Lalbagh flower show 2023: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ದಿನಾಂಕ ಫಿಕ್ಸ್, ವಿಶೇಷತೆ, ದಿನಾಂಕಗಳ ವಿವರ ತಿಳಿಯಿರಿ
ಬೆಂಗಳೂರು, ಜುಲೈ, 13: ರಾಜ್ಯ ರಾಜ್ಯಧಾನಿಯ ಲಾಲ್‌ಬಾಗ್‌ನಲ್ಲಿ ಇದೇ ವರ್ಷದ ಜನವರಿ ತಿಂಗಳಲ್ಲಿ ಅದ್ಧುರಿಯಾಗಿ ಫಲಪುಷ್ಪ ಪ್ರದರ್ಶನ ನಡೆದಿತ್ತು. ಇದೀಗ ಮತ್ತೆ 76ನೇ ಸ್ವಾಂತತ್ರ್ಯ ದಿನದ ಅಂಗವಾಗಿ ಫಲಪುಷ್ಪ ಪ್ರದರ್ಶವನ್ನು ಏರ್ಪಡಿಸಲಾಗಿದೆ. ಹಾಗಾದರೆ ದಿನಾಂಕಗಳು, ಈ ಬಾರಿ ಏನೆಲ್ಲ ವಿಶೇಷತೆಗಳು ಇರಲಿವೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.
ಸ್ವಾತಂತ್ರೋತ್ಸವದ ಪ್ರಯುಕ್ತ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಗಸ್ಟ್ 4-15ರವರೆಗೆ 214ನೇ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಗಸ್ಟ್ 4ರಂದು ಪ್ರದರ್ಶನ ಆರಂಭ ಹಿನ್ನೆನೆ ಈಗಾಗಲೇ ತೋಟಗಾರಿಕೆ ಇಲಾಖೆ ಭರ್ಜರಿ ಪೂರ್ವ ತಯಾರಿಗಳನ್ನು ಮಾಡಿಕೊಂಡಿದೆ. ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ 2 ಕೋಟಿ ರೂಪಾಯಿ ಮೀಸಲು ಇರಿಸಲಾಗಿದೆ.

ಲಾಲ್‌ಬಾಗ್‌ನಲ್ಲಿ ಪ್ರತಿ ಬಾರಿಯೂ ವಿಭಿನ್ನ ಪರಿಕಲ್ಪನೆಯಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಾ ಬಂದಿದೆ. ಹಾಗೆಯೇ ಈ ಬಾರಿ ವಿಧಾನಸೌಧ ಮತ್ತು ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಪರಿಕಲ್ಪನೆಯೊಂದಿಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ವವ ಮತ್ತು ಸ್ವಾತಂತ್ರ್ಯೋತ್ಸವ ಅಂಗವಾಗಿ ವರ್ಷಕ್ಕೆ ಎರಡು ಬಾರಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತದೆ. 2023ರ ಗಣರಾಜ್ಯೋತ್ಸವ ಅಂಗವಾಗಿ ಜನವರಿ 20- 30ರವರೆಗೆ 213ನೇ ಫಲಷುಷ್ಪ ಪ್ರದರ್ಶನ ನಡೆದಿದ್ದು, ಈ ವೇಳೆ 11 ದೇಶಗಳಿಂದ 69 ವಿವಿಧ ಬಗೆಯ ಹೂವು ತರಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಹಾಗೆಯೇ ಈ ಬಾರಿಯೂ ವಿಶೇಷ ರೀತಿಯಲ್ಲಿ ತಯಾರಿ ಮಾಡಿಕೊಳ್ಳಲಾಗಿದೆ.
ಈ ಬಾರಿಯ ಪ್ರಮುಖ ಆಕರ್ಷಣೆ ಏನು?
ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಹೂವಿನ ಪ್ರತಿಕೃತಿ ಪ್ರಮುಖ ಆಕರ್ಷಣೆ ಆಗಲಿದೆ. ಅಲ್ಲದೆ ರಾಜ್ಯದ ಅಪಾರ ಪ್ರಮಾಣದಲ್ಲಿ ಕೊಡುಗೆ ನೀಡಿದ ಕೆಂಗಲ್ ಹನುಮಂತಯ್ಯನವರ ಸಾಧನೆಯನ್ನು ಬಿಂಬಿಸುವಂತಹ ಪ್ರದರ್ಶನ ನಡೆಸಲು ತೋಟಗಾರಿಕೆ ಇಲಾಖೆ ಚರ್ಚೆ ನಡೆಸಿದೆ. ಪ್ರದರ್ಶನದಲ್ಲಿ ಏನೆಲ್ಲ
ವಿವಿಧ ಬಗೆಯ ಗುಲಾಬಿ, ಆಂಥೋರಿಯಂ, ಜರ್ಬೇರಾ, ಆರ್ಕಿಡ್, ಸೈಕ್ಲೋಮನ್, ಕ್ಯಾಲಾಲಿಲ್ಲಿ, ಸುಗಂಧರಾಜ ಸೇರಿ ನಾನಾ ಹೂಗಳು ಪ್ರದರ್ಶನದಲ್ಲಿ ಗಮನ ಸೆಳೆಯಲಿವೆ. ಅಲ್ಲದೆ ತರಕಾರಿ ಕೆತ್ತನೆ ಪ್ರದರ್ಶನ, ವಿವಿಧ ಹೂವಿನ ಜೋಡಣೆಯ ಕಲಾಕೃತಿಗಳ ಪ್ರದರ್ಶನವೂ ಇರಲಿದೆ. ಕೊಲಂಬಿಯಾ, ಕೀನ್ಯಾ, ನೆದರ್‌ಲ್ಯಾಂಡ್, ಇಸ್ರೇಲ್, ಆಸ್ಟ್ರೇಲಿಯಾ ಸೇರಿ ವಿವಿಧ 11 ದೇಶಗಳ ವಿವಿಧ ಬಗೆಯ ಬಣ್ಣದ ಹೂವುಗಳು ನೋಡುಗರನ್ನು ಸೆಳೆಯಲಿವೆ.
ಅಷ್ಟೇ ಅಲ್ಲದೆ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಸಿಕ್ಕಿಂ ಸೇರಿ ಹಲವು ರಾಜ್ಯಗಳ ಹೂವುಗಳನ್ನು ಪ್ರದರ್ಶನಲ್ಲಿ ಇಡಲಾಗುತ್ತದೆ. ಇನ್ನು ಕಳೆದ ಬಾರಿಯಂತೆ ಈ ಬಾರಿಯೂ ತೋಟಗಾರಿಕೆ ಇಲಾಖೆ ನೇತೃತ್ವದಲ್ಲಿಯೇ ಫಲಪುಷ್ಪ ಪ್ರದರ್ಶನ ಮತ್ತು ಸ್ಪರ್ಧೆಗಳ ಆಯೋಜನೆಯನ್ನೂ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಜನವರಿ 26ರ ಗಣರಾಜ್ಯೋತ್ಸವದಂದು ನಡೆದ ಫಲಪುಷ್ಪ ಪ್ರದರ್ಶನದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಬೆಳೆದು ಬಂದ ಹಾದಿ ಎಂಬ ಥೀಮ್‌ನೊಂದಿಗೆ ಆಯೋಜಿಸಲಾಗಿತ್ತು. ಪ್ರಮುಖ ಆಕರ್ಷಣೆ ಗಾಜಿನ ಮನೆ ನೋಡಲು ಜನಸಾಗರವೇ ಆಗಮಿಸಿತ್ತು. ಆಗ ಗಾಜಿನ ಮನೆ ಹಿಂಭಾಗದಲ್ಲಿ ರಚಿಸಲಾಗಿರುವ ಬೆಂಗಳೂರು ಇತಿಹಾಸದ ಪೆವಿಲಿಯನ್‌ನಲ್ಲಿ ಲಾಲ್‌ಬಾಗ್ ಬಟಾನಿಕಲ್ ಗಾರ್ಡನ್ ಸೇರಿದಂತೆ ರಾಜ್ಯದ 4 ಪ್ರಮುಖ ಬಟಾನಿಕಲ್ ಗಾರ್ಡನ್, ನಂದಿ ಗಿರಿಧಾಮ, ಕೆಮ್ಮಣ್ಣುಗುಂಡಿ ಮತ್ತು ಊಟಿ ಗಿರಿಧಾಮಗಳು, ಕಬ್ಬನ್‌ಪಾರ್ಕ್, ಕೊಪ್ಪಳದ ಪಂಪಾವನ, ದಾವಣಗೆರೆ, ಮೈಸೂರಿನ ಗಾಜಿನ ಮನೆ ಮಾದರಿಗಳು ಗಮನ ಸೆಳೆದಿದ್ದವು. ಹಾಗೆಯ ಈ ಬಾರಿಯೂ ಜನರನ್ನು ಸೆಳೆಯಲು ತೋಟಗಾರಿಕೆ ಇಲಾಖೆ ಭಾರೀ ಸಿದ್ಧತೆಗಳನ್ನು ನಡೆಸಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications