ಶಾಸಕರ ಭವನದ ಕಟ್ಟಡದಿಂದ ಬಿದ್ದು ಕಂಡಕ್ಟರ್ ಅನುಮಾನಾಸ್ಪದ ಸಾವು
ಬೆಂಗಳೂರು, ಏ.15: ಶಾಸಕರ ಭವನದ ಕಟ್ಟಡದಿಂದ ಬಿದ್ದು ಕೆಎಸ್‌ಆರ್‌ಟಿಸಿ ಕಂಡಕ್ಟರ್ ಒಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎನ್ನುವ ಕುರಿತು ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ, ಮಾವಳ್ಳಿ ನಿವಾಸಿ ಶಿವಶಂಕರ್(55) ಮೃತರು. ಭಾನುವಾರ ಮಧ್ಯಾಹ್ನ 2.30ರ ವೇಳೆಗೆ ಘಟನೆ ನಡೆದಿದೆ.
ಊಟ ಮುಗಿಸಿದ ಬಳಿಕ ಲಿಫ್ಟ್ ಮೂಲಕ ಐದನೇ ಮಹಡಿಗೆ ತೆರಳಿದ್ದ ಶಿವಶಂಕರ್ ಕೆಲವೇ ನಿಮಷಗಳಲ್ಲಿ ಅಲ್ಲಿಂದ ಬಿದ್ದಿದ್ದಾರೆ.

ಗಂಭೀರ ಗಾಯಗಳಾಗಿದ್ದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ದು ಕೇಳಿ ಶಾಸಕರ ಭವನ ಸಿಬ್ಬಂದಿಗಳೆಲ್ಲಾ ಎಲ್ಲಿಗೆ ಓಡಿ ಬಂದರು. ಅಷ್ಟೊತ್ತಿಗಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ವಿಧಾನಸೌಧ ಠಾಣೆಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಶಂಕರ್ ಪ್ರತಿ ನಿತ್ಯ ಮಧ್ಯಾಹ್ನ ಶಾಸಕರ ಭವನದಲ್ಲಿರುವ ಕೆಎಸ್‌ಆರ್‌ಟಿಸಿ ಕಚೇರಿಗೆ ಟಿಕೆಟ್ ಹಣವನ್ನು ನೋಂದಣಿ ಮಾಡಲು ಬರುತ್ತಿದ್ದರು.












Click it and Unblock the Notifications