ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲ್ಲಿದ್ದಲು ಕೊರತೆ : ಕಾಡಲಿದೆ ಲೋಡ್ ಶೆಡ್ಡಿಂಗ್ ಭೀತಿ

By Manjunatha
|
Google Oneindia Kannada News

ಬೆಂಗಳೂರು, ನವೆಂಬರ್ 18 : ಬೇಸಿಗೆ ಇನ್ನೂ ನಾಲ್ಕೈದು ತಿಂಗಳು ಇರುವಂತೆಯೇ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ವಿದ್ಯುತ್ ಬರದ ಮುನ್ಸೂಚನೆ ಕೊಟ್ಟಿದ್ದಾರೆ.

ಅನಿಯಮಿತ ಲೋಡ್‌ ಶೆಡ್ಡಿಂಗ್‌ಗೆ ಸಿಕ್ತು ಪರಿಹಾರ!ಅನಿಯಮಿತ ಲೋಡ್‌ ಶೆಡ್ಡಿಂಗ್‌ಗೆ ಸಿಕ್ತು ಪರಿಹಾರ!

'ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇರುವುದರಿಂದ ವಿದ್ಯುತ್ ಅಭಾವ ಉಂಟಾಗುವ ಸಾದ್ಯತೆ ಇದೆ, ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ' ಎಂದಿದ್ದಾರೆ ಡಿ.ಕೆ.ಶಿವಕುಮಾರ್.

Lack of Coal stock, Power crisis may occur

ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಸರಿಯಾಗಿ ಆಗುತ್ತಿಲ್ಲ, ರಾಜ್ಯದ ಅವಶ್ಯಕತೆಗಳನ್ನು ಕೇಂದ್ರಕ್ಕೆ ಮನವರಿಕೆ ಮಾಡಿದ್ದೇವಾದರೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು, ಕಲ್ಲಿದ್ದಲು ಅಭಾವ ಸಮಸ್ಯೆಗೆ ಕೇಂದ್ರದೆಡೆಗೆ ಬೊಟ್ಟು ಮಾಡಿದರು.

ಈ ಬಾರಿ ಮಳೆ ಚೆನ್ನಾಗಿ ಆಗಿದೆ ಹಾಗಾಗಿ ಬೇಸಿಗೆಯಲ್ಲಿ ವಿದ್ಯುತ್ ಅಭಾವ ಇರಲಾರದು ಎಂದು ರಾಜ್ಯದ ಜನ ನಿಶ್ಚಿಂತೆಯಿಂದ ಇದ್ದಾಗಲೇ ಇಂಧನ ಸಚಿವರು ಲೋಡ್ ಶೆಡ್ಡಿಂಗ್ ಬಾಂಬ್ ಹಾಕಿದ್ದಾರೆ.

ಅನಿಯಮಿತ ಲೋಡ್‌ ಶೆಡ್ಡಿಂಗ್‌ಗೆ ಕಾರಣ ಬಹಿರಂಗಅನಿಯಮಿತ ಲೋಡ್‌ ಶೆಡ್ಡಿಂಗ್‌ಗೆ ಕಾರಣ ಬಹಿರಂಗ

ಚಳಿಗಾಲದಲ್ಲೇ ಲೋಡ್ ಶೆಡ್ಡಿಂಗ್ ಪ್ರಾರಂಭವಾದರೆ ಬೇಸಿಗೆಯಲ್ಲಿ ಎಂತಹಾ ಪರಿಸ್ಥಿತಿ ಎದುರಿಸಬೇಕಾಗಬಹುದೊ ಎಂಬ ಚಿಂತಿ ರಾಜ್ಯದ ಜನತೆಗೆ ಕಾಡಲು ಪ್ರಾರಂಭವಾಗಿದೆ.

ಪ್ರಸ್ತುತ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಮುಖ್ಯಮಂತ್ರಿಗಳು ಏನು ಕ್ರಮ ಕೈಗೊಳ್ಳುತ್ತಾರೊ ಕಾದು ನೋಡಬೇಕಿದೆ. ಒಟ್ಟಿನಲ್ಲಿ ದೀಪ, ಮೇಣದ ಬತ್ತಿಗಳನ್ನು ತಯಾರಾಗಿ ಇಟ್ಟುಕೊಂಡಿರುವುದು ಒಳ್ಳೆಯದು...

English summary
Due to lack of Coal stock Karnataka may face Power crisis. power minister D.K.Shivakumar said no proper supply of coal from central, so power crisis may occur in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X