ಸುಮಲತಾ ಪರ ಯಶ್, ದರ್ಶನ್ ಪ್ರಚಾರ: ಸಿಎಂ ಮತ್ತೊಂದು ಟೀಕೆ
Recommended Video

ಬೆಂಗಳೂರು, ಏ.3: ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿದೆ. ಮಂಡ್ಯದಲ್ಲೂ ಚುನಾವಣಾ ಚಟುವಟಿಕೆ ಗರಿಗೆದರಿದೆ. ಅದರ ಜೊತೆಗೆ ಆರೋಪ ಪ್ರತ್ಯಾರೋಪಗಳು ಹೆಚ್ಚಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇದೀಗ ಸದ್ಯಕ್ಕೆ ಮಂಡ್ಯವೇ ಉಳಿದೆಲ್ಲಾ ಕ್ಷೇತ್ರಗಳಿಗಿಂತ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. ಅದರಲ್ಲೂ ಸುಮಲತಾ ಅಂಬರೀಶ್‌ಗೆ ನಟರಾದ ಯಶ್, ದರ್ಶನ್ ಅವರಿಂದ ಬೆಂಬಲ ದೊರೆತ ಮೇಲಂತೂ ಇನ್ನೂ ಹೆಚ್ಚಾಗಿದೆ.
ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಹಿಂದೆ ಅವರಿಬ್ಬರಿಗೆ ಜೋಡೆತ್ತುಗಳು ಎಂದು ಕರೆದಿದ್ದರು. ಇದೀಗ ಛತ್ರಿ ಬಿಟ್ಟು ಬಿಸಿಲಿಗೆ ಬಂದಿದ್ದಾರೆ ಈಗಲಾದರೂ ರೈತರ ಕಷ್ಟ ಏನೆಂದು ತಿಳಿಯಲಿ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ನಿತ್ಯ ಛತ್ರಿ ನೆರಳಲ್ಲಿ ಶೂಟಿಂಗ್ ಮಾಡೋರು ಅಪರೂಪಕ್ಕೆ ಬಿಸಿಲಿಗೆ ಬಂದಿದ್ದಾರೆ. ಮಾಡಲಿ ಬಿಡಿ ಕಷ್ಟ ಏನು ಅನ್ನೋದು ಗೊತ್ತಾಗಲಿ ಎಂದು ವ್ಯಂಗ್ಯವಾಡಿದ್ದಾರೆ. ಹಾಸನದಲ್ಲಿ ಸಹೋದರನ ಪುತ್ರ ಪ್ರಜ್ವಲ್ ರೇವಣ್ಣ ಪರ ಚುನಾವಣಾ ಪ್ರಚಾರ ನಡೆಸಿದ ಸಿಎಂ ಈ ವೇಳೆ ದರ್ಶನ್ ಮತ್ತು ಯಶ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ದರ್ಶನ್ ಮತ್ತು ಯಶ್ ಪ್ರಚಾರ ಜೋರಾಗಿ ನಡೆದಿದೆಯಲ್ಲ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಿತ್ಯ ಅಸಿಸ್ಟೆಂಟ್ಗಳ ಛತ್ರಿ ನೆರಳಲ್ಲಿ ಆರಾಂ ಆಗಿ ಶೂಟಿಂಗ್ ಮಾಡಿಕೊಂಡು ಇರುತ್ತಿದ್ದರು. ಈಗ ಬಿಸಿಲಿಗೆ ಬಂದಿದ್ದಾರೆ. ಬಿಸಿಲಿನಲ್ಲಿ ಸ್ವಲ್ಪ ಸುತ್ತಾಡಲಿ, ಅವಾಗ ರೈತರ ಕಷ್ಟ ಅವರಿಗೆ ಅರ್ಥ ಆಗುತ್ತದೆ ಎಂದು ವ್ಯಂಗ್ಯವಾಡಿದರು.












Click it and Unblock the Notifications