ಬಿಎಸ್‌ವೈ ಮೊದಲ ದಿನದ ಆಡಳಿತದ ಬಗ್ಗೆ ಎಚ್‌ಡಿಕೆ ಅಭಿಪ್ರಾಯ ಇದು

ಬೆಂಗಳೂರು, ಮೇ 17: ಬಿ.ಎಸ್.ಯಡಿಯೂರಪ್ಪ ಅವರು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದ ರೇಸಿನಲ್ಲಿರುವ ಕುಮಾರಸ್ವಾಮಿ ಅವರು ಬಿಎಸ್‌ವೈ ಅವರ ಮೊದಲ ದಿನದ ಮು.ಮಂತ್ರಿ ಕಾರ್ಯದ ಬಗ್ಗೆ ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ 5 ಜನ ಐಪಿಎಸ್ ಅಧಿಕಾರಿಗಳನ್ನು, 2 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದನ್ನು ಟೀಕಿಸಿರುವ ಅವರು ಅಧಿಕಾರದಲ್ಲಿದ್ದರೇ ಇದೇ ಮುಂದುವರೆಯಲಿದೆ ಎಂದಿದ್ದಾರೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ನಂತರ ಮಾತನಾಡುತ್ತಿರುವ ರೀತಿ, ವರ್ತಿಸುತ್ತಿರುವ ರೀತಿ ಆತಂಕ ಉಂಟುಮಾಡಿದೆ ಎಂದಿರುವ ಕುಮಾರಸ್ವಾಮಿ, ಬಹುಮತ ಇಲ್ಲದಿದ್ದರೂ ಸಾಲಮನ್ನಾ ಮತ್ತಿತರೆ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿಯ ನಡೆಗಳು ನಗು ಉಕ್ಕಿಸುತ್ತಿವೆ ಎಂದಿದ್ದಾರೆ.

Kumaraswamy reaction about B S Yeddyurappas CM oath

ಜೆಡಿಎಸ್‌ನ ಎಲ್ಲಾ 38 ಶಾಸಕರು ನನ್ನ ಜೊತೆಗಿದ್ದಾರೆ ಎಂದಿರುವ ಅವರು, ನಮ್ಮ ಶಾಸಕರ ಭದ್ರತೆ ನನ್ನ ಜವಾಬ್ದಾರಿ ಹಾಗಾಗಿ ಅವರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ಈ ಬಗ್ಗೆ ಮಾತನಾಡಿದ್ದು, ಬಿಜೆಪಿ ಪಕ್ಷವು 'ಕುದುರೆ ವ್ಯಾಪಾರ'ಕ್ಕೆ ಮುಂದಾಗಿದ್ದು ಇದು ಪ್ರಜಾಪ್ರಭುತ್ವ ನೀತಿಗಳಿಗೆ ವಿರುದ್ಧವಾಗಿದೆ. ಯಾವ ಶಾಸಕರೂ ಅವರ ಆಮೀಷಗಳಿಗೆ ಬಲಿ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+