Lalbagh Flower Show 2025: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ 2025 ಥೀಮ್, ವಿಶೇಷತೆ, ಪ್ರವೇಶ ಶುಲ್ಕಗಳ ಮಾಹಿತಿ
Bengaluru's Lalbagh Flower Show 2025: ಪ್ರತಿವರ್ಷವೂ ಸ್ವಾತಂತ್ರ್ಯೋತ್ಸವ ಅಂಗವಾಗಿ ಬೆಂಗಳೂರಿನ ಸಸ್ಯಕಾಶಿ ಅಂತಲೇ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗುತ್ತದೆ. ಹಾಗೆಯೇ ಇದೀಗ ಈ ಬಾರಿಯೂ 218ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ. ಹಾಗಾದ್ರೆ ಈ ಬಾರಿಯ ಥೀಮ್ ಏನು? ಏನೆಲ್ಲಾ ವಿಶೇಷತೆಗಳಿಗೆ ಹಾಗೂ ಪ್ರವೇಶ ಶುಲ್ಕಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರಿನ ಸಸ್ಯಕಾಶಿ ಅಂತಲೇ ಹೆಸರುವಾಸಿಯಾಗಿರುವ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ವರ್ಷದಲ್ಲಿ ಎರಡು ಬಾರಿ ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಲಾಗುತ್ತದೆ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ. ಇನ್ನೂ ಕೆಲವೇ ದಿನಗಳಲ್ಲಿ ಸ್ವಾಂತಂತ್ರ್ಯ ದಿನಾಚರಣೆ ಬರಲಿದ್ದು, ಇದರ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಗಸ್ಟ್ 7ರಂದು 218ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ.

ಈ ಬಾರಿ ಫಲಪುಷ್ಪ ಪ್ರದರ್ಶನ ವೀರ ರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜೀವನಗಾಥೆಯ ಥೀಮ್‌ನಲ್ಲಿ ಆಯೋಜನೆ ಮಾಡಲಾಗಿದೆ. ಇನ್ನು ಗುರವಾರ ಫಲಪುಷ್ಟ ಪ್ರದರ್ಶನ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಬಾರಿ ಫಲಪುಷ್ಪ ಪ್ರದರ್ಶನದ ಮೂಲಕ ಬ್ರಿಟೀಷರ ವಿರುದ್ಧ ಶೌರ್ಯದಿಂದ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಅವರ ಬಲಗೈಯಾದ ಸಂಗೊಳ್ಳಿ ರಾಯಣ್ಣ ಅವರಿಗೆ ಪುಷ್ಪಗೌರವ ಸಲ್ಲಿಸಲಾಗಿದೆ ಎಂದು ಹೇಳಿದರು.
ರಾಣಿ ಚೆನ್ನಮ್ಮ ಅವರು ಮೊದಲನೇ ಯುದ್ಧದಲ್ಲಿ ಬ್ರಿಟಿಷರನ್ನು ಸೋಲಿಸಿದ್ದರು. ಆದರೆ ಎರಡನೇ ಯುದ್ಧದಲ್ಲಿ ಬಂಧಿತರಾದರು. ಸಂಗೊಳ್ಳಿ ರಾಯಣ್ಣ ಅವರನ್ನು ನ್ಯಾಯಾಲಯದ ಆದೇಶದಂತೆ ನೇಣಿಗೆ ಹಾಕಲಾಯಿತು. ವಿಶೇಷ ಅಂದ್ರೆ ಅವರು ಹುಟ್ಟಿದ್ದು ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರಂದು, ನೇಣಿಗೆ ಹಾಕಿದ್ದು ಸಂವಿಧಾನ ಜಾರಿಗೆ ಬಂದ ಜನವರಿ 26ರಂದು. ಇವೆರಡೂ ಕಾಕತಾಳೀಯ ದಿನಾಂಕಗಳು ಎಂದು ವಿವರಿಸಿದರು.
ವೀಕ್ಷಣೆ ಸಮಯ ಹಾಗೂ ಶುಲ್ಕದ ವಿವರ
* ಸಮಯ: ಆಗಸ್ಟ್ 17 ರ ವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 6 ಗಂಡೆ ವರೆಗೆ
* ಶುಲ್ಕ: ವಾರದ ದಿನಗಳಲ್ಲಿ ವಯಸ್ಕರಿಗೆ 80 ರೂಪಾಯಿ, ವಾರಾಂತ್ಯ ಮತ್ತು ಸಾರ್ವಜನಿಕ ರಜಾದಿನಗಳ (ಶನಿವಾರ, ಭಾನುವಾರ) ವೇಳೆ 100 ರೂಪಾಯಿ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 30 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು ಸಮವಸ್ತ್ರದಲ್ಲಿ ಬರುವ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಟಿಕೆಟ್ ಪಡೆಯುವ ವಿಧಾನಗಳು: ಟಿಕೆಟ್‌ಗಳನ್ನು ಲಾಲ್‌ಬಾಗ್ ಪ್ರವೇಶ ದ್ವಾರಗಳಲ್ಲಿ ಪಡೆಯಬಹುದು. ಇಲ್ಲಿದಿದದ್ದರೆ, ಇನ್ನೂ ಒಂದು ಸುಲಭ ಮಾರ್ಗದ ಮೂಲಕ ಅಂದರೆ, ಅಧಿಕೃತ ಪೋರ್ಟಲ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ವಿಶೇಷತೆಗಳು: ಕಿತ್ತೂರು ಕೋಟೆಯ 18 ಅಡಿ ಎತ್ತರ, 32 ಅಡಿ ಅಗಲದ ಮಾದರಿ ನಿರ್ಮಾಣ ಕೋಟೆಯ ಒಳಭಾಗದಲ್ಲಿ ಫಲಪುಷ್ಪಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಸ್ಮರಣೆ ರಾಣಿ ಅಬ್ಬಕ್ಕದೇವಿ, ರಾಣಿ ಚೆನ್ನಾ ಭೈರಾದೇವಿ, ರಾಣಿ ಬೆಳವಾಡಿ ಮಲ್ಲಮ್ಮ, ರಾಣಿ ಕೆಳದಿ ಚೆನ್ನಮ್ಮ ಮತ್ತು ಚಿತ್ರದುರ್ಗ ಕೋಟೆಯ ಒನಕೆ ಓಬವ್ವನ ಹೂವಿನ ಪ್ರತಿಮೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ದಕ್ಷಿಣ ಭಾರತದಾದ್ಯಂತದ ವಿಶೇಷ ಪ್ರಭೇದಗಳು ಸೇರಿದಂತೆ 6 ಲಕ್ಷಕ್ಕೂ ಹೆಚ್ಚು ಹೂಬಿಡುವ ಸಸ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇನ್ನೂ ಈ ಹೂಗಳಲ್ಲಿ ಕಿತ್ತೂರು ಕೋಟೆ, ಕುದುರೆ ಸವಾರಿ ಮಾಡುವ ರಾಣಿ ಚೆನ್ನಮ್ಮ ಮತ್ತು ರಾಯಣ್ಣನನ್ನು ಬಿಂಬಿಸು ಪ್ರತಿಮೆಗಳನ್ನು ಮಾಡಲಾಗಿದ್ದು, ಇವುಗಳು ಜನರನ್ನು ತನ್ನತ್ತ ಸೆಳೆಯುತ್ತಿವೆ. ಅಲ್ಲದೆ, ಮಾಹಿತಿಯುಕ್ತ ಪ್ರದರ್ಶನಗಳು, ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸುವ ಹೊರಾಂಗಣ ಪರದೆಗಳು ಸೇರಿದಂತೆ ಇನ್ನು ಹಲವು ರೀತಿಯ ಆಕೃತಿಗಳನ್ನು ಹೂವಿನಲ್ಲಿ ತಯಾರಿ ಮಾಡಲಾಗಿದ್ದು, ಇವುಗಳು ನೋಡುಗರನ್ನು ಆಕರ್ಷಿಸುವಂತಿವೆ.












Click it and Unblock the Notifications