತೆಲ್ಲಿ ಭೂಸ್ವಾಧೀನ ಕಾರ್ಯ

ಬೆಂಗಳೂರು ಉತ್ತರ ಮತ್ತು ಯಲಹಂಕ ತಾಲೂಕು ವ್ಯಾಪ್ತಿಯ ಏಳು ಗ್ರಾಮಗಳ ವ್ಯಾಪ್ತಿಯಲ್ಲಿ ಈ ಭೂಸ್ವಾಧೀನ ಮಾಡಲಾಗುತ್ತದೆ. ಅಧಿಸೂಚನೆ ಅನ್ವಯ 7 ಗ್ರಾಮಗಳ ಪೈಕಿ ಚಿಕ್ಕಬಾಣಾವರ 332.14 ಚ.ಮೀ, ಚಿಕ್ಕಸಂದ್ರ 28.68 ಚ.ಮೀ, ಶೆಟ್ಟಿಹಳ್ಳಿ 91.97ಚ.ಮೀ, ಮ್ಯಾಕಲ ಚನ್ನಹಳ್ಳಿ 219.35 ಚ.ಮೀ, ಪೀಣ್ಯ ಪ್ಲಾಂಟೇಷನ್ 573.35 ಚ.ಮೀ, ಜಾರಕಬಂಡೆ ಕಾವಲ್ 1866.18ಚ.ಮೀ ವಿಸ್ತೀರ್ಣದ ಭೂಮಿ ಭೂಸ್ವಾಧೀನಕ್ಕೆ ಪಡೆಯಲಾಗಿದೆ.

English summary
Land acquisition process started for Bengaluru Suburban Rail project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X