ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸಾಪ ಅಧ್ಯಕ್ಷರ ಅವಧಿ ವಿಸ್ತರಣೆ: ಕಾನೂನು ಹೋರಾಟ ಮುಂದುವರಿಕೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 29: ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರು ಸೇರಿ ಕಾರ್ಯಕಾರಿ ಸಮಿತಿ ಅವಧಿ ಹೆಚ್ಚಳದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಆಡಳಿತಾವಧಿಯನ್ನು ,ಮೂರರಿಂದ ಐದು ವರ್ಷಕ್ಕೆ ಹೆಚ್ಚಿಸುವ ಸಂಬಂಧ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

ಕುಂದಾಪುರದ ಕೋಟದಲ್ಲಿ ಮಾರ್ಚ್ 15ರಂದು ಪರಿಷತ್‌ನ ವಿಶೇಷ ಸಕಲ ಸದಸ್ಯರ ಸಭೆಯಲ್ಲಿ ಕಾನೂನು ತಜ್ಞರ ಹಾಗೂ ಅನುಭವಿಗಳ ಸಲಹೆ, ಮಾರ್ಗದರ್ಶನದ ಮೇರೆಗೆ ಆಡಳಿತಾವಧಿಯನ್ನು ಹೆಚ್ಚಿಸುವ ಸಂಬಂಧ ನಿರ್ಣಯ ಕೈಗೊಳ್ಳಲಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅವಧಿ 5 ವರ್ಷಕ್ಕೆ ವಿಸ್ತರಣೆ ಇಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅವಧಿ 5 ವರ್ಷಕ್ಕೆ ವಿಸ್ತರಣೆ ಇಲ್ಲ

ಕನ್ನಡ ಸಾಹಿತ್ಯ ಪರಿಷತ್ ನಿಬಂಧನೆಗಳ ಪ್ರಕಾರ ಕಾರ್ಯಕಾರಿ ಸಮಿತಿ ತೆಗೆದುಕೊಂಡ ನಿಬಂಧನೆ ಆಧಾರದ ಮೇಲೆ ಶೇ.99ಕ್ಕೂ ಹೆಚ್ಚು ಮತಗಳ ಹಿನ್ನೆಲೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿತ್ತು.

KSP decides to continue legal battle for extension of executive committee tenure

ಆದರೆ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿಗಳು ಈ ನಿರ್ಣಯವನ್ನು ತಿರಸ್ಕರಿಸಿದ್ದರು. ಈ ವಿಚಾರವನ್ನು ಕಾರ್ಯಕಾರಿ ಸಮಿತಿ ಸಭೆಯ ಮುಂದಿಟ್ಟು ಸದಸ್ಯರು ಯಾವ ತೀರ್ಮಾನ ಕೈಗೊಂಡರೆ ಅದರಂತೆ ಮುನ್ನಡೆಯಲು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ನಿರ್ಧರಿಸಿದ್ದರು.

ಅದರಂತೆ ಇದೀಗ ಸಭೆಯಲ್ಲಿ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಎಷ್ಟು ವರ್ಷಗಳ ಕಾಲ ಸಮಿತಿ ಆಡಳಿತಾವಧಿ ಹೆಚ್ಚಳವಾಗುತ್ತದೆ ಎಂದು ಕಾದು ನೋಡಬೇಕಿದೆ.

English summary
Kannada Sahithya Parishath has decided continue its legal battle to seek extension of executive committee tenure from three years to five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X