ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೋಲೆಕ್ಸ್ ಪ್ರಶಸ್ತಿಯ ಹಾದಿಯಲ್ಲಿ ವನ್ಯಜೀವಿ ತಜ್ಞೆ ಕೃತಿ ಕಾರಂತ್

|
Google Oneindia Kannada News

ವನ್ಯ ಪ್ರಪಂಚದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಪರಿಸರ ತಜ್ಞೆ ಕೃತಿ ಕಾರಂತ್ ಅವರು 2019 ನೇ ಸಾಲಿನ ರೋಲೆಕ್ಸ್ ಪ್ರಶಸ್ತಿಗಾಗಿ ಆಯ್ಕೆಯಾದ ಹತ್ತು ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ.

ವೈಲ್ಡ್ ಸೇವೆ ಮತ್ತು ವೈಲ್ಡ್ ಶಾಲೆ ಎಂಬ ಯೋಜನೆಗಳ ಮೂಲಕ ವನ್ಯ ಬದುಕಿನ ಬಗ್ಗೆ ಅರಿವು ಮೂಡಿಸುವ ಮತ್ತು ಮತ್ತು ಚಿಕ್ಕ ಮಕ್ಕಳಲ್ಲೂ ವನ್ಯ ಪ್ರಾಣಿ, ಕಾಡುಗಳ ಬಗ್ಗೆ ಪ್ರೀತಿ ಬೆಳೆಸುವ ಕಾರ್ಯವನ್ನು ಕೃತಿ ಮಾಡುತ್ತ ಬಂದಿದ್ದಾರೆ.

ಭಾರತದ ಈ ಹುಡುಗಿಗೆ ಪ್ರವೇಶ ನೀಡಲು ಅಮೆರಿಕ ವಿವಿಯಲ್ಲಿ ಪೈಪೋಟಿ!ಭಾರತದ ಈ ಹುಡುಗಿಗೆ ಪ್ರವೇಶ ನೀಡಲು ಅಮೆರಿಕ ವಿವಿಯಲ್ಲಿ ಪೈಪೋಟಿ!

ಅಂದಹಾಗೆ ಕೀರ್ತಿ ಅವರು ಪ್ರಖ್ಯಾತ ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್ ಅವರ ಪುತ್ರಿ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಶಿವರಾಮ ಕಾರಂತ್ ಅವರ ಮೊಮ್ಮಗಳು.

Krithi Karanth, a conservation biologist chosen as a finalist for 2019 Rolex Award

ವನ್ಯ ಮೃಗಗಳ ದಾಳಿಗೆ ತುತ್ತಾಗುವ ಸುತ್ತ ಮುತ್ತಲ ಊರುಗಳಲ್ಲಿ ತಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಇವರು ತಮ್ಮ ಯೋಜನೆಗಳ ಮೂಲಕ ವನ್ಯಜೀವಿಗಳೊಂದಿಗೆ ಸಂಘರ್ಷಕ್ಕೆ ತುತ್ತಾದ 14000 ಕ್ಕೂ ಹೆಚ್ಚು ಜನರಿಗೆ ಸರ್ಕಾರದಿಂದ ಪರಿಹಾರ ಸಿಗುವಂತೆ ಮಾಡಿದ್ದಾರೆ. ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಇಂಗಿತ ಅವರದು.

ಬೆಂಗಳೂರಿನ ಅಂಜನಾಕ್ಷಿ ವಾಕ್ಚಾತುರ್ಯಕ್ಕೆ ಬಾಗಿ ನಮಿಸಿದ ಮೋದಿಬೆಂಗಳೂರಿನ ಅಂಜನಾಕ್ಷಿ ವಾಕ್ಚಾತುರ್ಯಕ್ಕೆ ಬಾಗಿ ನಮಿಸಿದ ಮೋದಿ

ಕಳೆದ ನಲವತ್ತು ವರ್ಷಗಳಿಂದ ಈ ಪ್ರಶಸ್ತಿಯನ್ನು ರೋಲೆಕ್ಸ್ ಕೊಡಮಾಡುತ್ತಿದ್ದು, ಇದುವರೆಗೂ 140 ಜನರಿಗೆ ಈ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ ಹತ್ತು ಭಾರತೀಯರು ಈ ಪ್ರಶಸ್ತಿ ಪಡೆದಿದ್ದಾರೆ. ಯಾವುದೇ ಒಂದು ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮೆರೆದು ಈ ಜಗತ್ತನ್ನು ಮತ್ತಷ್ಟು ಸುಂದರವಾಗಿಸಲು ಹೊರಟವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

English summary
Krithi Karanth is a conservation biologist based in Bangalore, India. She has been chosen as a finalist for 2019 Rolex Award for enterprises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X